ತನ್ನ ಜೀವನದಲ್ಲಿ ಮೊದಲು ಭೇಟಿಯಾದ ಸೆಲೆಬ್ರಿಟಿ ಬಗ್ಗೆ ಬಹಿರಂಗ ಪಡಿಸಿದ ನಟಿ ರಿಯಾ

ಬಾಲಿವುಡ್ ನಟಿ, ದಿವಂಗತ ನಟ ಸುಶಾಂತ್ ಸಿಂಗ್ ಚಕ್ರವರ್ತಿ ಪ್ರೇಯಸಿ ರಿಯಾ ಚಕ್ರವರ್ತಿ ವರ್ಷಗಳ ಮತ್ತೆ ಸಹಜ ಜೀವನದತ್ತ ಮರಳುತ್ತಿದ್ದಾರೆ. ಸುಶಾಂತ್ ಸಿಂಗ್‌ನನ್ನು ಕಳೆದುಕೊಂಡ ಬಳಿಕ ರಿಯಾ ಜೀವನದಲ್ಲಿ ಸಂತೋಷ ಮಾಯವಾಗಿತ್ತು. ಆದರೀಗ ಚೇತರಿಸಿಕೊಂಡಿರುವ ರಿಯಾ ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿರುತ್ತಾರೆ.

ರಿಯಾ ಸದ್ಯ ಚಹ್ರೆ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಸುಶಾಂತ್ ಸಿಂಗ್ ನಿಧನದ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ದೊಡ್ಡ ವಿವಾದದ ಬಳಿಕ ಮೊದಲ ಬಾರಿಗೆ ರಿಯಾ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಅಂದಹಾಗೆ ಈ ಸಮಯದಲ್ಲಿ ರಿಯಾ ಚಕ್ರವರ್ತಿಯ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ. ಸಂದರ್ಶನದಲ್ಲಿ ರಿಯಾ ತನ್ನ ಜೀವನದಲ್ಲಿ ಮೊದಲ ಬಾರಿಗೆ ಭೇಟಿಯಾದ ಸೆಲೆಬ್ರಿಟಿ ಬಗ್ಗೆ ಮಾತನಾಡಿದ್ದಾರೆ.

ಅಂದಹಾಗೆ ರಿಯಾ ತನ್ನ ಜೀವನದಲ್ಲಿ ಮೊದಲ ಬಾರಿಗೆ ಭೇಟಿಯಾದ ಸೆಲೆಬ್ರಿಟಿ ಸಲ್ಮಾನ್ ಖಾನ್. ರಿಯಾ ನಟಿಯಾಗಿ ಗುರುತಿಸಿಕೊಳ್ಳುವ ಮೊದಲ ಜನಪ್ರಿಯ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ರಿಯಾ ಮೊದಲ ಬಾರಿಗೆ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿದರು. ಮೊದಲ ಬಾರಿಗೆ ಸಲ್ಮಾನ್ ಅವರನ್ನು ಸಂದರ್ಶನ ಮಾಡಿದ ಬಗ್ಗೆ ಬಹಿರಂಗ ಪಡಿಸಿದ್ದಾರೆ.

