Rashmika Mandanna: ಅನಿಮಲ್ ಸಿನಿಮಾ ಫಸ್ಟ್ ಲುಕ್ ಪೋಸ್ಟರ್, ಸೀರೆಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ!
ಪರ ಭಾಷೆಗಳಲ್ಲಿ ಸಕತ್ ಆಫರ್‌ಗಳನ್ನು ಬಾಚಿಕೊಳ್ಳುತ್ತಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ತಮ್ಮ ಕೆರಿಯರ್ ಕಟ್ಟಿಕೊಳ್ಳುತ್ತಿದ್ದಾರೆ. ಅವರು ತಮ್ಮ ಮುಂಬರುವ ಚಿತ್ರ 'ಅನಿಮಲ್' ಫಸ್ಟ್ ಲುಕ್‌ನ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಹೊಸ ಪೋಸ್ಟರ್‌ನಲ್ಲಿ ತಮ್ಮ ಪಾತ್ರದ ಪರಿಚಯ ಮಾಡಿಸಿದ್ದಾರೆ.
ರಶ್ಮಿಕಾ ಮಂದಣ್ಣ ಫಸ್ಟ್ ಲುಕ್ ಪೋಸ್ಟರ್
ರಶ್ಮಿಕಾ ಮಂದಣ್ಣ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ಗೀತಾಂಜಲಿಯಾಗಿ ಕಾಣಿಸಿಕೊಂಡಿದ್ದಾರೆ. ತಲೆ ಬಗ್ಗಿಸಿ ನೆಲ ನೋಡಿ ನಗುತ್ತಿದ್ದಾರೆ. ಬಿಳಿ ಮತ್ತು ಮರೂನ್ ಬಣ್ಣದ ಚೆಕ್ ಸೀರೆ ಮತ್ತು ಮ್ಯಾಚಿಂಗ್ ಬ್ಲೌಸ್ ಧರಿಸಿದ್ದಾರೆ. ಈ ಪೋಸ್ಟ್‌ಗೆ "ನಿಮ್ಮ ಗೀತಾಂಜಲಿ" ಎಂದು ರೆಡ್ ಹಾರ್ಟ್ ಎಮೋಜಿ ಹಾಕಿ ಶೀರ್ಷಿಕೆ ನೀಡಿದ್ದಾರೆ. ಪೋಸ್ಟ್‌ಗೆ ಅಭಿಮಾನಿಗಳು, ಚಿತ್ರದ ನಟ ನಟಿಯರು ಪ್ರತಿಕ್ರಿಯಿಸಿದ್ದಾರೆ.

ಅಭಿಮಾನಿಯೊಬ್ಬರು, "ಗೀತಾಂಜಲಿಯು ಆಸಕ್ತಿದಾಯಕ ಪಾತ್ರದ ಹೆಸರಿನಂತೆ ತೋರುತ್ತದೆ" ಎಂದು ಬರೆದಿದ್ದಾರೆ. 'ಇಡೀ ಚಿತ್ರರಂಗದಲ್ಲಿ ನಿಮಗಿಂತ ಮಿಗಿಲಾದವರು ಯಾರೂ ಇಲ್ಲ, ನೀನೇ ಅತೀ ಸುಂದರಿ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದರ ಜೊತೆಗೆ ಸಾಕಷ್ಟು ಮಂದಿ ರೆಡ್ ಹಾರ್ಟ್ ಕಾಮೆಂಟ್ಸ್ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ಪೋಸ್ಟರ್ ನೋಡಿದರೇ ಅನಿಮಲ್ ಸಿನಿಮಾದಲ್ಲಿ ಅವರು ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಿಸುತ್ತಿದೆ. ಸೀರೆ, ಕೊರಳಲ್ಲಿ ಮಂಗಳಸೂತ್ರ, ಹಣೆಯಲ್ಲಿ ಬೊಟ್ಟು ಇಟ್ಟು ಪಕ್ಕಾ ಗೃಹಣಿ ತರ ಕಾಣಿಸಿಕೊಂಡಿದ್ದಾರೆ.
