ಫೋಟೋ ವೈರಲ್: ತನ್ನ 'ಮನ್ನತ್' ಬಂಗಲೆಯನ್ನು ಪ್ಲಾಸ್ಟಿಕ್ ನಿಂದ ಮುಚ್ಚಿದ ಶಾರುಖ್ ಖಾನ್

ದೇಶದಲ್ಲಿ ಕರೊನಾ ವೈರಸ್ ಹಾವಳಿ ಜಾಸ್ತಿಯಾಗುತ್ತಿದೆ. ಸೋಂಕಿತರ ಸಂಖ್ಯೆ ದಿನದಿಂದನಕ್ಕೆ ಹೆಚ್ಚಾಗುತ್ತಿದೆ. ಮಹಾರಾಷ್ಟರದಲ್ಲಿಯೇ 3 ಲಕ್ಷಕ್ಕು ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿದೆ. ಬಾಲಿವುಡ್ ನ ಖ್ಯಾತ ಕಲಾವಿದರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಹಾಗೂ ಪುತ್ರಿ ಆರಾದ್ಯಾಗೂ ಕೊರೊನಾ ವೈರಸ್ ತಗುಲಿರುವುದು ಮತ್ತಷ್ಟು ಭಯಭೀತರನ್ನಾಗಿಸಿದೆ.

Recommended Video

Hulivana Gangadhar ,ಹಿರಿಯ ನಟ ಕೊರೊನದಿಂದ ಸಾವು | Filmibeat Kannada

ಕೊರೊನಾ ಆತಂಕ ಹೆಚ್ಚಾಗುತ್ತಿರುವ ಬೆನ್ನಲ್ಲೆ ಶಾರುಖ್ ತನ್ನ ಬಂಗಲೆಯನ್ನು ಸಂಪೂರ್ಣ ಪ್ಲಾಸ್ಟಿಕ್ ನಿಂದ ಮುಚ್ಚಿದ್ದಾರೆ. ಪ್ಲಾಸ್ಟಿಕ್ ಹೊದಿಸಿರುವ ಶಾರುಖ್ ಮನೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶಾರುಖ್ ಹೀಗೆ ಮಾಡಿರುವುದನ್ನು ನೋಡಿ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ. ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ಬಂಗಲೆಯನ್ನು ಪ್ಲಾಸ್ಟಿಕ್ ನಿಂದ ಮುಚ್ಚಲಾಗಿದೆ ಅಂತನೆ ಎಲ್ಲರೂ ಅಂದುಕೊಂಡಿದ್ದಾರೆ. ಮುಂದೆ ಓದಿ...

ಬಂಗಲೆಗೆ ಪ್ಲಾಸ್ಟಿಕ್ ಹೊದಿಸಲು ಕಾರಣವೇನು?

ಬಂಗಲೆಗೆ ಪ್ಲಾಸ್ಟಿಕ್ ಹೊದಿಸಲು ಕಾರಣವೇನು?

ಶಾರುಖ್ ಬಂಗಲೆಯನ್ನು ಸಂಪೂರ್ಣ ಮುಚ್ಚಿರುವ ಕಾರಣವೆ ಬೇರೆ. ಮುಂಬೈನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯ ಕಾರಣ ಮನೆಯ ಹೊರಭಾಗವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಂದ ಮುಚ್ಚಲಾಗಿದೆ. ಹಾಗಂತ ಇದೆ ಮೊದಲ ಬಾರಿಗೆ ಪ್ಲಾಸ್ಟಿಕ್ ನಿಂದ ಮುಚ್ಚಿದ್ದಾರೆ ಅಂತಲ್ಲ. ಪ್ರತೀ ವರ್ಷವೂ ಮಳೆ ಜೋರಾದಾಗ ಮನ್ನತ್ ಬಂಗಲೆಯನ್ನು ಹೀಗೆ ಪ್ಲಾಸ್ಟಿಕ್ ನಿಂದ ಮುಚ್ಚುತ್ತಾರಂತೆ.

