'ಸುಲ್ತಾನ್' ಭರ್ಜರಿ ಕಲೆಕ್ಷನ್: 'ಪಿ.ಕೆ' ದಾಖಲೆ ಮುರಿಯುವತ್ತ ಸಲ್ಲು
'ಭಜರಂಗಿ ಭಾಯ್ ಜಾನ್' ಚಿತ್ರದ ನಂತರ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರು 'ಸುಲ್ತಾನ್' ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆಯುತ್ತಿದ್ದಾರೆ.
ಇದೀಗ ಕೇವಲ 12 ದಿನಗಳಲ್ಲಿ ಬರೋಬ್ಬರಿ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಅಮೀರ್ ಖಾನ್ ಅವರ 'ಪಿ.ಕೆ' ಚಿತ್ರದ ದಾಖಲೆ ಮುರಿಯುವತ್ತ 'ಸುಲ್ತಾನ್' ದಾಪುಗಾಲಿಕ್ಕುತ್ತಿದೆ.[100 ಕೋಟಿ ಕ್ಲಬ್ ಸೇರುವ ತವಕದಲ್ಲಿ 'ಸುಲ್ತಾನ್']

ಈಗಲೇ 'ಸುಲ್ತಾನ್' ಚಿತ್ರ ಭರ್ಜರಿ 500 ಕೋಟಿ ಕಮಾಯಿಸಿದೆ. ಇನ್ನು ಈಗಲೂ ಕೆಲವು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಪರಿಣಾಮ ಇನ್ನೇನು ಕೆಲವೇ ದಿನಗಳಲ್ಲಿ 1000 ಕೋಟಿ ಕ್ಲಬ್ ಸೇರಿದ್ರೂ ಅಚ್ಚರಿ ಇಲ್ಲ ಎಂದು ಬಿಟೌನ್ ಪಂಡಿತರು ಈಗಿನಿಂದಲೇ ಲೆಕ್ಕಾಚಾರ ಹಾಕುತ್ತಿದ್ದಾರೆ.
ಅಂದಹಾಗೆ ಸಲ್ಮಾನ್ ಖಾನ್ ಮತ್ತು ಅನುಷ್ಕಾ ಶರ್ಮಾ ಒಂದಾಗಿ ಕಾಣಿಸಿಕೊಂಡಿದ್ದ 'ಸುಲ್ತಾನ್' ಚಿತ್ರ ಇದೀಗ ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಗುತ್ತಿದೆ.[ಬಾಕ್ಸಾಫೀಸ್ ನಲ್ಲಿ ರುದ್ರತಾಂಡವ ಆಡುತ್ತಿರುವ 'ಸುಲ್ತಾನ್']

ಈ ಮೊದಲು ಅಮೀರ್ ಖಾನ್ ಅವರ 'ಪಿ.ಕೆ' ಒಟ್ಟು 792 ಕೋಟಿ ಕಲೆಕ್ಷನ್ ಮಾಡಿತ್ತು, ಸಲ್ಲು ಅವರ ಭಜರಂಗಿ ಭಾಯ್ ಜಾನ್ 626 ಕೋಟಿ, ಎಸ್.ಎಸ್ ರಾಜಮೌಳಿ ಅವರ 'ಬಾಹುಬಲಿ' 626 ಕೋಟಿ, ಹಾಗೂ ಅಮೀರ್ ಖಾನ್ ಅವರ 'ಧೂಮ್ 3' 542 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ಅಂತೂ ಇದೀಗ ಈ ಎಲ್ಲಾ ಚಿತ್ರಗಳ ದಾಖಲೆಯನ್ನು ಪುಡಿಗಟ್ಟುವತ್ತ 'ಸುಲ್ತಾನ್' ಮುನ್ನುಗ್ಗುತ್ತಿದ್ದು, ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಸಾಲಿಗೆ ಇದೀಗ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ 'ಸುಲ್ತಾನ್' ಚಿತ್ರ ಸೇರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.[ವಿಮರ್ಶೆ: 440 ವೋಲ್ಟ್ ನಲ್ಲಿ ಅಬ್ಬರಿಸಿದ ಹರ್ಯಾಣದ 'ಸುಲ್ತಾನ್']


Click it and Unblock the Notifications