ಬಲ್ಬೀರ್ ಸಿಂಗ್ ಪಾತ್ರದಲ್ಲಿ ಅನಿಲ್ ಕಪೂರ್
ಇತ್ತೀಚೆಗೆ, ಚಿತ್ರತಂಡವು ನಟ ಅನಿಲ್ ಕಪೂರ್ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿತು. ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. "ಅನಿಮಲ್ ಕಾ ಬಾಪ್...ಬಲ್ಬೀರ್ ಸಿಂಗ್!" ಪೋಸ್ಟರ್‌ನಲ್ಲಿ ಅನಿಲ್ ಕಪೂರ್ ಕುರ್ಚಿಯ ಮೇಲೆ ಎದೆಗೆ ಬ್ಯಾಂಡೇಜ್ ಹಾಕಿಕೊಂಡು ಮುಖದಲ್ಲಿ ಗಂಭೀರ ಭಾವದಿಂದ ಕುಳಿತಿದ್ದರು. ಅವರು ಬಲ್ಬೀರ್ ಸಿಂಗ್ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಅನಿಮಲ್
ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದ 'ಅನಿಮಲ್' ಚಿತ್ರದಲ್ಲಿ ರಣಬೀರ್ ಕಪೂರ್, ಟ್ರಿಪ್ತಿ ಡಿಮ್ರಿ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಣಬೀರ್ ಕಪೂರ್ ಹುಟ್ಟುಹಬ್ಬದಂದು ಸೆಪ್ಟೆಂಬರ್ 28 ರಂದು ಚಿತ್ರದ ಟೀಸರ್ ಅನ್ನು ಚಿತ್ರತಂಡ ಅನಾವರಣಗೊಳಿಸಲಿದೆ.
ಇತ್ತೀಚೆಗಷ್ಟೇ ಅನಿಮಲ್ ಚಿತ್ರತಂಡ ರಣಬೀರ್ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಕೈಬಿಟ್ಟಿತ್ತು. ಹೊಸ ಪೋಸ್ಟರ್‌ನಲ್ಲಿ ರಣಬೀರ್ ನೀಲಿ ಬಣ್ಣದ ಸೂಟ್‌ನಲ್ಲಿ ಲೈಟರ್ ಹಿಡಿದು ಸಿಗರೇಟ್ ಸೇದುತ್ತಿರುವುದನ್ನು ತೋರಿಸಲಾಗಿದೆ. ಸಿನಿಮಾಗಾಗಿ ಅವರು ಉದ್ದನೆಯ ಕೂದಲು ಬಿಟ್ಟಿದ್ದಾರೆ.
ಅನಿಮಲ್ ಟೀಸರ್
ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೂ ಮೊದಲು, ನಿರ್ಮಾಪಕರು ಚಿತ್ರದ ಪ್ರಿ-ಟೀಸರ್ ಅನ್ನು ಬಿಡುಗಡೆ ಮಾಡಿದ್ದರು. ಪ್ರೀ ಟೀಸರ್‌ನಲ್ಲಿ, ಹಲವಾರು ಜನರು ತಲೆಬುರುಡೆಯ ಮುಖವಾಡಗಳು, ಬಿಳಿ ಶರ್ಟ್‌ಗಳು, ಕಪ್ಪು ವೇಸ್ಟ್‌ಕೋಟ್‌ಗಳು ಮತ್ತು ಟೈಗಳನ್ನು ಧರಿಸಿ ಕೊಡಲಿಗಳೊಂದಿಗೆ ಕಾಣಿಸಿಕೊಂಡಿದ್ದರು. ಇವರ ಜೊತೆಗೆ ರಣಬೀರ್ ಕಪೂರ್ ಕೈಯಲ್ಲಿ ಕೊಡಲಿ ಹಿಡಿದು ಯುದ್ಧಕ್ಕೆ ಸಿದ್ದರಾಗಿದ್ದರು.
ಟೀಸರ್‌ನಲ್ಲಿ ನಟನ ಮುಖದ ಒಂದು ಭಾಗವನ್ನು ಮಾತ್ರ ತೋರಿಸಲಾಗಿದೆ. ಆದರೆ ಅವರ ಮುಖದ ಮೇಲೆ ಕೆಲವು ಗಾಯಗಳು ಕಾಣಿಸಿಕೊಂಡಿವೆ. ಅನಿಮಲ್ ಸಿನಿಮಾ ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಐದು ಭಾಷೆಗಳಲ್ಲಿ ಡಿಸೆಂಬರ್ 1 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.


Click it and Unblock the Notifications











