ಸುಶಾಂತ್ ಸಾವಿನಿಂದ ಅನೇಕರು ಮೈಲೇಜ್ ಪಡೆಯುತ್ತಿದ್ದಾರೆ: ನಟ ಸೈಫ್ ಅಲಿ ಖಾನ್
ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ, ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಪೋಸ್ಟ್ ಗಳು ವೈರಲ್ ಆಗುತ್ತಿವೆ. ಸುಶಾಂತ್ ಸಾವಿಗೆ ಸಂತಾಪ ಸೂಚಿಸಿ ಮೆಸೇಜ್ ಗಳ ಸುರಿಮಳೆಯೆ ಹರಿದುರುತ್ತಿದೆ. ಸುಶಾಂತ್ ಸಿಂಗ್ ಸಾವಿಗೆ ಮರುಗಿ ಸಂತಾಪ ಸೂಚಿಸಿದ ಬಾಲಿವುಡ್ ನ ಕೆಲವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
Recommended Video
ಸುಶಾಂತ್ ಸಿಂಗ್ ಅವರನ್ನು ಅವಮಾನ ಮಾಡಿ, ಸಿನಿಮಾ ಅವಕಾಶಗಳೆ ಇಲ್ಲದ್ದಂತೆ ಮಾಡಿದ ಬಾಲಿವುಡ್ ನ ಕೆಲವು ಪ್ರಭಲ ವ್ಯಕ್ತಿಗಳ ವಿರುದ್ಧ ಅನೇಕರು ತಿರುಗೆ ಬಿದ್ದಾರೆ. ಈ ಬಗ್ಗೆ ಈಗ ನಟ ಸೈಫ್ ಅಲಿ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾನ್ಯವಾಗಿ ಸೈಫ್ ಅಲಿ ಖಾನ್ ಯಾವ ವಿಚಾರವಾಗಿಯೂ ಹೆಚ್ಚು ಮಾತನಾಡಲ್ಲ. ಆದರೀಗ ಪ್ರತಿಕ್ರಿಯೆ ನೀಡಿರುವ ಸೈಫ್ ಸಿಟ್ಟಾಗಿದ್ದು ಸುಶಾಂತ್ ಸಾವಿನಿಂದ ಅನೇಕರು ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಮುಂದೆ ಓದಿ..

ಅನೇಕರಿಗೆ ಸುಶಾಂತ್ ಮೇಲೆ ದಿಢೀರ್ ಪ್ರೀತಿ ಬಂದಿದೆ
ಇತ್ತೀಚಿಗೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೈಫ್ ಸುಶಾಂತ್ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬಾಲಿವುಡ್ ನ ಅನೇಕರು ದಿಢೀರನೆ ಸುಶಾಂತ್ ಮೇಲೆ ಪ್ರೀತಿಯನ್ನು ಸುರಿಸುತ್ತಿರುವುದು ನೋಡಿದ್ರೆ ಅಚ್ಚರಿಯಾಗುತ್ತಿದೆ. ಇದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ ಹೆಚ್ಚು ಸಮಯ ಬೇಕು, ಇದು ಹಿಪೊಕ್ರಸಿ ಅಲ್ಲದೆ ಮತ್ತೀನ್ನೇನು ಎಂದಿದ್ದಾರೆ.

ಅನೇಕರು ಮೈಲೇಜ್ ಪಡೆಯುತ್ತಿದ್ದಾರೆ
ಸುಶಾಂತ್ ಸಾವಿನ ಬಗ್ಗೆ ದಿಢೀರನೆ ಕಾಮೆಂಟ್ ಪ್ರೀತಿ ತೋರಿದವರು ಮಾಡಿದ ಅನೇಕರಿದ್ದಾರೆ. ಸುಶಾಂತ್ ಸಾವಿನಿಂದ ಕೆಲವರು ಮೈಲೇಜ್ ಪಡೆಯುತ್ತಿದ್ದಾರೆ ಎಂದು ಅನಿಸುತ್ತಿದೆ. ಅದು ನಿಮಗೆ ಸಹಾನುಭೂತಿ ತೋರುವುದು, ಆಸಕ್ತಿ ತೋರುವುದು ಅಥವಾ ಕೆಲವು ರಾಜಕೀಯ ನಿಲುವುಗಳನ್ನು ತೋರಿಸುವುದು ನಿಮಗೆ ತಿಳಿದಿದೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಇದು ಮುಜುಗರದ ಸಂಗತಿಯಾಗಿದೆ" ಎಂದಿದ್ದಾರೆ.

ನಟಿಸುವುದು ಸಾವನ್ನಪ್ಪಿದ್ದವರಿಗೆ ಮಾಡುವ ಅವಮಾನ
"ಸುಶಾಂತ್ ಅವರ ಮೇಲಿನ ಗೌರವದಿಂದ, ಸುಶಾಂತ್ ಅವರ ಈ ದುರಂತ, ಬಹುಶಃ ಈ ಪ್ರೀತಿಯ ಹೊರಹರಿವುಗಿಂತ ಹೆಚ್ಚು ಮೌನ ಅಥವಾ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ" ಎಂದಿದ್ದಾರೆ. "ಕಾಳಜಿ ವಹಿಸುವ ಹಾಗೆ ನಟಿಸುವುದು ಸಾವನ್ನಪ್ಪಿದ್ದವರಿಗೆ ಮಾಡುವ ಅವಮಾನ ಎಂದು ಭಾವಿಸುತ್ತೇನೆ." ಎಂದಿದ್ದಾರೆ.

ಬಾಲಿವುಡ್ ನ 8 ಜನರ ವಿರುದ್ಧ ದೂರು
ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಸಂಬಂದಿಸಿದ್ದಂತೆ ಎಂಟು ಮಂದಿಯ ಮೇಲೆ ದೂರು ದಾಖಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಖಿನ್ನತೆಯಿಂದ ಬಳಲುತ್ತಿದ್ದು ಅದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸುಶಾಂತ್ ಆತ್ಮಹತ್ಯೆಗೆ ವೃತ್ತಿಭೇದವೂ ಕಾರಣ ಎಂದು ಸಲ್ಮಾನ್ ಖಾನ್, ಏಕ್ತ ಕಪೂರ್, ಸಂಜಯ್ ಲೀಲಾ ಬನ್ಸಾಲಿ, ಕರಣ್ ಜೋಹರ್ ಸೇರಿದ್ದಂತೆ 8 ಜನರ ಮೇಲೆ ದೂರು ದಾಖಲಾಗಿದೆ.


Click it and Unblock the Notifications











