"ನನ್ನ ತಂದೆ ನನ್ನನ್ನು ಸಾಯಿಸಬೇಕೆಂದಿದ್ದ.. ಆತನ ಕೋಪದಲ್ಲೂ ಅರ್ಥವಿದೆ"; 'ಹೆಬ್ಬುಲಿ' ನಟ

ಚಿತ್ರರಂಗಕ್ಕೆ ಬಂದವರ ಒಬ್ಬೊಬ್ಬರ ಕಥೆ ಒಂದೊಂದು. ದಶಕಗಳ ಹಿಂದೆ ಯಾರಾದರೂ ಚಿತ್ರರಂಗಕ್ಕೆ ಹೋಗ್ತೀನಿ ಅಂದ್ರೆ ಬೇಡ ಎನ್ನುತ್ತಿದ್ದವರೇ ಹೆಚ್ಚು. ಪೋಷಕರು ಅಂತೂ ಮಕ್ಕಳನ್ನು ಬಣ್ಣದಲೋಕಕ್ಕೆ ಕಳುಹಿಸಲು ಒಪ್ಪುತ್ತಿರಲಿಲ್ಲ. ಇದೇ ಕಾರಣಕ್ಕೆ ಕೆಲವರು ತಮ್ಮ ತಮ್ಮ ಊರು ಬಿಟ್ಟು ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್ ಸೇರಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡರು.

ಬಹುಭಾಷಾ ನಟಿ ರವಿ ಕಿಶನ್ ಕನ್ನಡ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಮುಂಬೈನಲ್ಲಿ ಹುಟ್ಟಿ ಬೆಳೆದ ರವಿ ಕಿಶನ್ ಚಿತ್ರರಂಗಕ್ಕೆ ಬರುವುದಕ್ಕೆ ಮನೆಯಲ್ಲಿ ಬಹಳ ವಿರೋಧ ಇತ್ತು. ನನ್ನ ತಂದೆ ನನ್ನನ್ನು ಕೊಂದು ಬಿಡಬೇಕು ಎಂದುಕೊಂಡಿದ್ದರು. ಆದರೆ ಅದನ್ನೆಲ್ಲಾ ಮೀರಿ ತಾವು ಇಂದು ಚಿತ್ರರಂಗದಲ್ಲಿ ಜೀವನ ಸಾಗಿಸುತ್ತಿರುವುದರ ಬಗ್ಗೆ ಅವರು ಮಾತನಾಡಿದ್ದಾರೆ.

Actor Ravi Kishan shocking comments on his relationship with father

"ನಮ್ಮ ತಂದೆಗೆ ಬಹಳ ಕೋಪ. ನನ್ನನ್ನು ಯಾವಾಗಲೂ ಹೊಡೆಯುತ್ತಿದ್ದರು. ನಿಜ ಹೇಳಬೇಕು ಅಂದ್ರೆ ನನ್ನನ್ನು ಕೊಂದೇ ಬಿಡಬೇಕು ಎನ್ನುವಂತಿ ಇರುತ್ತಿತ್ತು ಅವರ ವರ್ತನೆ. ನಮ್ಮ ತಂದೆ ನನ್ನನ್ನು ಕೊಂದೇ ಬಿಡುತ್ತಾರೆ ಎನ್ನುವುದು ನಮ್ಮ ತಾಯಿ ಗೊತ್ತಾಗಿತ್ತು. ತಂದೆ ಪುರೋಹಿತರಾಗಿದ್ದರಿಂದ ಇದಕ್ಕೆಲ್ಲಾ ಯಾವುದಕ್ಕು ಹೇಸುವವರಲ್ಲ ಎಂದು ತಿಳಿದು ನನ್ನನ್ನು ಮನೆಬಿಟ್ಟು ಹೋಗುವಂತೆ ತಾಯಿ ಹೇಳಿದರು" ಎಂದು ರವಿ ಕಿಶನ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

