For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರಾ ಕೈತಪ್ಪಿ ನಟ ಸಚಿನ್ ಪಾಲಾಯ್ತು ಒಂದು ಕೆಜಿ ಚಿನ್ನ!

  |

  ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾದ ದುರಾದೃಷ್ಟ ಬೆನ್ನೇರಿದಂತಿದೆ.

  ಅಲ್ಲಿ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧನದಲ್ಲಿರುವ ಹೊತ್ತಿನಲ್ಲಿಯೇ ಒಂದು ಕೆ.ಜಿ ಚಿನ್ನ ರಾಜ್ ಕುಂದ್ರಾ ಕೈತಪ್ಪಿ ಹೋಗಿದೆ.

  ನಟ, ನಿರ್ಮಾಪಕ ಸಚಿನ್ ಜೋಶಿ, ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಒಡೆತನದ ಸತ್ಯಯುಗ್ ಗೋಲ್ಡ್ ಸಂಸ್ಥೆಯ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದರು. ಆ ಪ್ರಕರಣವು ಇದೀಗ ಸಚಿನ್ ಜೋಶಿ ಪಾಲಾಗಿದ್ದು, ಒಂದು ಕೆ.ಜಿ ಚಿನ್ನ ಸಚಿನ್ ಜೋಶಿಗೆ ಸೇರಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಅದು ಮಾತ್ರವೇ ಅಲ್ಲದೆ ಸತ್ಯಯುಗ್ ಗೋಲ್ಡ್ ಸಂಸ್ಥೆಯು ಸಚಿನ್ ಜೋಶಿಗೆ ಮೂರು ಲಕ್ಷ ದಂಡವನ್ನೂ ನೀಡಬೇಕು ಎಂದು ಆದೇಶಿಸಿದೆ.

  ಈ ಬಗ್ಗೆ ಮಾತನಾಡಿರುವ ಸಚಿನ್ ಜೋಶಿ, ''ನನ್ನ ಈ ಹೋರಾಟ ಕೇವಲ ನನ್ನದು ಮಾತ್ರವಲ್ಲ. ಕಡಿಮೆ ದರದಲ್ಲಿ ಚಿನ್ನ ನೀಡುವುದಾಗಿ ರಾಜ್ ಕುಂದ್ರಾ ನೀಡಿದ್ದ ಭರವಸೆ ನಂಬಿ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದ ಎನ್ನ ಹೂಡಿಕೆದಾರರ ಪರವಾಗಿ ನಾನು ಹೋರಾಟ ಮಾಡಿದೆ'' ಎಂದಿದ್ದಾರೆ.

  ''18.57 ಲಕ್ಷ ಮೌಲ್ಯದ ಚಿನ್ನ ಖರೀದಿಸಲು 25 ಲಕ್ಷ ಹಣ ಕಟ್ಟುವಂತೆ ಕೇಳಲಾಯಿತು. ಕೂಡಲೇ ನಾನು ಕೋರ್ಟ್ ಮೆಟ್ಟಿಲು ಹತ್ತಿ ಹೋರಾಟ ಮಾಡಿದೆ. ಸೆಲೆಬ್ರಿಟಿಗಳು ಎಂದು ನಂಬಿ ಹಣ ಹೂಡಿದ್ದ ಸಾಮಾನ್ಯರ ಗತಿ ಏನು?'' ಎಂದು ಸಚಿನ್ ಪ್ರಶ್ನಿಸಿದ್ದಾರೆ.

  ಹುಡುಗರನ್ನ ಹೊಗಳಿರೋ ಸಾಂಗ್ ನ ಇದುವರೆಗೂ ಯಾರು ಮಾಡಿಲ್ಲ

  ಗ್ರಾಹಕರಿಂದ ಒತ್ತಡ ಹೆಲ್ಲಾದಾಗ ಅನುಮೋಲ್ ಗೋಲ್ಡ್‌ನಿಂದ ಚಿನ್ನ ಖರೀದಿಸಿ ಸತ್ಯಯುಗ್ ಗೋಲ್ಡ್ ಸಂಸ್ಥೆಯು ಗ್ರಾಹಕರಿಗೆ ಚಿನ್ನ ವಿತರಿಸಿತು. ಅಲ್ಲಿಗೆ ಸಾಬೀತಾಯಿತು ಅವರ ಬಳಿ ಚಿನ್ನ ಇರಲಿಲ್ಲವೆಂದು ಹಾಗಿದ್ದ ಮೇಲೆ ಅವರು ದಾಸ್ತಾನು ವೆಚ್ಚವನ್ನು ಗ್ರಾಹಕರ ಮೇಲೆ ಹಾಕಿರುವುದು ಸಹ ಸುಳ್ಳು ಎಂಬುದು. ಒಟ್ಟಿನಲ್ಲಿ ನನ್ನ ಒಂದು ಕೆ.ಜಿ ಚಿನ್ನದ ಜೊತೆಗೆ ಕಾನೂನು ಹೋರಾಟಕ್ಕೆ ಖರ್ಚು ಮಾಡಿದ್ದ ಮೂರು ಲಕ್ಷ ರುಪಾಯಿ ಸಹ ನನಗೆ ನ್ಯಾಯಾಲಯವು ದೊರಕಿಸಿಕೊಟ್ಟಿದೆ. ರಾಜ್ ಕುಂದ್ರಾ ಮಾಡಿದ್ದ ಪಾಪ ಅವನ್ನನೇ ಕಾಡುತ್ತಿದೆ'' ಎಂದಿದ್ದಾರೆ.

  English summary
  Actor Sachiin Joshi won court case against Raj Kundra, Shilpa Shetty's Satyug Gold company. Court said Satyug Gold should give 1 KG gold to Sachiin.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X