For Quick Alerts
  ALLOW NOTIFICATIONS  
  For Daily Alerts

  ಉಲ್ಟ ಮಾಸ್ಕ್ ಧರಿಸಿ ಹಿಗ್ಗಾಮುಗ್ಗಾ ಟ್ರೋಲ್ ಆದ ನಟ ಸಲ್ಮಾನ್ ಖಾನ್

  By ಫಿಲ್ಮಿಬೀಟ್ ಡೆಸ್ಕ್
  |

  ಸೆಲೆಬ್ರಿಟಿಗಳು ಆಗಾಗ ಟ್ರೋಲಿಗರಿಗೆ ಆಹಾರವಾಗುತ್ತಿರುತ್ತಾರೆ. ಚಿಕ್ಕ ವಿಚಾರಗಳು ಸಹ ಟ್ರೋಲಿಗೆ ದೊಡ್ಡದಾಗಿ ಕಾಣಿಸುತ್ತದೆ. ಅದರಲ್ಲೂ ನಟಿಯಮಣಿಯರು ಹೆಚ್ಚಾಗಿ ಟ್ರೋಲಿಗೆ ಗುರಿಯಾಗುತ್ತಿರುತ್ತಾರೆ. ಡ್ರೆಸ್, ಹೇಳಿಕೆಗಳು, ಫೋಟೋಶೂಟ್ ಹೀಗೆ ಪ್ರತಿಯೊಂದು ವಿಚಾರದಲ್ಲೂ ಟ್ರೋಲ್ ಮಾಡುತ್ತಿರುತ್ತಾರೆ. ಇದೀಗ ಸಲ್ಮಾನ್ ಖಾನ್ ಸಹ ಟ್ರೋಲಿಗೆ ಗುರಿಯಾಗಿದ್ದಾರೆ.

  ಮಾಸ್ಕ್ ವಿಚಾರವಾಗಿ ಸಲ್ಮಾನ್ ಖಾನ್ ನನ್ನು ಟ್ರೋಲಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಚಿತ್ರೀಕರಣಕ್ಕೆಂದು ವಿದೇಶಿ ಪಯಣಕ್ಕೆ ಹೋಗಿದ್ದ ಸಲ್ಮಾನ್ ಇದೀಗ ಮುಂಬೈಗೆ ವಾಪಸ್ ಆಗಿದ್ದಾರೆ. ಮುಂಬೈ ಏರ್ ಪೋರ್ಟ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾದ ಸಲ್ಮಾನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಸಲ್ಮಾನ್ ಉಲ್ಟ ಮಾಸ್ಕ ಧರಿಸಿದ್ದಾರೆ. ಇದೀಗ ಮಾಸ್ಕ್ ಧರಿಸುವುದು ಒಂದು ಫ್ಯಾಷನ್ ಆಗಿದೆ. ಚಿತ್ರ ವಿಚಿತ್ರ ಮಾಸ್ಕಗಳನ್ನು ಧರಿಸುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಡ್ರೆಸ್ ಹಾಗೆಯೇ ಮಾಸ್ಕ್ ಗಳನ್ನು ಸಹ ವಿಶೇಷವಾಗಿ ಡೆಸೈನ್ ಮಾಡಿಸಿ ಧರಿಸುತ್ತಾರೆ. ಸಲ್ಮಾನ್ ಖಾನ್ ಧರಿಸಿದ್ದ ಮಾಸ್ಕ್ ನಲ್ಲಿ ಎಸ್ ಕೆ ಎಂದು ಬರೆಯಲಾಗಿದೆ. ಎಸ್ ಕೆ ಎಂದು ಬರೆದಿರುವುದು ಉಲ್ಟ-ಪಲ್ಟವಾಗಿದೆ. ನೆಟ್ಟಿಗರು ಕಾಮೆಂಟ್ ಮಾಡಿ ಮಾಸ್ಕ್ ಉಲ್ಟ ಆಗಿದೆ ಎಂದು ಹೇಳುತ್ತಿದ್ದಾರೆ.

  ಸಲ್ಮಾನ್ ಸದ್ಯ ಟೈಗರ್ -3 ಸಿನಿಮಾದ ವಿದೇಶಿ ಚಿತ್ರೀಕರಣ ಮುಗಿಸಿ ಮುಂಬೈ ವಾಪಸ್ ಆಗಿದ್ದಾರೆ. ಬಿಗ್ ಬಾಸ್ 15 ಪ್ರಾರಂಭವಾಗಿತ್ತಿದ್ದು, ಸಲ್ಮಾನ್ ನಿರೂಪಣೆ ಮಾಡುತ್ತಿದ್ದಾರೆ. ಬಿಗ್ ಬಾಸ್ 15 ಅಕ್ಟೋಬರ್ 2ರಿಂದ ಪ್ರಾರಂಭವಾಗಲಿದೆ. ಹಾಗಾಗಿ ಸಲ್ಮಾನ್ ಖಾನ್ ಸಿನಿಮಾ ಚಿತ್ರೀಕರಣ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಸಲ್ಮಾನ್ ಖಾನ್ ಸುಮಾರು 10 ವರ್ಷಗಳಿಂದ ಬಿಗ್ ಬಾಸ್ ಶೋ ನಿರೂಪಣೆ ಮಾಡುತ್ತಿದ್ದಾರೆ. ಇದೀಗ ಬಿಗ್ ಬಾಸ್ 15ನೇ ಸೀಸನ್ ಹೋಸ್ಟ್ ಮಾಡಲು ಸಜ್ಜಾಗಿದ್ದಾರೆ.

  ಬಿಗ್ ಬಾಸ್ ಜೊತೆಗೆ ಸಲ್ಮಾನ್ ಕಭಿ ಈದ್ ಕಭಿ ದಿವಾಲಿ ಸಿನಿಮಾವನ್ನು ಪ್ರಾರಂಭ ಮಾಡುವ ಸಾಧ್ಯತೆ ಇದೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಕೊನೆಯದಾಗಿ ರಾಧೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಹಾಗಾಗಿ ಸಲ್ಮಾನ್ ಮುಂದಿನ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

  English summary
  Bollywood Actor Salman Khan gests trolled for wearing ulta Mask.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X