"ತಂದೆ ಬ್ರಾಹ್ಮಣರಾಗಿದ್ದು ಅರ್ಚಕ ವೃತ್ತಿಯಲ್ಲಿದ್ದರು. ನಾನು ಕೃಷಿ ಮಾಡಬೇಕು ಅಥವಾ ಅರ್ಚಕನಾಗಬೇಕು ಅಥವಾ ಸರ್ಕಾರಿ ಕೆಲಸ ಮಾಡಬೇಕೆಂದು ತಂದೆ ಬಯಸಿದ್ದರು. ಒಬ್ಬ ಕಲಾವಿದ ತನ್ನ ಕುಟುಂಬದಲ್ಲಿ ಹುಟ್ಟಬಹುದು ಎಂದು ಅವರು ಎಂದಿಗೂ ಯೋಚಿಸಲಿಲ್ಲ. ಹಾಗಾಗಿ ನಾನು ರಾಮಲೀಲಾದಲ್ಲಿ ಸೀತೆಯ ಪಾತ್ರದಲ್ಲಿ ನಟಿಸುವುದು, ನೃತ್ಯ ಮಾಡುವುದು ಅವರಿಗೆ ಸ್ವಲ್ಪ ಶಾಕ್ ತಂದಿತ್ತು. ಅಂದು ನನಗೆ ಚೆನ್ನಾಗಿ ಹೊಡೆದರು. ಆ ಒದೆ ನನಗೆ ಜೀವನದ ಅರ್ಥವನ್ನು ಕಲಿಸಿದವು. ಹಾಗಾಗಿ ನಾನು ಇವತ್ತು ನಿಮ್ಮ ಮುಂದೆ ನಟನಾಗಿ ಹೀಗೆ ನಿಂತಿದ್ದೇನೆ."

"ನಾನು ನಟನಾದ ನಂತರ ತಂದೆ ತುಂಬಾ ಹೆಮ್ಮೆ ಪಟ್ಟಿದ್ದರು. ಸಾಯುವ ಮುನ್ನವೂ ನನ್ನ ತಂದೆ ನಿನ್ನನ್ನು ನೋಡಿ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಭಾವುಕರಾಗಿದ್ದರು ಎಂದು ರವಿಕಿಶನ್ ಹೇಳಿದ್ದಾರೆ. "ನನಗೆ ದೊಡ್ಡ ನಟನಾಗುವ ಕನಸಿತ್ತು. ಚಿಕ್ಕಂದಿನಿಂದಲೂ ಏನಾದರೂ ಸಾಧಿಸಿ ಸಾಯಬೇಕು ಎನಿಸಿತ್ತು. ಪ್ರತಿಯೊಬ್ಬರು ಯಾವುದೋ ಕಾರಣಕ್ಕೆ ಹುಟ್ಟುತ್ತಾರೆ. ನಾನು ಹುಟ್ಟಿದ ಕಾರಣ ನಾನು ರವಿ ಕಿಶನ್ ಆಗಿದ್ದೇನೆ" ಎಂದಿದ್ದಾರೆ.

Actor Ravi Kishan shocking comments on his relationship with father

'ಪೀತಾಂಬರ್‌' ಎನ್ನುವ ಸಿನಿಮಾ ಮೂಲಕ ರವಿ ಕಿಶನ್ ಬಾಲಿವುಡ್ ಪ್ರವೇಶಿಸಿದರು. 90ರ ದಶಕದ ಆರಂಭದಲ್ಲಿ ಶುರುವಾದ ಅವರ ಸಿನಿಜರ್ನಿ 30 ವರ್ಷಗಳ ಕಾಲ ಸಾಗಿ ಬಂದಿದೆ. ನೂರಾರು ಸಿನಿಮಾಗಳಲ್ಲಿ ಪೋಷಕ ಕಲಾವಿದರಾಗಿ ನಟಿಸಿದ್ದಾರೆ. ಹಿಂದಿ ಮಾತ್ರವಲ್ಲದೇ ತೆಲುಗು, ಭೋಜ್‌ಪುರಿ, ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಕನ್ನಡದಲ್ಲಿ ಸುದೀಪ್ ನಟನೆಯ 'ಹೆಬ್ಬುಲಿ' ಚಿತ್ರದಲ್ಲಿ ಮೊದಲು ರವಿ ಕಿಶನ್ ನಟಿಸಿದ್ದರು. ಬಳಿಕ 'ದ್ರೋಣ', 'ಶಿವಾರ್ಜುನ', 'ರಾಬರ್ಟ್' ಸಿನಿಮಾಗಳಲ್ಲಿ ಅಬ್ಬರಿಸಿದರು. ಅವರು ಖಳನಟರಾಗಿಯೇ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ರವಿ ಕಿಶನ್ ಮಿಂಚಿದ್ದಾರೆ. ಕಳೆದ ವರ್ಷ ಬಂದ 'ಮಿಷನ್ ರಾಣಿಗಂಜ್‌' ಹಾಗೂ ಈ ವರ್ಷ ಬಂದ 'ಲಾಪತಾ ಲೇಡೀಸ್​' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.

More from Filmibeat

English summary
Father wanted to kill me, Says actor ravi kishan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X