Actor Salman Khan was the first celebrity Rhea Chakraborty met in her life

ನಟಿ ರಿಯಾ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಪೋಸ್ಟ ಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ರಿಯಾ ಆಪ್ತ ಗೆಳತಿಯ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಬಾಲಿವುಡ್‌ನ ಖ್ಯಾತ ನಿರ್ದೇಶಕ ರೂಮಿ ಜಾಫ್ರಿ ಪುತ್ರಿ ಆಲ್ಫಿಯಾ ಜಾಫ್ರಿ ಮದುವೆ ಸಂಭ್ರಮದಲ್ಲಿ ಭಾಗಿಯಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ರೂಮಿ ಕುಟುಂಬದ ಜೊತೆ ರಿಯಾ ಮತ್ತು ಗೆಳತಿಯರು ಮಸ್ತ್ ಡಾನ್ಸ್ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದೇ ನಿರ್ದೇಶಕರ ಸಿನಿಮಾದಲ್ಲಿ ರಿಯಾ ನಟಿಸಿದ್ದಾರೆ. ಇನ್ನು ಚಹ್ರೆ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಮತ್ತು ನಟ ಇಮ್ರಾನ್ ಹಶ್ಮಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಚಹ್ರೆ ಸುಶಾಂತ್ ಸಿಂಗ್ ನಿಧನ ಹೊಂದುವ ಮೊದಲೇ ರಿಯಾ ನಟಿಸಿರುವ ಸಿನಿಮಾ. ಈ ಸಿನಿಮಾ ಬಳಿಕ ರಿಯಾ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಸದ್ಯ ಎಲ್ಲಾ ಕೆಲಸಗಳನ್ನು ಮುಗಿಸಿರುವ ಚಹ್ರೆ ಬಿಡುಗಡೆಗೆ ಸಿದ್ಧಾವಾಗಿದೆ. ಇತ್ತೀಚಿಗಷ್ಟೆ ಟೀಸರ್ ಬಿಡುಗೆಯಾಗಿದೆ. ಆದರೆ ಟೀಸರ್ ನಲ್ಲಿ ರಿಯಾ ದರ್ಶನವಾಗಿಲ್ಲ. ಹಾಗಾಗಿ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಇನ್ನು ರಿಯಾ ಚಕ್ರವರ್ತಿ ಇತ್ತೀಚಿಗೆ ಅಫ್ಘಾನಿಸ್ತಾನದ ಭೀಕರ ಪರಿಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪೋಸ್ಟ್ ಮಾಡಿ ಅಫ್ಘಾನಿಸ್ತಾನಕ್ಕಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದರು. ಇನ್ಸ್ಟಾಗ್ರಾಮ್ ನಲ್ಲಿ ರಿಯಾ, "ಜಗತ್ತಿನಾದ್ಯಂತ ಮಹಿಳೆಯರು ವೇತನ ಸಮಾನತೆಗೆ ಹೋರಾಡುತ್ತಿದ್ದರೆ, ಅಫ್ಘಾನಿಸ್ತಾನದಲ್ಲಿ ಮಹಿಳೆಯರೇ ವೇತನ ಆಗಿ ಮಾರ್ಪಟ್ಟಿದ್ದಾರೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಸ್ಥಿತಿಯನ್ನು ಕಂಡು ಹೃದಯಛಿದ್ರವಾಗಿದೆ. ಜಾಗತಿಕ ನಾಯಕರಿಗೆ ಇದನ್ನು ನಿಯಂತ್ರಿಸುವಂತೆ ಒತ್ತಾಯಿಸಿ. ಮಹಿಳೆಯರು ಕೂಡ ಮನುಷ್ಯರೆ" ಎಂದು ಬರೆದುಕೊಂಡಿದ್ದರು. ರಿಯಾ ಜೊತೆಗೆ ಅನೇಕ ನಟಿಯರು ಅಫ್ಘಾನಿಸ್ತಾನದ ಪರಿಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನಟಿ ರಿಯಾ ಚಕ್ರವರ್ತಿ, ಸುಶಾಂತ್ ಸಿಂಗ್ ನಿಧನದ ಬಳಿಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಸುಶಾಂತ್ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ದ ರಿಯಾ ಗೆಳೆಯನ ಸಾವಿಗೂ ಎರಡು ದಿನಗಳ ಮುಂದೆ ಮನೆಯಿಂದ ಹೊರನಡೆದಿದ್ದರು. ಸುಶಾಂತ್ ಸಾವಿಗೆ ಕಾರಣರಾದವರಲ್ಲಿ ರಿಯಾ ಕೂಡ ಒಬ್ಬರು ಎನ್ನುವ ಆರೋಪವಿದೆ. ಆದರೆ ಸತ್ಯಾಸತ್ಯತೆ ತನಿಖೆ ಬಳಿಕವೇ ಬಹಿರಂಗವಾಗಲಿದೆ.

ಇನ್ನು ಡ್ರಗ್ಸ್ ಪ್ರಕರಣ ತನಿಖೆ ವೇಳೆ ರಿಯಾ ಚಕ್ರವರ್ತಿ ಸೇರಿದಂತೆ ಅನೇಕರು ಜೈಲು ಸೇರಿದ್ದರು. ಬಳಿಕ ಜಾಮೀನಿನ ಮೇಲೆ ಹೊರಬಂದಿರುವ ರಿಯಾ ಸಹಜ ಜೀವನಕ್ಕೆ ಮರಳಿದ್ದಾರೆ. ಸದ್ಯ ಸುಶಾಂತ್ ಸಾವಿನ ಪ್ರಕರಣ ಸಿಬಿಐ ಅಂಗಳದಲ್ಲಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಸಿಬಿಐ ಸಲ್ಲಿಸುವ ಅಂತಿಮ ವರದಿಗೆ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ.

More from Filmibeat

English summary
Bollywood Actor Salman Khan was the first celebrity Rhea Chakraborty met in her life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X