For Quick Alerts
  ALLOW NOTIFICATIONS  
  For Daily Alerts

  ಶಾರುಖ್‌ ಖಾನ್‌ ಹುಟ್ಟುಹಬ್ಬ: ಅಭಿಮಾನಿಗಳನ್ನು ಭೇಟಿ ಮಾಡ್ತಾರಾ SRK

  |

  ನಟ ಶಾರುಖ್ ಖಾನ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಟ ಶಾರುಖ್ ಖಾನ್‌ 56ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದ್ರೆ ಈ ಬಾರಿ ಶಾರುಖ್ ಹುಟ್ಟು ಹಬ್ಬ ಪ್ರತೀ ಬಾರಿಯಂತೆ ಇರುವುದಿಲ್ಲ. ಯಾಕೆಂದರೆ ಮಗ ಆರ್ಯನ್‌ ಖಾನ್‌ ಇತ್ತೀಚಿಗಷ್ಟೇ ಜೈಲಿನಿಂದ ಮನೆಗೆ ಬಂದಿದ್ದಾನೆ. ಇದು ಶಾರುಖ್‌ ಕುಟುಂಬಕ್ಕೆ ಸಂತಸ ತಂದಿದೆ. ಆದ್ರೆ ಆ ನೋವು ಶಾರುಖ್ ಕುಟುಂಬವನ್ನು ಬಾಧಿಸುತ್ತಾ ಇರುವುದರಿಂದ ಈ ಬಾರಿಯ ಹುಟ್ಟು ಹಬ್ಬ ಸರಳವಾಗಿ ಇರುತ್ತದೆ.

  ಬಾಲಿವುಡ್‌ನಲ್ಲಿ ಇತ್ತೀಚೆಗೆ ಬಿರುಗಾಳಿ ಎಬ್ಬಿಸಿದ ಸುದ್ದಿ ಅಂದ್ರೆ ಅದು ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಡ್ರಗ್‌ ಪ್ರಕರಣ. ಈ ಸುದ್ದಿ ಬಾಲಿವುಡ್‌ನಲ್ಲಿ ಮಾತ್ರವಲ್ಲ ದೇಶಾದ್ಯಂತ ಸಂಚಲನ ಹುಟ್ಟು ಹಾಕಿತ್ತು. ಈಗ ಆರ್ಯನ್‌ ಮನೆಗೆ ಬಂದಿದ್ದಾನೆ. ಮಗ ಮನೆಗೆ ಬಂದ ಸಂತಸ ಬಂದಿದ್ದಾನೆ ಅನ್ನೋ ಸಂಭ್ರಮದಲ್ಲಿ ಹುಟ್ಟು ಆಚರಿಸಿಕೊಳ್ಳಲು ಶಾರುಖ್ ತಯಾರಾಗಿಲ್ಲ. ಯಾಕೆಂದರೆ ಇದು ಶಾರುಖ್ ಬದುಕಿನ ದುರಂತ ಎಂದೇ ಹೇಳ ಬಹುದು. ಮಗ ಜೈಲಿಗೆ ಹೋದ ಕರಾಳ ದಿನಗಳಿಂದ ಶಾರುಖ್‌ ಸದ್ಯ ಸುಧಾರಿಸಿಕೊಳ್ಳುತ್ತಿದ್ದಾರೆ.

  ಶಾರುಖ್ ಹುಟ್ಟು ಹಬ್ಬ ಅಭಿಮಾನಿಗಳ ಪಾಲಿನ ದೊಡ್ಡ ಸಂಭ್ರಮ

  ಶಾರುಖ್‌ ಖಾನ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ. ದೇಶಾದ್ಯಂತ ಶಾರುಖಾನ್‌ಗೆ ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲ ವಿಶ್ವದಾದ್ಯಂತ ಶಾರುಖ್‌ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗಾಗಿ ಶಾರುಖಾನ್‌ ಹುಟ್ಟು ಹಬ್ಬ ಅಂದರೆ ಅಭಿಮಾನಿಗಳು ದೊಡ್ಡ ಹಬ್ಬದಂತೆ ಆಚರಿಸುತ್ತಾರೆ. ಇನ್ನೂ ಪ್ರತಿ ವರ್ಷ ನವೆಂಬರ್‌ 2ನೇ ತಾರೀಖು ಬಂತು ಅಂದ್ರೆ ಸಾಕು ಸಾವಿರಾರು ಸಂಖ್ಯೆಯಲ್ಲಿ ಶಾರುಖ್ ಮನ್ನತ್‌ ಮನೆಯ ಮುಂದೆ ಅಭಿಮಾನಿ ಬಳಗ ನೆರೆಯುತ್ತೆ. ಶಾರುಖ್ ಖಾನ್‌ ಪ್ರತೀ ವರ್ಷವೂ ಅಭಿಮಾನಿಗಳನ್ನ ನೋಡಿ ಮಾತನಾಡಿಸುತ್ತಿದ್ದರು. ಅಂತೆಯೇ ಈ ಬಾರಿಯೂ ಅಭಿಮಾನಿಗಳು ಶಾರುಖ್ ಮನೆಯತ್ತ ಹರಿಸು ಬರುವ ಸಾಧ್ಯತೆ ಇದೆ. ಶಾರುಖ್ ಕೂಡ ಅಭಿಮಾನಿಗಳಿಗೆ ಬೇಸರ ಮಾಡದೇ ಅವರೊಂದಿಗೆ ಮಾತನಾಡಿ, ಕಷ್ಟದ ದಿನಗಳಲ್ಲಿ ಜೊತೆಗೆ ಇದ್ದುದ್ದಕ್ಕೆ ಧನ್ಯವಾದ ತಿಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

  ಈ ಬಾರಿಯ ಹುಟ್ಟುಹಬ್ಬ ಶಾರುಖ್ ಖಾನ್‌ಗೆ ಬಹಳ ವಿಶೇಷವಾದದ್ದು ಎಂದು ಹೇಳಬಹುದು. ಯಾಕೆಂದರೆ ನವಂಬರ್ 13ಕ್ಕೆ ಆರ್ಯನ್ ಖಾನ್ ಹುಟ್ಟುಹಬ್ಬ ಇದೆ. ಜೊತೆಗೆ ದೀಪಾವಳಿ ಹಬ್ಬ ಕೂಡ ಇದೆ. ಇನ್ನೂ ಶಾರುಖ್ ಖಾನ್ ಹುಟ್ಟು ಹಬ್ಬಕ್ಕೂ ಮೊದಲೇ ಮಗ ಮನೆಗೆ ಬಂದಿರೋದು ಕೂಡ ಸಂತಸಂದಿದೆ. ಆದರೆ ಈ ಬಾರಿ ಶಾರುಖ್ ತಮ್ಮ ಹುಟ್ಟು ಹಬ್ಬವನ್ನ ಸರಳವಾಗಿ ಆಚರಿಸಿಕೊಳ್ಳಲಿದ್ದಾರೆ. ಸಾಮಾಜಿಕಜಾಲತಾಣದಲ್ಲಿ ಸಿನಿಮಾ ಮಂದಿ ಮತ್ತು ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದು ಬರ್ತಿದೆ.

  ಇನ್ನೂ ಆರ್ಯನ್ ಖಾನ್‌ ಪ್ರಕರಣದಿಂದ ಶಾರುಖಾನ್ ಸಿನಿಮಾ ಕೆಲಸಗಳಿಗೆ ಬ್ರೇಕ್ ಹಾಕಿದ್ದರು. ಮಗನ ಚಿಂತೆಯಲ್ಲಿ ಅವರು ಸರಿಯಾಗಿ ಬೇರೆ ಕೆಲಸಗಳತ್ತ ಗಮನ ಕೊಟ್ಟಿರಲಿಲ್ಲ. ಈಗ ಶಾರುಖ್ ಖಾನ್‌ ಮತ್ತೇ ಸಿನಿಮಾ ಕೆಲಸಗಳತ್ತ ಗಮನ ಹರಿಸುತ್ತಿದ್ದಾರೆ. ಮಗ ಆರ್ಯನ್‌ ಖಾನ್‌ ಹುಟ್ಟು ಹಬ್ಬದ ನಂತರ ಸಿನಿಮಾ ಕೆಲಸಗಳಿಗೆ ಶಾರುಖ್‌ ಖಾನ್‌ ಮರಳಲಿದ್ದಾರೆ ಎನ್ನಲಾಗುತ್ತಿದೆ. ನವೆಂಬರ್ 13ರಂದು ಆರ್ಯನ್‌ ಹುಟ್ಟು ಹಬ್ಬ ಇದೆ. ಹಾಗಾಗಿ ನವೆಂಬರ್‌ 13ರ ನಂತರ ಶಾರುಖ್ ಖಾನ್ ಶೂಟಿಂಗ್‌ನಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಶಾರುಖ್‌ ಖಾನ್‌ ಹುಟ್ಟು ಹಬ್ಬ ಇರುವ ಕಾರಣಕ್ಕೆ ಅವರ ಸಿನಿಮಾಗಳ ಬಗ್ಗೆ ಹೊಸ ಅಪ್ಡೇಟ್‌ ಸಿಗಬಹುದು ಎಂದು ಅಭಿಮಾನಿ ಬಳಗ ಎದುರು ನೋಡುತ್ತಿದೆ.

  English summary
  Special Day For Shah Rukh Khan: Will He Meet The Fans

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X