ಅಸಭ್ಯ ವಿಡಿಯೋ ಕಳಿಸಲು ಹೇಳಿದ ನಿರ್ದೇಶಕ: ಸಿಡಿದೆದ್ದ ನಟಿಯ ಅಣ್ಣ
ಮೀ ಟೂ ಅಭಿಯಾನ, ಮಹಿಳಾ ಸಂರಕ್ಷಣೆ ಸಂಸ್ಥೆಗಳು, ಕಾನೂನುಗಳು ಎಷ್ಟೇ ಬಂದರು ಸಿನಿಮಾರಂಗದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ ಕಡಿಮೆ ಆಗುತ್ತಿಲ್ಲ. ಅತ್ಯಾಚಾರ ಪ್ರಕಾರಣಗಳು, ಲೈಂಗಿಕ ದೌರ್ಜನ್ಯ, ಶೋಷಣೆಯ ಪ್ರಕರಣಗಳು ವರದಿ ಆಗುತ್ತಲೇ ಇದೆ.
ಬಾಲಿವುಡ್‌ನಲ್ಲಿ ಕಾಸ್ಟಿಂಗ್ ನಿರ್ದೇಶಕನೊಬ್ಬ ಯುವ ನಟಿಗೆ ಅಸಭ್ಯ ವಿಡಿಯೋ ಮಾಡಿ ಅದನ್ನು ಕಳಿಸುವಂತೆ ಹೇಳಿದ್ದಾನೆ. ಈ ವಿಷಯ ಆಕೆಯ ಅಣ್ಣನಿಗೆ ಗೊತ್ತಾಗಿ ಆತ ಕಾಸ್ಟಿಂಗ್ ಡೈರೆಕ್ಟರ್‌ನ ನಿಜ ಮುಖವನ್ನು ಸಾಮಾಜಿಕ ಜಾಲತಾಣದಲ್ಲಿ ಬಯಲು ಮಾಡಿದ್ದಾನೆ.
'ಜೋದಾ ಅಕ್ಬರ್', 'ಇಷ್ಕ್ ಶುಭಾನ್ ಅಲ್ಹಾ' ಸಿನಿಮಾಗಳು ಸೇರಿದಂತೆ ಹಲವು ಹಿಂದಿ ಧಾರಾವಾಹಿಗಳಲ್ಲಿ ನಟಿಸಿರುವ ರವಿ ಭಾಟಿಯಾ ತಂಗಿಗೆ ಈ ಕೆಟ್ಟ ಅನುಭವ ಆಗಿದೆ.
ರವಿ ಭಾಟಿಯಾ ಸೋದರಿ ಸಹ ಸಿನಿಮಾ ಉದ್ಯಮದಲ್ಲಿ ಪ್ರವೇಶಿಸಲು ಇಚ್ಛಿಸಿ ಆಡಿಷನ್‌ಗಳನ್ನು ಕೊಟ್ಟಿದ್ದರು. ಆಡಿಷನ್ ಪಡೆದಿದ್ದ ಕಾಸ್ಟಿಂಗ್ ಡೈರೆಕ್ಟರ್, ಆಕೆಯ ಚಿತ್ರಗಳನ್ನು ಕಳಿಸುವಂತೆ ಕೇಳಿದ್ದಾನೆ ಅಂತೆಯೇ ಯುವ ನಟಿ ಚಿತ್ರಗಳನ್ನು ಕಳಿಸಿದ್ದಾರೆ. ನಂತರ ಮತ್ತೆ ಸಂದೇಶ ಕಳಿಸಿ, 'ಹಸ್ತ ಮೈಥುನ ಮಾಡಿಕೊಳ್ಳುತ್ತಿರುವ ವಿಡಿಯೋ ಕಳಿಸು' ಎಂದು ಕೇಳಿದ್ದಾನೆ.

ಫೇಸ್‌ಬುಕ್‌ನಲ್ಲಿ ಆತನ ಬಣ್ಣ ಬಯಲು ಮಾಡಿದ ರವಿ
ಕಾಸ್ಟಿಂಗ್ ಡೈರೆಕ್ಟರ್‌ನ ಸಂದೇಶ ಕಂಡು ಗಾಬರಿಯಾದ ಯುವ ನಟಿ ಕೂಡಲೇ ಅಣ್ಣ ರವಿ ಭಾಟಿಯಾ ಅನ್ನು ಸಂಪರ್ಕಿಸಿದ್ದಾರೆ. ರವಿ ಭಾಟಿಯಾ ಆ ಕಾಸ್ಟಿಂಗ್ ಡೈರೆಕ್ಟರ್‌ಗೆ ಫೋನ್ ಮಾಡಿ ನಾಜೂಕಿನಿಂದ ಆತನ ಇ-ಮೇಲ್, ಫೇಸ್‌ಬುಕ್ ಐಡಿಗಳನ್ನು ಪಡೆದಿದ್ದಾರೆ. ನಂತರ ಆತನ ಫೇಸ್‌ಬುಕ್ ಖಾತೆಗೆ ಟ್ಯಾಗ್ ಮಾಡಿ ಆತ ಮಾಡಿರುವ ಅನಾಚಾರದ ಸುದ್ದಿಯನ್ನು ಜಗಜ್ಜಾಹೀರು ಮಾಡಿದ್ದಾರೆ. ಫೇಸ್‌ಬುಕ್ ಪೋಸ್ಟ್‌ನಲ್ಲಿ ಆತ ಕಳಿಸಿದ್ದ ಸಂದೇಶದ ಸ್ಕ್ರೀನ್ ಶಾಟ್ ಸಹ ಲಗತ್ತಿಸಿದ್ದಾರೆ.

ರವಿ ಭಾಟಿಯಾಗೆ ಕರೆ ಮಾಡಿ ಕಣ್ಣೀರು ಹಾಕಿದ್ದಾನೆ
ತನ್ನ ನಿಜ ಮುಖ ಬಯಲಾಗುತ್ತಿದ್ದಂತೆ ರವಿ ಭಾಟಿಯಾಗೆ ಕರೆ ಮಾಡಿದ ಆ ಕಾಸ್ಟಿಂಗ್ ಡೈರೆಕ್ಟರ್ ಕಣ್ಣೀರು ಹಾಕಿ ಕ್ಷಮೆ ಕೋರಿದ್ದಾರೆ. ನನ್ನ ನಿರ್ದೇಶಕ ಹೇಳಿದಂತೆ ನಾನು ಮಾಡಿದ್ದೇನೆ. ಇನ್ನು ಮುಂದೆ ಹೀಗಾಗುವುದಿಲ್ಲ ಎಂದು ಗೋಗರೆದಿದ್ದಾನೆ ಹೀಗೆಂದು ರವಿ ಭಾಟಿಯಾ ಹೇಳಿದ್ದಾರೆ.

ಎಲ್ಲ ಪ್ರೊಡಕ್ಷನ್ ಸಂಸ್ಥೆಗಳಿಗೂ ಕಳಿಸಿದ್ದಾರೆ
ಆದರೆ ಆತನನ್ನು ಚಿತ್ರರಂಗದಿಂದಲೇ ಹೊರಗೆ ಹಾಕಿಸುತ್ತೇನೆ ಎಂದು ಗುಟುರು ಹಾಕಿರುವ ರವಿ ಭಾಟಿಯಾ ಆತನ ಹೆಸರು, ಫೊಟೊಗಳನ್ನು ಎಲ್ಲ ಪ್ರೊಡಕ್ಷನ್ ಸಂಸ್ಥೆಗಳೊಂದಿಗೆ ಹಂಚಿಕೊಂಡಿದ್ದು ಆತ ಮಾಡಿರುವ ಕುಕಾರ್ಯವನ್ನು ತಿಳಿಸಿದ್ದು ಆತನಿಗೆ ಯಾವುದೇ ಕೆಲಸ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.
Recommended Video

ನೀಲಿ ಚಿತ್ರ ತೆಗೆಯುತ್ತಿದ್ದ ಗ್ಯಾಂಗ್ ಅನ್ನು ಬಂಧಿಸಿದ್ದಾರೆ
ಬಾಲಿವುಡ್‌ನಲ್ಲಿ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಯುವ ನಟಿಯರನ್ನು ಅವಶ್ಯಕತೆಗೆ ಬಳಸಿಕೊಳ್ಳುವ ಪ್ರಕರಣಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಸಿನಿಮಾ ಅವಕಾಶ ಹುಡುಕಿ ಬರುವ ನಟಿಯರನ್ನು ಬಳಸಿ ನೀಲಿ ಚಿತ್ರ ತೆಗೆಯುತ್ತಿದ್ದ ದೊಡ್ಡ ಗ್ಯಾಂಗ್ ಒಂದನ್ನು ಇತ್ತೀಚಿಗೆಷ್ಟೆ ಪೊಲೀಸರು ಬಂಧಿಸಿದ್ದಾರೆ.


Click it and Unblock the Notifications











