ಪ್ರತ್ಯೇಕ ಘಟನೆಗಳಲ್ಲಿ ನಟನ ಮೇಲೆ ಹಲ್ಲೆ, ಗಾಯಕನಿಗೆ ಕೊಲೆ ಬೆದರಿಕೆ

ಎರಡು ಪ್ರತ್ಯೇಕ ಘಟನೆಗಳಲ್ಲಿ ಕಿರತೆರೆ ಖ್ಯಾತ ಹಾಗೂ ಬಾಲಿವುಡ್ ಗಾಯಕ ಇಬ್ಬರಿಗೂ ಪ್ರಾಣ ಬೆದರಿಕೆ ಹಾಕಲಾಗಿದೆ.

ಖ್ಯಾತ ಧಾರಾವಾಹಿ 'ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ'ದ ಗೋಗಿ ಪಾತ್ರಧಾರಿ ಸಮಯ್ ಶಾ ಗೆ ವ್ಯಕ್ತಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಪ್ರಾಣ ಬೆದರಿಕೆ ಹಾಕಿದ್ದಾನೆ. ಆ ವ್ಯಕ್ತಿ ಸಮಯ್ ಶಾ ಗೆ ಬೆದರಿಕೆ ಹಾಕುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಮಯ್ ಶಾ ನಿವಾಸದ ಬಳಿ ಬಂದ ಅಗಂತುಕನೊಬ್ಬ ಸಮಯ್ ಶಾ ವಿರುದ್ಧ ವಾಚಾಮಗೋಚರವಾಗಿ ಬೈದಿದ್ದಾನೆ. ಆತನ ಮೇಲೆ ಹಲ್ಲೆ ಮಾಡಿದ್ದಾನೆ ಹಾಗೂ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಘಟನೆಯ ದೃಶ್ಯವನ್ನು ಸಮಯ್ ಶಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋ ಹಂಚಿಕೊಂಡಿರುವ ಸಮಯ್ ಶಾ

ವಿಡಿಯೋ ಹಂಚಿಕೊಂಡಿರುವ ಸಮಯ್ ಶಾ

ವಿಡಿಯೋ ಹಂಚಿಕೊಂಡಿರುವ ಸಮಯ್ ಶಾ, ಈ ವ್ಯಕ್ತಿ ಯಾರೆಂದು ಗೊತ್ತಿಲ್ಲ ಈವರೆಗೆ ಎರಡು ಬಾರಿ ಮನೆಯ ಬಳಿ ಬಂದು, ನನ್ನ ಮೇಲೆ ಕೆಟ್ಟದಾಗಿ ಬೈದಿದ್ದಾನೆ. ಕೊಲೆ ಬೆದರಿಕೆ ಸಹ ಹಾಕಿದ್ದಾನೆ, ನನ್ನ ಪ್ರೀತಿಪಾತ್ರರಿಗೆ ವಿಷಯ ತಿಳಿದರಲಿ ಎಂದು ವಿಡಿಯೋ ಹಂಚಿಕೊಂಡಿದ್ದೇನೆ' ಎಂದಿದ್ದಾರೆ ಸಮಯ್ ಶಾ.

ಹದಿನೈದು ದಿನದಲ್ಲಿ ಮೂರು ಭಾರಿ ಘಟನೆ

ಹದಿನೈದು ದಿನದಲ್ಲಿ ಮೂರು ಭಾರಿ ಘಟನೆ

ಸಮಯ್ ತಾಯಿ ಹೇಳಿರುವಂತೆ, ಕಳೆದ ಹದಿನೈದು ದಿನಗಳಲ್ಲಿ ಮೂರು ಬಾರಿ ಹೀಗೆ ಆಗಿದೆಯಂತೆ. ವ್ಯಕ್ತಿಯೊಬ್ಬ ಆಟೋದಲ್ಲಿ ಹೋಗುತ್ತಾ ಸಮಯ್‌ನನ್ನು ನಿಂದಿಸಿದ್ದಾನೆ. ಕೊಲೆ ಬೆದರಿಕೆ ಹಾಕಿದ್ದಾನೆ. ನಂತರ ಆತನನ್ನು ಹಿಡಿದು ಕೇಳಿದ್ದಕ್ಕೆ ಆತ ಉತ್ತರ ನೀಡದೆ, ಅವಾಚ್ಯವಾಗಿ ಬೈದನಂತೆ.

ಗಾಯಕ ಇಂದೀಪ್ ಭಕ್ಷಿಗೆ ಕೊಲೆ ಬೆದರಿಕೆ

ಗಾಯಕ ಇಂದೀಪ್ ಭಕ್ಷಿಗೆ ಕೊಲೆ ಬೆದರಿಕೆ

ಗಾಯಕ ಇಂದೀಪ್ ಭಕ್ಷಿ ಸಹ ಕೊಲೆ ಬೆದರಿಕೆಗಳನ್ನು ಎದುರಿಸುತ್ತಿದ್ದಾರಂತೆ. ಉದ್ಯಮಿಯೊಬ್ಬನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಜೈಲಿನಲ್ಲಿರುವ ಸುಮಿತ್ ಗೋಸ್ವಾಮಿ ಜೊತೆ ಸೇರಿ ಆಲ್ಬಮ್ ಮಾಡಿದ್ದರಿಂದ ಇಂದೀಪ್‌ಗೆ ಕೊಲೆ ಬೆದರಿಕೆಗಳು ಬಂದಿವೆ.

Recommended Video

ದೊಡ್ಡ ಹೃದಯವಂತ ಬಾಹುಬಲಿ ನಿರ್ದೇಶಕ ರಾಜಮೌಳಿ | filmibeat Kannada
ಬಿಗ್‌ಬಾಸ್ ಗೆ ಹೋಗಬೇಕಿತ್ತಂತೆ ಇಂದೀಪ್

ಬಿಗ್‌ಬಾಸ್ ಗೆ ಹೋಗಬೇಕಿತ್ತಂತೆ ಇಂದೀಪ್

ಇಂದೀಪ್ ಹೇಳಿರುವಂತೆ, ಅವರು ಈ ಬಾರಿಯ ಹಿಂದಿ ಬಿಗ್‌ಬಾಸ್‌ಗೆ ಹೋಗಬೇಕಿತ್ತಂತೆ, ಆದರೆ ಉದ್ಯಮಿ ಆತ್ಮಹತ್ಯೆ, ಕೊಲೆ ಬೆದರಿಕೆಗಳು ಬಂದ ಕಾರಣ ಬಿಗ್‌ಬಾಸ್ ಆಪರ್ ಅನ್ನು ಒಪ್ಪಿಕೊಳ್ಳಲಿಲ್ಲವಂತೆ. ಹಾಗೂ ಚಿತ್ರೀಕರಣವನ್ನು ಸಹ ಬಂದ್ ಮಾಡಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರಂತೆ.

More from Filmibeat

English summary
Actor Samay Shah and singer Indeep Bakshi faces death threats. Police complaint lodged.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X