Saif Ali Khan: ಸರ್ಜರಿ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ಸೈಫ್ ಅಲಿ ಖಾನ್, ಯಾವಾಗ 'ದೇವರ ' ಶೂಟಿಂಗ್‌ಗೆ?
ಬಾಲಿವುಡ್ ನಟ ಸೈಫ್ ಅಲಿ ಖಾನ್ ಸದ್ಯ ಜೂನಿಯರ್ ಎನ್‌ಟಿಆರ್ ಅವರ 'ದೇವರ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಸೈಫ್ ಅಲಿ ಖಾನ್ ಮೊಣಕಾಲು ಹಾಗೂ ಬೆನ್ನಿಗೆ ತೀವ್ರವಾಗಿ ಪೆಟ್ಟಾಗಿದ್ದು ಅವರು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸುದ್ದಿ ಅವರ ಅಭಿಮಾನಿಗಳಿಗೆ ಆಘಾತ ತಂದಿತ್ತು.
ಸದ್ಯ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಟ ಸೈಫ್ ಅಲಿ ಖಾನ್ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮನೆಗೆ ಮರಳಿದ್ದಾರೆ. ಮಂಗಳವಾರ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ನಟಿ, ಪತ್ನಿ ಕರೀನಾ ಕಪೂರ್ ಅವರೊಂದಿಗೆ ಬಾಂದ್ರಾ ಮನೆಯ ಹೊರಗೆ ಕಾಣಿಸಿಕೊಂಡಿದ್ದು, ಮಾಧ್ಯಮಗಳಿಗೆ ಫೋಸ್ ನೀಡಿದ್ದಾರೆ.

ಕರೀನಾ ಕಪೂರ್ ಜೊತೆ ಮನೆಗೆ ಮರಳಿದ ನಟ ಸೈಫ್ ಅಲಿ ಖಾನ್
ಆಸ್ಪತ್ರೆಯಿಂದ ಬಂದ ನಟ ಸೈಫ್ ಅಲಿ ಖಾನ್ ಜೀನ್ಸ್‌ನೊಂದಿಗೆ ನೀಲಿ ಟಿ-ಶರ್ಟ್‌ನಲ್ಲಿದ್ದರು. ಸರ್ಜರಿ ಆದ ಕಾರಣ ಮೊಣಕೈಗೆ ಬ್ಯಾಂಡೆಜ್ ಧರಿಸಿದ್ದರು. ಪತಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಕರೀನಾ ಕಪೂರ್, ಮುಂಬೈನ ತಮ್ಮ ಮನೆಯ ಹೊರಗೆ ಪಾಪರಾಜಿಗಳತ್ತ ಸಂತೋಷದಿಂದ ಕೈ ಬೀಸಿದ್ದಾರೆ. ಜೋಡಿಯಾಗಿ ಮಾಧ್ಯಮಗಳಿಗೆ ಫೋಸ್ ನೀಡಿ ಮನೆಗೆ ಹೋಗಿದ್ದಾರೆ.
ನಟ ಸೈಫ್ ಅಲಿ ಖಾನ್‌ಗೆ ಗಾಯ
53 ವರ್ಷದ ನಟ ಸೈಫ್ ಅಲಿ ಖಾನ್ ಅವರಿಗೆ ತಮ್ಮ ಇತ್ತೀಚಿನ ಸಿನಿಮಾ 'ದೇವರ' ಚಿತ್ರೀಕರಣದ ಸಮಯದಲ್ಲಿ ಹಳೆಯ ಗಾಯ ಮತ್ತೆ ಉಲ್ಬಣಗೊಂಡಿತ್ತು. ಈ ಕಾರಣಕ್ಕೆ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2017 ರಲ್ಲಿ ವಿಶಾಲ್ ಭಾರದ್ವಾಜ್ ನಿರ್ದೇಶನದ 'ರಂಗೂನ್' ಚಿತ್ರೀಕರಣದ ವೇಳೆ ಅವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಸೈಫ್ ಅಲಿ ಖಾನ್ ಅವರನ್ನು ಜನವರಿ 22 ರ ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಅವರು ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆಸ್ಪತ್ರೆಗೆ ದಾಖಲಾದ ಒಂದು ದಿನದ ನಂತರ ಜನವರಿ 23ಕ್ಕೆ ಸೈಫ್ ಅಲಿ ಖಾನ್ ಡಿಸ್ಚಾರ್ಜ್ ಆಗಿದ್ದಾರೆ.
ಸೈಫ್ ಅಲಿ ಖಾನ್ ಮುಂದಿನ ಸಿನಿಮಾಗಳು
ಸೈಫ್ ಅಲಿ ಖಾನ್ ಕೊನೆಯದಾಗಿ ಓಂ ರಾವತ್ ಅವರ 'ಆದಿಪುರುಷ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಟ ಪ್ರಭಾಸ್ ಮತ್ತು ಕೃತಿ ಸನನ್ ರಾಘವ ಮತ್ತು ಜಾನಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ 'ಲಂಕೇಶ್ವರ' ಪಾತ್ರದಲ್ಲಿ ನಟಿಸಿದ್ದರು. ಭಾರಿ ವಿವಾದ ಮತ್ತು ಚರ್ಚೆಗೆ ಕಾರಣವಾದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ನೀಡಿದೆ.
ಸೈಫ್ ಅಲಿ ಖಾನ್ ಮುಂದೆ ಜೂನಿಯರ್ ಎನ್‌ಡಿಆರ್ ನಟನೆಯ 'ದೇವರ: ಭಾಗ 1' ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಮೂಲಕ ನಟಿ ಜಾನ್ವಿ ಕಪೂರ್ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಚಿತ್ರತಂಡ ನಟ ಸೈಫ್ ಅಲಿ ಖಾನ್ ಅವರ ಯೋಗಕ್ಷೇಮದ ಬಗ್ಗೆ ಟ್ವೀಟ್ ಮಾಡಿತ್ತು. "ನೀವು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ, ಸೈಫ್ ಸರ್! ಬೇಗ ಚೆತರಿಸಿಕೊಳ್ಳಿ. ಸೆಟ್‌ಗಳಲ್ಲಿ ನಿಮ್ಮ ಪುನರಾಗಮನಕ್ಕಾಗಿ ಕಾಯುತ್ತಿದ್ದೇವೆ" ಎಂದು ಟ್ವೀಟ್ ಮಾಡಲಾಗಿತ್ತು.
'ದೇವರ' ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಿದ್ದಾರೆ. ಇದರಲ್ಲಿ ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ ಮತ್ತು ನರೇನ್ ಕೂಡ ಇದ್ದಾರೆ. ಎರಡು ಭಾಗಗಳ ಚಲನಚಿತ್ರವು 5 ಏಪ್ರಿಲ್ 2024 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.


Click it and Unblock the Notifications











