Jawan: ಶಾರುಖ್ ಬಿಡುಗಡೆ ಮಾಡಿದ ಹೊಸ ಪೋಸ್ಟರ್‌ನಲ್ಲಿ ನಯನತಾರಾ, ವಿಜಯ್ ಸೇತುಪತಿ ಲುಕ್ ನೋಡಿದ್ರಾ??
ಪಠಾಣ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್, 'ಜವಾನ್' ಚಿತ್ರ ಬಿಡುಗಡೆಯ ತಯಾರಿಯಲ್ಲಿದ್ದಾರೆ. ಜವಾನ್ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು, ಜನರನ್ನು ಚಿತ್ರದತ್ತ ಸೆಳೆಯಲು ಆಗ್ಗಾಗೆ ಹೊಸ ಹೊಸ ಮಾಹಿತಿಗಳನ್ನು ಚಿತ್ರತಂಡ ಹೊರಹಾಕುತ್ತಿದೆ. ಆಗಸ್ಟ್ 10 ರಂದು, ಶಾರುಖ್ ಖಾನ್ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ.
ಅಟ್ಲೀ ನಿರ್ದೇಶನ ಜವಾನ್ ಸಿನಿಮಾ ಬಿಡುಗಡೆಗೆ ಒಂದು ತಿಂಗಳು ಬಾಕಿ ಇದ್ದು, ಶಾರುಖ್ ಖಾನ್ ವಾರದಲ್ಲಿ ಎರಡು ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ. ಆಗಸ್ಟ್ 10 ರಂದು ಶೇರ್ ಮಾಡಿರುವ ಪೋಸ್ಟರ್‌ನಲ್ಲಿ ಶಾರುಖ್ ಖಾನ್, ನಯನತಾರಾ ಮತ್ತು ವಿಜಯ್ ಸೇತುಪತಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಹಪಸ ಚಿತ್ರ ನೋಡಿಲ್ಲ ಅಂದರೆ ಒಮ್ಮೆ ನೋಡಿಬಿಡಿ.

'ಜವಾನ್' ಹೊಸ ಪೋಸ್ಟರ್
The Daring. The Dazzling. The Dangerous....ಇದು ಜವಾನ್ ಸಿನಿಮಾದ ಹೊಸ ಪೋಸ್ಟರ್‌ಗೆ ಬಾದ್‌ಶಾ ನೀಡಿರುವ ಹೊಸ ಟೈಟಲ್. ನಟನೆಯಲ್ಲಿ ಘಟಾನುಘಟಿಗಳಾದ ಶಾರುಖ್ ಖಾನ್, ನಯನತಾರಾ ಮತ್ತು ವಿಜಯ್ ಸೇತುಪತಿಯನ್ನು ಒಂದೇ ಚೌಕಟ್ಟಿನಲ್ಲಿ ಇರಿಸಿರುವ ಪೋಸ್ಟರ್ ಹೊಸ ಹುಮ್ಮಸ್ಸು ಕೊಡುವಂತಿದೆ.
ಧೈರ್ಯ.. ಬೆರಗು.. ಅಪಾಯ.. ಎಂಬ ಅಂಶಗಳನ್ನು ಶಾರುಖ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಆದರೆ ಯಾರು ಯಾವುದು ಎಂಬ ಬಗ್ಗೆ ಹೇಳಿಲ್ಲ. ನಾಲಕಗು ಭಾಚೆಗಳಲ್ಲಿರುವ ಪೋಸ್ಟರ್ ಹಂಚಿಕೊಂಡಿರುವ ಅವರು, "ದಿ ಡೇರಿಂಗ್. ದಿ ಡ್ಯಾಜ್ಲಿಂಗ್. ದಿ ಡೇಂಜರಸ್. ಜವಾನ್ 2023 ರ ಸೆಪ್ಟೆಂಬರ್ 7 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ" ಎಂದು ಬರೆದಿದ್ದಾರೆ.
ಶಾರುಖ್ ಖಾನ್ ಕಳೆದ ಸೋಮವಾರ ಅಂದರೆ ಚಿತ್ರ ಬಿಡುಗಡೆಗೆ ಸರಿಯಾಗಿ ಒಂದು ತಿಂಗಳ ಕೌಂಟ್‌ಡೌನ್ ಶುರುವಾಗುತ್ತಿದ್ದಂತೆ ಹೊಸ ಪ್ರೋಮೋವನ್ನು ಪೋಸ್ಟ್ ಮಾಡಿದ್ದರು.ಆ ಪೋಸ್ಟರ್‌ನಲ್ಲಿ ಸಿನಿಮಾದ ಝಲಕ್ ಕಾಣಿಸಿಕೊಂಡಿತ್ತು. " 30 ದಿನಗಳು ಬಾಕಿ.. ಟಿಕ್.. ಟಾಕ್ ...ಜವಾನ್ 7ನೇ ಸೆಪ್ಟೆಂಬರ್ 2023 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ" ಎಂದಿದ್ದರು.

ಮತ್ತೊಂದು 'ಜವಾನ್' ಪೋಸ್ಟರ್
ಆಗಸ್ಟ್ 7 ರಂದು, 'ಜವಾನ್' 30 ದಿನಗಳ ಕೌಂಟ್‌ಡೌನ್ ಪ್ರಾರಂಭವಾಗುತ್ತಿದ್ದಂತೆ, ಶಾರುಖ್ ಖಾನ್ 'ಜವಾನ್' ನಿಂದ ತಮ್ಮ ಹೊಸ ಲುಕ್ಕಿನ ಪೋಸ್ಟರ್ ಅನ್ನು ಬಿಟ್ಟಿದ್ದರು. ಇದರಲ್ಲಿ ಶಾರುಖ್ ಖಾನ್ ತನ್ನ ಬೋಳು ತಲೆಯ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದೆ ಬ್ಯಾಂಡೇಜ್ ಹಾಕಿದ್ದ ಪೋಸ್ಟರ್‌ಗಿಂತ ಇದು ಬೇರೆ ತರಹದ್ದಾಗಿತ್ತು. ನಾನು ಒಳ್ಳೆಯವನಾ...? ಕೆಟ್ಟವನಾ...? ಎಂದು ತಿಳಿಯಲು 30 ದಿನಗಳು ಬಾಕಿಯಿದೆ ಎಂದಿದ್ದರು.
ಜವಾನ್
ಇದೇ ಮೊದಲ ಬಾರಿಗೆ ತಮಿಳು ನಿರ್ದೇಶಕ ಅಟ್ಲಿ ಹಿಂದಿ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್, ನಯನತಾರಾ ನಾಯಕಿಯಾಗಿ ಹಾಗೂ ವಿಜಯ್ ಸೇತುಪತಿ ಖಳನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರಿಯಾಮಣಿ ಸಹ ಚಿತ್ರದ ತಾರಾಗಣದಲ್ಲಿದ್ದಾರೆ. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸಹ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ.


Click it and Unblock the Notifications










