ಕ್ಯಾಲಿಫೋರ್ನಿಯಾ ವಿವಿಯಿಂದ ಪದವಿ ಪಡೆದ ಶಾರುಖ್ ಪುತ್ರ ಆರ್ಯನ್: ಫೋಟೋ ವೈರಲ್

ಬಾಲಿವುಡ್‌ನ ಸ್ಟಾರ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಹೊಸ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರ್ಯನ್ ಖಾನ್ ಕ್ಯಾಲಿಫೋರ್ನಿಯಾ ವಿವಿಯಿಂದ ಪದವಿ ಪಡೆದ ಸಮಾರಂಭದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸ್ಟಾರ್ ಕಿಡ್ ಆರ್ಯನ್ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದಾರೆ. ಪದವಿ ಪಡೆದ ಸರ್ಟಿಫಿಕೇಟ್ ಮತ್ತು ಸಮಾರಂಭದ ಉಡುಪು ಧರಿಸಿರುವ ಆರ್ಯನ್ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ಶಾರುಖ್ ಪುತ್ರ ಆರ್ಯನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿಲ್ಲ. ಆದರೆ ಅಭಿಮಾನಿಗಳು ಈ ಫೋಟೋ ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ.

ಕೊರೊನಾ ವೈರಸ್ ಹಾವಳಿಯ ನಡುವೆಯೂ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಪದವಿ ಪ್ರದಾನ ಸಮಾರಂಭ ನಡೆಯಿತು. ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ದೂರ ದೂರ ಕೂರಿಸಿ ಪದವಿ ಪ್ರದಾನ ಸಮಾರಂಭ ನಡೆಸಲಾಗಿದೆ. ಈ ಸಮಾರಂಭದಲ್ಲಿ ಶಾರುಖ್ ಪುತ್ರ ಆರ್ಯನ್ ಕೂಡ ಇದ್ದರು.

Actor Shah Rukh Khan son Aryan Shah Rukh Khan graduates from USC

ಆರ್ಯನ್ ಖಾನ್ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್, ಸಿನಿಮ್ಯಾಟಿಕ್ ಆರ್ಟ್ಸ್, ಫಿಲ್ಮ್ ಅಂಡ್ ಟೆಲಿವಿಷನ್ ಪ್ರೊಡಕ್ಷನ್, ಸ್ಕೂಲ್ ಆಫ್ ಸಿನಿಮ್ಯಾಟಿಕ್ ಆರ್ಟ್ಸ್ ನಲ್ಲಿ ಪದವಿ ಪಡೆದಿದರು. ಶಾರುಖ್ ಪುತ್ರನಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಕಳೆದ ತಿಂಗಳು ಅಂದರೆ ಏಪ್ರಿಲ್‌ನಲ್ಲಿ ಶಾರುಖ್ ಪತ್ನಿ ಗೌರಿ ಖಾನ್ ಪುತ್ರನ ಜೊತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಮುಂಬೈನಲ್ಲಿ ಹೆಚ್ಚಾದ ಕೊರೊನಾದಿಂದ ಗೌರಿ ಮತ್ತು ಆರ್ಯನ್ ಇಬ್ಬರು ಮುಂಬೈ ತೊರೆದು ವಿದೇಶಕ್ಕೆ ಹಾರಿದರು ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೀಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ಗೌರಿ ಪುತ್ರನ ಜೊತೆ ಪದವಿ ಪ್ರದಾನ ಸಮಾರಂಭಕ್ಕೆ ತೆರಳಿದ್ದರು ಎನ್ನುವುದು ಗೊತ್ತಾಗಿದೆ.

ಆ ಸಮಯದಲ್ಲಿ ಶಾರುಖ್ ಖಾನ್ ಐಪಿಎಲ್ ನಲ್ಲಿ ಬ್ಸುಸಿಯಾಗಿದ್ದ ಕಾರಣ ಪುತ್ರನ ಪದವಿ ಪ್ರದಾನ ಸಮಾರಂಭರಕ್ಕೆ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇನ್ನು ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಕೂಡ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

More from Filmibeat

English summary
Bollywood Actor Shah Rukh Khan son Aryan Shah Rukh Khan graduates from USC.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X