For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟ ಶಾರುಖ್ ಖಾನ್ ಆಫೀಸ್ ಈಗ ಐಸಿಯು ವಾರ್ಡ್

  |

  ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಕೊರೊನಾ ರೋಗಿಗಳ ಚಿಕಿತ್ಸೆಗೆ ತನ್ನ ಆಫೀಸ್ ಅನ್ನೆ ಬಿಟ್ಟುಕೊಟ್ಟಿದ್ದಾರೆ. ಕಳೆದ ಏಪ್ರಿಲ್ ನಲ್ಲಿಯೇ ಬಾಂಬೆ ಮುನ್ಸಿಪಲ್ ಕಾರ್ಪೋರೇಷನ್ ಗೆ ಕೊರೊನಾ ರೋಗಿಗಳ ಚಿಕಿತ್ಸೆಗೆ ಆಫೀಸ್ ನೀಡಿದ್ದರು. ಇದೀಗ ಅದೇ ಆಫೀಸ್ ಅನ್ನು ಐಸಿಯು ಆಗಿ ಪರಿವರ್ತನೆ ಮಾಡಲಾಗಿದೆ.

  ಈ ಮೊದಲು ಆಫೀಸ್ ನಲ್ಲಿ ರೋಗ ಲಕ್ಷಣವಿಲ್ಲದ ಸೋಂಕಿತರನ್ನು ಇರಿಸಲು ಮುಂಬೈನ ಖಾನ್ ನಲ್ಲಿರುವ ತನ್ನ ಆಫೀಸ್ ಅನ್ನು ನೀಡಿದ್ದರು. ಆ ನಂತರ ಜುಲೈನಲ್ಲಿ ಈ ಆ ಜಾಗವನ್ನು ಐಸಿಯು ಆಗಿ ಬದಲಾಯಿಸುವ ನಿರ್ಧಾರಕ್ಕೆ ಬಂದಿದ್ದರು. ಕೊರೊನಾ ರೋಗಿಗಳು ಹೆಚ್ಚಾಗುವ ಕಾರಣ ಉತ್ತಮ ಚಿಕಿತ್ಸೆ ನೀಡುವ ಸಲುವಾಗಿ ಆಫೀಸ್ ಅನ್ನು ಐಸಿಯು ಆಗಿ ಬದಲಾಯಿಸುವ ಕೆಲಸ ಪ್ರಾರಂಭವಾಗಿತ್ತು.

  ಫೋಟೋ ವೈರಲ್: ತನ್ನ 'ಮನ್ನತ್' ಬಂಗಲೆಯನ್ನು ಪ್ಲಾಸ್ಟಿಕ್ ನಿಂದ ಮುಚ್ಚಿದ ಶಾರುಖ್ ಖಾನ್

  ಇದೀಗ ಐಸಿಯು ಸೌಲಭ್ಯ ಕಾರ್ಯನಿರ್ವಹಿಸುತ್ತಿದೆ. ಮೊದಲು 66 ರೋಗಿಗಳನ್ನು ಅಲ್ಲಿ ದಾಖಲಿಸಲಾಗಿತ್ತು. ಅದರಲ್ಲಿ 54 ಜನರು ಚೇತರಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. ಇನ್ನುಳಿದ 12 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾರುಖ್ ಖಾನ್ ಆಫೀಸ್ ಬಿಟ್ಟುಕೊಟ್ಟಿರುವುದಲ್ಲದೆ ಐಸಿಯು ನಿರ್ಮಾಣದ ಖರ್ಚನ್ನು ಶಾರುಖ್ ಅವರ ಮೀರ್ ಫೌಂಡೇಶನ್ ನಿಂದ ನೀಡಿದ್ದಾರೆ.

  ಇನ್ನೂ ಶಾರುಖ್ ಖಾನ್ ಮೀರ್ ಫೌಂಡೇಶನ್, ಖಾರ್ ನಲ್ಲಿರುವ ಹಿಂದೂಜಾ ಆಸ್ಪತ್ರೆ, ಬಿಎಂಸಿ ಸಹಯೋಗದೊಂದಿಗೆ 15 ಹಾಸಿಗೆಗಳ ಸೌಲಭ್ಯವನ್ನು ನೀಡಿದೆ. ಈ ಬಗ್ಗೆ ಮಾತನಾಡಿದ ಹಿಂದೂಜಾ ಆಸ್ಪತ್ರೆಯ ಡಾ. ಅವಿನಾಶ್ ಸುಪೆ, "ಇದು ಹೆಚ್ಚಿನ ಆಪಾಯಕಾರಿ ಮತ್ತು ತೀರ ಸಮಸ್ಯೆ ಇರುವ ರೋಗಿಗಳಿಗೆ ವೆಂಟಿಲೇಟರ್, ಆಮ್ಲಜನಕ ಯಂತ್ರಗಳು, ದ್ರವ ಆಮ್ಲಜನಕ ಸಂಗ್ರಹ ಟ್ಯಾಂಕ್ ಗಳನ್ನು ಹೊಂದಿದೆ. ಈ ಸೇವೆ ಹಿಂದೂಜಾ ಆಸ್ಪತ್ರೆಯ ಮಾರ್ಗದರ್ಶನದಲ್ಲಿ ನಡೆಯಲಿದೆ" ಎಂದಿದ್ದಾರೆ.

  English summary
  Bollywood Actor Shah Rukh Khan office converted into ICU for corona patients.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X