For Quick Alerts
  ALLOW NOTIFICATIONS  
  For Daily Alerts

  ನಟ ಸಂಜಯ್ ದತ್‌ಗೆ ಯುಎಇಯಿಂದ ಮಹತ್ವದ ಗೌರವ

  |

  ನಟ ಸಂಜಯ್ ದತ್‌ಗೆ ಯುನೈಟೆಡ್ ಅರಬ್ ಎಮರೈಟ್ಸ್ ಸರ್ಕಾರದಿಂದ ಗೌರವ ನೀಡಲಾಗಿದೆ. ಸಂಜಯ್ ದತ್‌ಗೆ ಯುಎಇಯ ಗೋಲ್ಡನ್ ವೀಸಾ ನೀಡಲಾಗಿದೆ.

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಜಯ್ ದತ್, 'ಮೇಜರ್ ಜನರಲ್ ಮೊಹಮ್ಮದ್ ಅಲ್ ಮಾರಿ ಅವರ ಸಮ್ಮುಖದಲ್ಲಿ ಯುಎಇ ಗೋಲ್ಡನ್ ವೀಸಾ ದೊರೆತಿದ್ದು ಅತ್ಯಂತ ಗೌರವ ಸಂಗತಿಯಾಗಿದೆ. ಈ ಗೌರವಕ್ಕೆ ಯುಎಇ ಸರ್ಕಾರ ಮತ್ತು ಫ್ಲೈ ದುಬೈ ಸಿಇಒ ಹಮದ್ ಒಬೈದಲ್ಲಾ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ' ಎಂದಿದ್ದಾರೆ.

  ಸಂಜಯ್ ದತ್ ತಮ್ಮ ಕುಟುಂಬದೊಂದಿಗೆ ದುಬೈನಲ್ಲಿಯೇ ವಾಸವಿದ್ದರೆ. ದುಬೈನಲ್ಲಿ ಐಶಾರಾಮಿ ಫ್ಲ್ಯಾಟ್ ಅನ್ನು ಸಂಜಯ್ ಖರೀದಿಸಿದ್ದಾರೆ. ಸಂಜಯ್ ದತ್‌ಗೆ ನೀಡಲಾಗಿರುವ ಗೋಲ್ಡನ್ ವೀಸಾ ಐದು ವರ್ಷದ ವರೆಗೆ ಚಾಲನೆಯಲ್ಲಿದೆ ಆ ನಂತರ ನವೀಕರಣ ಮಾಡಿಸಿಕೊಳ್ಳಬೇಕಿದೆ.

  ಯುಎಇನ ವೀಸಾ ನಿಯಮಗಳಲ್ಲಿ 2019 ರಿಂದ ಬದಲಾವಣೆ ತರಲಾಗಿದ್ದು, ಯಾವುದೇ ದೇಶದ ಪ್ರಜೆಯು ತಮ್ಮ ದೇಶದ ಅನುಮತಿ ಇಲ್ಲದೆ ಯುಎಇನಲ್ಲಿ ವಾಸಿಸಲು, ಕೆಲಸ ಮಾಡಲು, ಶಿಕ್ಷಣ ಪಡೆಯಲು ಇದ್ದ ನಿರ್ಬಂಧಗಳನ್ನು ತೆಗೆದು ಹಾಕಲಾಯಿತು. ಹಾಗಾಗಿ ಭಾರತದ ಹಲವಾರು ಸೆಲೆಬ್ರಿಟಿಗಳು ದುಬೈಗೆ ತಮ್ಮ ವಾಸ್ತವ್ಯ ಬದಲಾಯಿಸಿದ್ದಾರೆ.

  ಸಂಜಯ್ ಮಾತ್ರವಲ್ಲದೆ ಶಾರುಖ್ ಖಾನ್, ಮಲಯಾಳಂ ನಟ ಮಮ್ಮುಟಿ, ಶಾರುಖ್ ಖಾನ್ ಇನ್ನೂ ಹಲವಾರು ನಟರು ದುಬೈನಲ್ಲಿ ಫ್ಲ್ಯಾಟ್‌ ಹೊಂದಿದ್ದಾರೆ. ವಾಣಿಜ್ಯ ಆಸ್ತಿಯನ್ನೂ ಹೊಂದಿದ್ದಾರೆ.

  ಮಕ್ಕಳ ಜವಾಬ್ದಾರಿ ಏನು ಅನ್ನೋದನ್ನ ತೋರಿಸಿಕೊಟ್ರು Duniya Vijay | Filmibeat Kannada

  ಬಾಲಿವುಡ್‌ನ ಹಲವು ಸ್ಟಾರ್ ನಟರು ವಿದೇಶಗಳಲ್ಲಿ ಆಸ್ತಿ ಹೊಂದಿದ್ದಾರೆ. ಅಕ್ಷಯ್ ಕುಮಾರ್, ಕೆನಡ ದೇಶದ ನಾಗರೀಕತೆಯನ್ನು ಹೊಂದಿದ್ದಾರೆ. ಶಾರುಖ್ ಖಾನ್ ದುಬೈ, ಅಮೆರಿಕ, ಪ್ಯಾರಿಸ್‌ಗಳಲ್ಲಿ ಆಸ್ತಿ ಹೊಂದಿದ್ದಾರೆ.

  English summary
  Actor Sanjay Dutt receives golden visa from UAE. Sanjay shares information in twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X