Ranveer Singh: ಮತ್ತೆ ಸದ್ದು ಮಾಡುತ್ತಿವೆ ರಣವೀರ್ ಸಿಂಗ್ ವಿವಾದಾತ್ಮಕ ನಗ್ನ ಫೋಟೋಗಳು!

ಬಾಲಿವುಡ್ ನಟ ರಣವೀರ್ ಸಿಂಗ್ ಅವರ ನಗ್ನ ಫೋಟೋಗಳು ಈ ಹಿಂದೆ ಭಾರಿ ಹಲ್‌ಚಲ್ ಎಬ್ಬಿಸಿದ್ದವು. ಫೋಟೋಗಳಿಗೆ ಪಾಸಿಟಿವ್ ಮತ್ತು ನೆಗೆಟಿವ್ ಕಾಮೆಂಟ್‌ಗಳು ಹರಿದು ಬಂದಿದ್ದವು. ಕೆಲವು ಕಡೆಗಳಲ್ಲಿ ಪೊಲೀಸ್ ದೂರು ಕೂಡ ದಾಖಲಾಗಿತ್ತು. ಈಗ್ಯಾಕೆ ಈ ವಿಷಯ ಅಂತಿದ್ದಿರಾ??? ಮತ್ತೆ ಈ ಫೋಟೋಗಳು ಸದ್ದು ಮಾಡುತ್ತಿವೆ.

ಎಸ್.. ಅಮೇರಿಕನ್ ಗಾಯಕ, ಗೀತರಚನೆಕಾರ ಸುಫ್ಜಾನ್ ಸ್ಟೀವನ್ಸ್ ಅವರ ಹೊಸ ಆಲ್ಬಂ 'ಜಾವೆಲಿನ್' ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಇದು ಬ್ರೇಕಪ್ ಆಲ್ಬಮ್ ಎಂದು ವಿವರಿಸಲಾಗಿದೆ. ಆದರೆ, ಭಾರತೀಯ ಅಭಿಮಾನಿಗಳ ಗಮನ ಸೆಳೆಯುತ್ತಿರುವುದು ಯೂಟ್ಯೂಬ್‌ನಲ್ಲಿ ಆಲ್ಬಂನ ಕವರ್ ಪೇಜ್. ಏಕೆಂದರೆ, ಕಳೆದ ವರ್ಷ ಪೇಪರ್ ಮ್ಯಾಗಜೀನ್‌ಗಾಗಿ ರಣವೀರ್ ಸಿಂಗ್ ಅವರ ನಗ್ನ ಫೋಟೋಶೂಟ್‌ನ ಚಿತ್ರವನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ.

Actor Ranveer Singhs controversial nude photos were trending again!

ಸುಫ್ಜಾನ್ ಸ್ಟೀವನ್ಸ್ ಆಲ್ಬಂನಲ್ಲಿ ರಣವೀರ್ ಅವರ ನಗ್ನ ಚಿತ್ರ!

ಅಂತರಾಷ್ಟ್ರೀಯ ನಿಯತಕಾಲಿಕೆಗಾಗಿ ನಗ್ನ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ರಣವೀರ್ ಸಿಂಗ್ ಇತಿಹಾಸವನ್ನು ನಿರ್ಮಿಸಿದ್ದರು. ಇನ್ನು, ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಅವರ ವಿರುದ್ಧ ಅನೇಕ ದೂರುಗಳು ದಾಖಲಾಯಿತು. ಇದರ ಬೆನ್ನಲ್ಲೆ ಸುಫ್ಜಾನ್ ಸ್ಟೀವನ್ಸ್ ಅವರ ಹೊಸ ಆಲ್ಬಂನಲ್ಲಿ ಹಾಡು ಶುರುವಾಗುವುದೇ ರಣವೀರ್ ಸಿಂಗ್ ಅವರ ನಗ್ನ ಫೋಟೋ ಮೂಲಕ. ಹೀಗಾಗಿ ಮತ್ತೆ ಈ ಫೋಟೋಗಳು ವೈರಲ್ ಆಗುತ್ತಿವೆ.

ಆಲ್ಬಮ್‌ನ ಕವರ್‌ನಿಂದ ರಣವೀರ್‌ನ ಸ್ಕ್ರೀನ್‌ಶಾಟ್ ಅನ್ನು ಅನೇಕರು ಹಂಚಿಕೊಂಡಿದ್ದು, ಸುಫ್ಜಾನ್ ಸ್ಟೀವನ್ಸ್ ಆಲ್ಬಂನಲ್ಲಿ ರಣವೀಸ್ ಸಿಂಗ್ ಫೋಟೋಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದು ತೀರಾ ಅನಿರೀಕ್ಷಿತ ಎಂದು ಹೇಳಿಕೊಂಡಿದ್ದಾರೆ. ಕಳೆದ ವರ್ಷದಕ್ಕಿಂತ ಭಿನ್ನವಾಗಿ ಹಲವು ಮಂದಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

Actor Ranveer Singhs controversial nude photos were trending again!

ವಿವಾದಕ್ಕೆ ಕಾರಣವಾಗಿದ್ದ ರಣವೀರ್ ಸಿಂಗ್ ನಗ್ನ ಫೋಟೋಶೂಟ್

ಕಳೆದ ವರ್ಷ, ಪೇಪರ್ ಮ್ಯಾಗಜೀನ್‌ಗಾಗಿ ರಣ್‌ವೀರ್ ಸಿಂಗ್ ಅವರ ಫೋಟೋಗಳು ಇಂಟರ್ನೆಟ್ ಅನ್ನು ಕೆಲವು ಗಂಟೆಗಳ ಕಾಲ ಅಲ್ಲಾಡಿಸಿತ್ತು. ಮೊದಲ ಬಾರಿಗೆ ನಟನನ್ನು ಹೀಗೆ ನೋಡಿ ಜನ ಆಶ್ಚರ್ಯ ವ್ಯಕ್ತಪಡಿಸಿದ್ದರು. ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ವೈರಲ್ ಆಗಿದ್ದವು.

ಪೇಪರ್ ಮ್ಯಾಗಜೀನ್‌ಗಾಗಿ ನಟ ರಣವೀರ್ ಸಿಂಗ್ ಬೆತ್ತಲೆ ಫೋಟೋಶೂಟ್ ಮಾಡಿಸಲು ಒಂದು ಕಾರಣವಿತ್ತು. 1972 ರಲ್ಲಿ ಕಾಸ್ಮೋಪಾಲಿಟನ್ ಮ್ಯಾಗಜೀನ್‌ಗಾಗಿ ಚಿತ್ರೀಕರಣಕ್ಕಾಗಿ ನಗ್ನವಾಗಿ ಹೋದ 70 ರ ಪಾಪ್ ಐಕಾನ್ ಬರ್ಟ್ ರೆನಾಲ್ಡ್‌ಗೆ ಗೌರವ ಸಲ್ಲಿಸಲು ಈ ರೀತಿ ಫೋಟೋಶೂಟ್ ಮಾಡಲಾಗಿತ್ತು.

ನಂತರ, ತನ್ನ ನಗ್ನ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆರೋಪದಲ್ಲಿ ಮುಂಬೈ ಪೊಲೀಸರು ರಣವೀರ್ ಸಿಂಗ್ ಅವರನ್ನು ವಿಚಾರಣೆಗೆ ಕರೆದರು. ಆಗಸ್ಟ್ 2022 ರಲ್ಲಿ ಈ ಪ್ರಕರಣದ ವಿಚಾರಣೆಯ ಸಮಯದಲ್ಲಿ ಮುಂಬೈ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಪತ್ರಿಕೆ ಹಂಚಿಕೊಂಡಿರುವ ತನ್ನ ಫೋಟೋಗಳಲ್ಲಿ ಒಂದನ್ನು ಮಾರ್ಫ್ ಮಾಡಲಾಗಿದೆ ಎಂದು ಹೇಳಿದ್ದರು.

More from Filmibeat

English summary
Actor Ranveer Singh's controversial nude photos were trending again!.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X