ಶಾರುಖ್ ಕುಟುಂಬ ನೆಲೆಸಿರುವ ಮನೆ

ಶಾರುಖ್ ಕುಟುಂಬ ನೆಲೆಸಿರುವ ಮನೆ

ಮನ್ನತ್ ನಲ್ಲಿ ಶಾರುಖ್ ಖಾನ್ ಕುಟುಂಬ ವಾಸವಿದೆ. ಶಾರುಖ್ ಖಾನ್ ಮತ್ತು ಪತ್ನಿ ಗೌರಿ ಮಕ್ಕಳಾದ ಸುಹಾನ್, ಆರ್ಯನ್ ಮತ್ತು ಅಬ್ ರಾಮ್ ಮನ್ನತ್ ನಲ್ಲಿ ನೆಲೆಸಿದ್ದಾರೆ. ಜೊತೆರೆಗ ಶಾರುಖ್ ಖಾನ್ ಸಹೋದರಿ ಶೆಹ್ನಾಜ್ ಸಹ ಶಾರುಖ್ ಜೊತೆಯೆ ವಾಸವಿದ್ದಾರೆ.

2001ರಲ್ಲಿ ಖರೀದಿಸಿದ ಬಂಗಲೆ

2001ರಲ್ಲಿ ಖರೀದಿಸಿದ ಬಂಗಲೆ

ಶಾರುಖ್ ಖಾನ್ ಪ್ರೀತಿಯ ಮನ್ನತ್ ಬಂಗಲೆ ಮುಂಬೈನ ಬಾಂದ್ರದಲ್ಲಿದೆ. 2001ರಲ್ಲಿ ಶಾರುಖ್ ಖಾನ್ ಈ ಬಂಗಲೆಯನ್ನು ಖರೀದಿಸಿದ್ದಾರೆ. ಬಾಯಿ ಖೋರ್ಶಿದ್ ಭಾನು ಸಂಜನಾ ಟ್ರಸ್ಟ್ ನಿಂದ ಈ ಬಂಗಲೆ ಖರೀದಿಸಿದ್ದಾರೆ. ನಂತರ ಮನ್ನತ್ ಎಂದು ನಾಮಕರಣ ಮಾಡಿದ್ದಾರೆ. 'ಮನ್ನತ್' ಎಂದರೆ 'ದೇವರಿಗೆ ಪ್ರತಿಜ್ಞೆ' ಎಂದರ್ಥ. 2005ರಲ್ಲಿ ಶಾರುಖ್ ಈ ಬಂಗಲೆಯ ಹಿಂಭಾಗದಲ್ಲಿ 6 ಅಂತಸ್ತಿನ ಕಟ್ಟಡವನ್ನು ನಿರ್ಮಿಸಿದ್ದಾರೆ.

ಶಾರುಖ್ ಖಾನ್ ಸಿನಿಮಾ

ಶಾರುಖ್ ಖಾನ್ ಸಿನಿಮಾ

ಶಾರುಖ್ ಸದ್ಯ ಬಣ್ಣಹಚ್ಚದೆ 2 ವರ್ಷವಾಗಿದೆ. ಜೀರೋ ಸಿನಿಮಾದ ಸೋಲಿನ ಬಳಿಕ ಶಾರುಖ್ ಮತ್ತೆ ತೆರೆಮೇಲೆ ಬಂದಿಲ್ಲ. 2018ರಲ್ಲಿ ಜೀರೋ ಸಿನಿಮಾ ರಿಲೀಸ್ ಆಗಿದೆ. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿರುವ ಶಾರುಖ್ ಸದ್ಯಕ್ಕೆ ಯಾವ ಸಿನಿಮಾವನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

More from Filmibeat

English summary
Bollywood Actor Shah Rukh Khan cover his mannat bungalow with plastic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X