»   » ಈ ಬಾರಿಯೂ ಮಹಿಳಾ ಆಯೋಗದ ವಿಚಾರಣೆಗೆ ಸಲ್ಲು ಗೈರು

ಈ ಬಾರಿಯೂ ಮಹಿಳಾ ಆಯೋಗದ ವಿಚಾರಣೆಗೆ ಸಲ್ಲು ಗೈರು

By: ಸೋನು ಗೌಡ
Subscribe to Filmibeat Kannada

'ಸುಲ್ತಾನ್' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ 'ರೇಪ್ ಆದ ಮಹಿಳೆಯ ಪರಿಸ್ಥಿತಿ ತನ್ನದಾಗಿತ್ತು' ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರಿಂದ ಛೀಮಾರಿ ಹಾಕಿಸಿಕೊಂಡ ಭಾಯ್ ಜಾನ್ ಸಲ್ಮಾನ್ ಖಾನ್ ಅವರು ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ವಿಚಾರಣೆಗೆ ಮೂರನೇ ಬಾರಿ ಕೂಡ ಗೈರು ಹಾಜರಾಗಿದ್ದಾರೆ.

ಸತತ ಮೂರನೇ ಬಾರಿ ಗೈರು ಹಾಜರಾಗುತ್ತಿರುವ ನಟ ಸಲ್ಮಾನ್ ಖಾನ್ ಅವರು ಈ ಬಾರಿ ಮಾತ್ರ ವಿಶೇಷವಾಗಿ ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ಪತ್ರವೊಂದನ್ನು ಕಳುಹಿಸಿದ್ದಾರೆ. ಆದರೆ ಈ ಪತ್ರದಲ್ಲಿ ಏನಿದೆ? ಎಂಬುದನ್ನು ಮಹಿಳಾ ಆಯೋಗದವರು ಬಹಿರಂಗ ಪಡಿಸಿಲ್ಲ.[100 ಕೋಟಿ ಕ್ಲಬ್ ಸೇರುವ ತವಕದಲ್ಲಿ 'ಸುಲ್ತಾನ್']

Actor Salman Refuses To Apologise For His 'Raped Woman' Comment

'ನಟ ಸಲ್ಮಾನ್ ಖಾನ್ ಅವರ ಪತ್ರವನ್ನು ಮಹಿಳಾ ಆಯೋಗದ ಕಾನೂನು ಇಲಾಖೆಗೆ ಕಳುಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ಆಯೋಗದ ಅಧ್ಯಕ್ಷೆ ವಿಜಯ ರಾಹತ್ಕರ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಭಾಯ್ ಜಾನ್ ಸಲ್ಮಾನ್ ಖಾನ್ ಅವರು ಜುಲೈ 14 ರಂದು ಸಂಜೆ 4.30 ಕ್ಕೆ ಮಹಿಳಾ ಆಯೋಗದ ಮುಂದೆ ವಿಚಾರಣೆಗಾಗಿ ಹಾಜರಾಗಬೇಕಿತ್ತು. ಆದರೆ ಅವರು ಖುದ್ದಾಗಿ ಹಾಜರಾಗುವ ಬದಲು ಆಯೋಗಕ್ಕೆ ಪತ್ರ ಕಳುಹಿಸಿದ್ದಾರೆ.[ಬಾಕ್ಸಾಫೀಸ್ ನಲ್ಲಿ ರುದ್ರತಾಂಡವ ಆಡುತ್ತಿರುವ 'ಸುಲ್ತಾನ್']

Actor Salman Refuses To Apologise For His 'Raped Woman' Comment

ಸದ್ಯಕ್ಕೆ 'ಸುಲ್ತಾನ್' ಚಿತ್ರದ ಭರ್ಜರಿ ಯಶಸ್ಸಿನಲ್ಲಿರುವ ನಟ ಸಲ್ಮಾನ್ ಖಾನ್ ಅವರು ತಮ್ಮ ಕುಟುಂಬದವರ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ನಟಿ ಅನುಷ್ಕಾ ಶರ್ಮಾ ಮತ್ತು ಸಲ್ಮಾನ್ ಖಾನ್ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ 'ಸುಲ್ತಾನ್' ಕೇವಲ ಒಂದೇ ವಾರದಲ್ಲಿ ಬರೊಬ್ಬರಿ 170 ಕೋಟಿ ಕೊಳ್ಳೆ ಹೊಡೆಯುವ ಮೂಲಕ ನೂರು ಕೋಟಿ ಕ್ಲಬ್ ಸೇರಿದೆ.[ತಮ್ಮ ವಿವಾದಾತ್ಮಕ ಹೇಳಿಕೆ ಬಗ್ಗೆ ಸಲ್ಮಾನ್ ಖಾನ್ ಏನಂತಾರೆ?]

English summary
Salman Khan, created a controversy by saying that he felt like a "raped woman" while shooting for 'Sultan'. Salman Khan, was terrible in his choice of words and attracted a summons from the Commission for Maharashtra State Commission for Women (MSCW). The hearing on the case was on July 14, 2016 and Salman Khan has failed to appear.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada