ಹುಚ್ಚರಂತೆ ಏಕೆ ಕೂಗುತ್ತಿದ್ದಿರಾ?: ಪಾಪರಾಜಿಗಳ ಮೇಲೆ ಸಿಟ್ಟಿಗೆದ್ದ ಶಾಹಿದ್ ಕಪೂರ್

ಸೆಲೆಬ್ರಿಟಿಗಳು ಮತ್ತು ಪಾಪರಾಜಿಗಳ ನಡುವಿನ ಸಂಬಂಧ ಕೆಲವೊಮ್ಮೆ ತುಂಬಾ ಚೆನ್ನಾಗಿರುತ್ತದೆ. ಮತ್ತೆ ಕೆಲವೊಮ್ಮೆ ತೀರಾ ಹಳಸುತ್ತದೆ. ಇದೇ ಕಾರಣ ಪರಿಸ್ಥಿತಿಗಳು. ಸೆಲೆಬ್ರಿಟಿಗಳ ವೈಯಕ್ತಿಕ ಜೀವನದಲ್ಲಿ ಮೂಗು ತೂರಿಸಲು ಹೋಗಿ ಅನೇಕ ಬಾರಿ ಅವರ ಕೋಪಕ್ಕೆ ಪಾಪರಾಜಿಗಳು ತುತ್ತಾಗಿದ್ದಾರೆ. ಇತ್ತೀಚೆಗೆ ತಮನ್ನಾ ಭಾಟಿಯಾ ಬಗ್ಗೆ ಪ್ರಶ್ನೆ ಕೇಳಿ ನಟ ವಿಜಯ್ ವರ್ಮಾರಿಂದ ಪಾಪರಾಜಿಗಳು ಬೈಸಿಕೊಂಡಿದ್ದರು. ಆದರೂ, ಇಂತಹದ್ದೆ ಘಟನೆ ಮತ್ತೆ ನಡೆದಿದೆ.

ಶನಿವಾರ ಮುಂಬೈನಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಪತ್ನಿ ಮೀರಾ ರಜಪೂತ್ ಮತ್ತು ಕುಟುಂಬದೊಂದಿಗೆ ಕಾರ್ಯಕ್ರಮವೊಂದಕ್ಕೆ ಹೊರಗೆ ಬಂದಿದ್ದಾರೆ. ಈ ವೇಳೆ ಪಾಪರಾಜಿಗಳು ಮತ್ತು ಶಾಹಿದ್ ಕಪೂರ್ ನಡುವೆ ವಾಗ್ವಾದ ನಡೆದಿದೆ. ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

actor-shahid-kapoor

ಪಾಪರಾಜಿಗಳ ಮೇಲೆ ಶಾಹಿದ್ ಕಿಡಿ!

ಕಳೆದ ಎರಡು ದಶಕಗಳಿಂದ ಬಾಲಿವುಡ್‌ನಲ್ಲಿರುವ ನಟ ಶಾಹಿದ್ ಕಪೂರ್ ಅಪಾರ ಖ್ಯಾತಿ ಮತ್ತು ಸ್ಟಾರ್‌ಡಮ್ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಬಹಳಷ್ಟು ಪಾಪರಾಜಿಗಳು ಯಾವಾಗಲೂ ಅವರ ಹಿಂದೆ ಇರುತ್ತಾರೆ. ಇಂದು ಕೂಡ ಶಾಹಿದ್ ಕಪೂರ್ ಅವರು ಫೋಸ್ ನೋಡುವಂತೆ ಅನೇಕ ಪಾಪರಾಜಿಗಳು ಹೆಸರಿಡಿದು ಕೂಗಿದ್ದಾರೆ. ಇದಕ್ಕೆ ಅಲ್ಲೇ ನಿಂತಿದ್ದ ನಟ ಸಿಟ್ಟು ಮಾಡಿಕೊಂಡಿದ್ದಾರೆ.

ತಮ್ಮ ಪತ್ನಿ ಮೀರಾ ರಜಪೂತ್ ಅವರೊಂದಿಗೆ ಸಮಾರಂಭವೊಂದರಲ್ಲಿ ಭಾಗವಹಿಸಲು ಶಾಹಿದ್ ಹೊರಗೆ ಹೋಗಿದ್ದರು. ಈ ವೇಳೆ ಪಾಪರಾಜಿಗಳ ಕಣ್ಣೀಗೆ ಬಿದ್ದಿದ್ದಾರೆ. "ನೀವು ಯಾಕೆ ಕೂಗುತ್ತಿದ್ದೀರಿ..? ನಾನು ಇಲ್ಲಿಯೇ ಇದ್ದೇನೆ. ನೀವು ಹುಚ್ಚನಂತೆ ಏಕೆ ಕೂಗುತ್ತಿದ್ದೀರಿ?" ಎಂದು ಪ್ರಶ್ನಿಸಿದ್ದಾರೆ.

actor-shahid-kapoor

ಸಮಾಧಾನವಾಗಿರುವಂತೆ ಪಾಪರಾಜಿಗಳಿಗೆ ಹೇಳಿದ ಅವರು "ನಾನು ನನ್ನ ಕಾರಿನಲ್ಲಿ ಇಲ್ಲಿಂದ ತೆರಳಿದ ನಂತರ ನೀವು ಕೂಗಬಹುದು. ಅದರಲ್ಲಿ ಅರ್ಥವಿದೆ. ನಾನು ಇಲ್ಲಿಯೇ ಇದ್ದರೂ ಯಾಕೆ ಹಿಂಗೆ ಕೂಗುತ್ತಿದ್ದಿರಿ..?" ಎಂದು ತುಂಬಾ ಕೋಪದಲ್ಲಿ ಪ್ರತಿಕ್ರಯಿಸಿದ್ದಾರೆ. ಈ ವೇಳೆ ಅವರ ಜೊತೆಗೆ ಅವರ ತಾಯಿ ಮತ್ತು ಪತ್ನಿ ಇದ್ದರು.

ಮುಂಬೈನಲ್ಲಿ ನಡೆದ ಸುಪ್ರಿಯಾ ಪಾಠಕ್ ಮತ್ತು ಪಂಕಜ್ ಕಪೂರ್ ಅವರ ಪುತ್ರ ರುಹಾನ್ ಕಪೂರ್ ಮತ್ತು ಮನುಕೃತಿ ಪಹ್ವಾ ಅವರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಶಾಹಿದ್ ಮತ್ತು ಮೀರಾ ಹೊರಟಿದ್ದರು. ಈ ವೇಳೆ ಶಾಹಿದ್ ಕಪೂರ್ ಬೆಳ್ಳಿಯ ಬಣ್ಣದ ಸೂಟ್ ಮತ್ತು ಪ್ಯಾಂಟ್ ಧರಿಸಿದ್ದರು.

ಶಾಹಿದ್ ಕಪೂರ್ ಮುಂದಿನ ಸಿನಿಮಾಗಳು

ಶಾಹಿದ್ ಅನೀಸ್ ಬಾಜ್ಮಿ ಅವರ ಡಬಲ್ ಟ್ರಬಲ್ ಎಂಬ ಕಾಮಿಡಿ ಫಿಲಂನಲ್ಲಿ ರಶ್ಮಿಕಾ ಮಂದಣ್ಣ ಜೊತೆಗೆ ನಟಿಸಬೇಕಿತ್ತು. ಆದರೆ, ಇತ್ತೀಚೆಗೆ ಅವರು ಸಿನಿಮಾದಿಂದ ಹೊರ ಬಂದಿದ್ದಾರೆ ಎಂಬ ವರದಿಯಿದೆ. ಮುಂದೆ ಸಿದ್ಧಾರ್ಥ್ ರಾಯ್ ಕಪೂರ್ ಮತ್ತು ಝೀ ಸ್ಟುಡಿಯೋಸ್ ನಿರ್ಮಿಸಿರುವ ರೋಷನ್ ಆಂಡ್ರ್ಯೂಸ್ ನಿರ್ದೇಶನದ 'ಕೋಯಿ ಶಕ್' ಚಿತ್ರದ ಚಿತ್ರೀಕರಣದಲ್ಲಿ ತೋಡಗಿಕೊಂಡಿದ್ದಾರೆ. ಈ ಚಿತ್ರವು 2024 ರಲ್ಲಿ ಬಿಡುಗಡೆಯಾಗಲಿದೆ. ಇನ್ನು, ನಟಿ ಕರೀನಾ ಕಪೂರ್ ಜೊತೆಗೆ ಆಕ್ಷನ್ ಥ್ರಿಲ್ಲರ್ ಸಿನಿಮಾವೊಂದರಲ್ಲಿ ನಟ ಕಾಣಿಸಿಕೊಳ್ಳಲಿದ್ದಾರೆ

ಇದಲ್ಲದೇ, ದಿನೇಶ್ ವಿಜಾನ್ ನಿರ್ಮಿಸಲಿರುವ ಹೆಸರಿಡದ ರೊಮ್ಯಾಂಟಿಕ್ ಚಿತ್ರದಲ್ಲಿ ನಟಿಸಲು ಶಾಹಿದ್ ಕಪೂರ್, ಕೃತಿ ಸನೋನ್ ಜೊತೆಗೆ ರೋಮಾನ್ಸ್ ಮಾಡಲಿದ್ದಾರೆ. ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಶಾಹಿದ್ ಕಪೂರ್ ಕೊನೆಯದಾಗಿ ರಾಜ್ ಮತ್ತು ಡಿಕೆ ಅವರ ವೆಬ್ ಸರಣಿ 'ಫರ್ಜಿ'ಯಲ್ಲಿ ಕಾಣಿಸಿಕೊಂಡಿದ್ದರು. ಇದು ಉತ್ತಮ ಪ್ರತಿಕ್ರಿಯೆ ಪಡೆದಿದೆ.

More from Filmibeat

English summary
Actor Shahid Kapoor had an argument with the paparazzi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X