ದೀಪಾವಳಿ ಹಬ್ಬಕ್ಕೆ ಫ್ಯಾನ್ಸ್‌ಗೆ ಗಿಫ್ಟ್ ಕೊಟ್ಟ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್!

ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಶಾರುಖ್ ಖಾನ್ ನಟನೆಯ ಡಂಕಿ ಕೂಡ ಒಂದಾಗಿದೆ. ಇತ್ತೀಚೆಗೆ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಟೀಸರ್‌ಗೆ ಭರ್ಜರಿ ಪ್ರತಿಕ್ರಿಯೆ ಬಂದಿದೆ. ಇದೇ ಉತ್ಸಾಹದಲ್ಲಿರುವ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಡಂಕಿ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ, ತಾಪ್ಸಿ ಪನ್ನು ಮತ್ತು ವಿಕ್ಕಿ ಕೌಶಲ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಡಂಕಿ ಡ್ರಾಪ್ 1 ಚಿತ್ರದ ಟೀಸರ್‌ಗೆ ಪ್ರೇಕ್ಷಕ ಪ್ರಭು ಜೈ ಎಂದಿದ್ದಾರೆ. ಇದಾದ ಕೆಲವು ದಿನಗಳ ಹಿಂದೆ ಹೊಸ ಪೋಸ್ಟರ್‌ಗಳನ್ನು ಸಹ ಹಂಚಿಕೊಂಡಿದ್ದರು. ಈಗ, ನವೆಂಬರ್ 10, ಧನ್ತೇರಸ್ (ದೀಪಾವಳಿಗೂ ಮುನ್ನ ಬರುವ ಹಬ್ಬ) ಸಂದರ್ಭದಲ್ಲಿ, ನಟ ಶಾರುಖ್ ಖಾನ್ ಡಂಕಿಯ ಹೊಸ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ.

shah-rukh-khan-drops-dunki

ಡಂಕಿ ಹೊಸ ಪೋಸ್ಟರ್‌ನಲ್ಲಿ ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್

ಶಾರುಖ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಡಂಕಿಯ ಎರಡು ಹೊಸ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ. ವಿಕ್ಕಿ ಕೌಶಲ್, ತಾಪ್ಸಿ ಪನ್ನು ಮತ್ತು ಇತರರನ್ನು ಒಳಗೊಂಡ ಪೋಸ್ಟರ್‌ಗಳನ್ನು ಹಂಚಿಕೊಂಡ ಅವರು, " ಇಂತಹ ಕುಟುಂಬವಿಲ್ಲದಿದ್ದರೆ, ದೀಪಾವಳಿ ಮತ್ತು ಹೊಸ ವರ್ಷ ಹೇಗೆ ಆಚರಿಸಲು ಸಾಧ್ಯ? ನಿಮ್ಮೊಂದಿಗೆ ಪ್ರಯಾಣಿಸುವುದು, ನಿಮ್ಮೊಂದಿಗೆ ಇರುವುದು ಮತ್ತು ನಿಮ್ಮೊಂದಿಗೆ ಸಂಭ್ರಮಿಸುವುದರಲ್ಲಿ ನಿಜವಾದ ಆಚರಣರ ಅಡಗಿದೆ... ಡಂಕಿಯ ಇಡೀ ಜಗತ್ತು ಇವರುಗಳೆ" ಎಂದು ಹೇಳಿದ್ದಾರೆ.

ಮೊದಲ ಪೋಸ್ಟರ್‌ನಲ್ಲಿ "ಅಪ್ನೋ ಕೆ ಸಾಥ್ ಮನಯೇ ದೀಪಾವಳಿ" (ನಿಮ್ಮವರ ಜೊತೆಗೆ ದೀಪಾವಳಿ ಆಚರಿಸಿ) ಎಂದು ಬರೆಯಲಾಗಿದೆ. ಎರಡನೇ ಪೋಸ್ಟರ್‌ನಲ್ಲಿ ಪಠ್ಯವು "ಯೇ ನಯಾ ಸಾಲ್ ಅಪ್ನೋ ಕೆ ನಾಲ್" (ಈ ಹೊಸ ವರ್ಷವು ಪ್ರೀತಿಯಿಂದ ತುಂಬಲಿ) ಎಂದು ಬರೆಯಲಾಗಿದೆ.

ಶಾರುಖ್‌ ಖಾನ್ ಹಂಚಿಕೊಂಡ ಪೋಸ್ಟರ್‌ಗಳನ್ನೇ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ನಟಿ ತಾಪ್ಸಿ ಪನ್ನು, "ಅದು ದೀಪಾವಳಿ ಆಗಿರಲಿ ಅಥವಾ ಹೊಸ ವರ್ಷವಾಗಿರಲಿ, ಸಮಭ್ರಮಾಚರಣೆಯ ನಿಜವಾದ ಆನಂದ ನಿಮ್ಮ ಪ್ರೀತಿಪಾತ್ರರೊಂದಿಗೆ ಇರುತ್ತದೆ. ಏಕೆಂದರೆ ನಾನು ಮತ್ತು ನನ್ನ ಸ್ನೇಹಿತರು ದೊಡ್ಡ ಧಮಾಲ್ ನೀಡಲು ಸಿದ್ಧರಿದ್ದೇವೆ" ಎಂದಿದ್ದಾರೆ.

shah-rukh-khan-drops-dunki

ಡಂಕಿ ಸಿನಿಮಾ

ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟಿರುವ, ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ ಡಂಕಿ ಸಿನಿಮಾದ ಸೂತ್ರಧಾರ. ರಾಜ್‌ ಕುಮಾರ್ ಹಿರಾನಿ ಮೊದಲ ಬಾರಿ ಶಾರುಖ್ ಖಾನ್ ಜೊತೆಗೆ ಪ್ರೀತಿ ಮತ್ತು ಸ್ನೇಹದ ಒಂದು ಸಾಹಸಗಾಥೆಯನ್ನು ಹೇಳಲು ಕೈಜೋಡಿಸಿದ್ದಾರೆ. ಐವರು ಸ್ನೇಹಿತರು, ಅವರ ಕಥೆಗಳು, ವಿದೇಶದಲ್ಲಿ ನೆಲೆಸಬೇಕು ಎನ್ನುವ ಅವರ ಕನಸುಗಳ ಸುತ್ತ ಡಂಕಿ ಸಿನಿಮಾವನ್ನು ಹೆಣೆಯಲಾಗಿದೆ. ಡಂಕಿ ಡಿಸೆಂಬರ್ 22 ರಂದು ಥಿಯೇಟರ್‌ಗಳಿಗೆ ಬರಲಿದೆ.

ಟೈಗರ್ 3 ಜೊತೆಗೆ ಡಂಕಿ ಟೀಸರ್

ಬಾಲಿವುಡ್ ಹಂಗಾಮಾ ಪ್ರಕಾರ, ಶಾರುಖ್ ಖಾನ್ ಅಭಿನಯದ ಡಂಕಿ ಚಿತ್ರದ ಮೊದಲ ಟೀಸರ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅವರ ಟೈಗರ್ 3 ಸಿನಿಮಾದೊಂದಿಗೆ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಲಿದೆ. ಟೈಗರ್ 3 ರ ನಂತರ ಡಂಕಿ ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾವಾಗಿದೆ. ಇದೇ ಕಾರಣಕ್ಕೆ ಸಲ್ಮಾನ್ ಚಿತ್ರದೊಂದಿಗೆ ಡಂಕಿ ಟೀಸರ್ ಪ್ಲೇ ಆಗಲಿದೆ.

More from Filmibeat

English summary
Shah Rukh Khan drops Dunki new poster.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X