ಸ್ವಯಂ ಪ್ರಚಾರದಲ್ಲಿ ತೊಡಗಿರೋ ನಟರು 'ಹಿಂದೂಸ್ತಾನಿ ಸಂಸ್ಕೃತಿ'ಗೆ ವಿರುದ್ಧವಾಗುತ್ತಿದ್ದಾರೆ: ಶಾಹಿದ್ ಕಪೂರ್
ಬಾಲಿವುಡ್ ನಟ ಶಾಹಿದ್ ಕಪೂರ್ ತಾವು ತಮ್ಮ ಮಹತ್ವಾಕಾಂಕ್ಷೆ ಬಗ್ಗೆ ಮಾತನಾಡುವುದನ್ನು ಬಿಟ್ಟಿದ್ದು, ನನ್ನ ಕೆಲಸಗಳು ಮಾತನಾಡಲಿ ಎಂಬುದರಲ್ಲಿ ನಂಬಿಕೆ ಹೊಂದಿರುವುದಾಗಿ ಹೇಳಿದ್ದಾರೆ. ಆದರೆ ಕೆಲವು ಜನರು ತಮ್ಮನ್ನೇ ಹೊಗಳಿಕೊಳ್ಳುತ್ತಾರೆ. ಅದನ್ನು ನಿಲ್ಲಿಸುವುದೇ ಇಲ್ಲ ಎಂದು ಟೀಕೆ ಮಾಡಿದ್ದಾರೆ.
ನನಗೆ ಸ್ವಯಂ ಪ್ರಚಾರದಲ್ಲಿ ನಂಬಿಕೆಯಿಲ್ಲ ಎಂದು ಹೇಳಿರುವ ಅವರು, ನಾನು ಸ್ವಲ್ಪ ಓಲ್ಡ್ ಸ್ಕೂಲ್ ಟೈಪ್ ಅದಕ್ಕೆ ನಾನು ಬೆಳೆದ ವಾತಾವರಣ, ಮನಸ್ಥಿತಿ ಕೂಡ ಕಾರಣವಿರಬಹುದು. ನನಗೆ ಕೆಲಸಗಳು ಮಾತಾಡಬೇಕು ನಾನಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ಉದಾಹರಣೆಯಾಗಿ ನೀಡಿದ್ದಾರೆ. ಸಚಿನ್ ತಮ್ಮ ಬ್ಯಾಟ್ ಮೂಲಕ ಮಾತನಾಡಿದ್ದಾರೆ ಎಂದು ಶಾಹಿದ್ ಹೇಳುತ್ತಾರೆ.

"ಪ್ರತಿಯೊಬ್ಬರೂ ತಮ್ಮ ಬಗ್ಗೆ ತಾವು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ನನಗೆ ಗೊತ್ತಿಲ್ಲ ಅದು ಹೇಗೆ ನಮ್ಮನ್ನು ನಾವು ಹೇಗೆ ಹೊಗಳಿಕೊಳ್ಳಬಹುದು..? ಅದು ಸ್ವಲ್ಪ ವಿಚಿತ್ರವಾಗಿದೆ. ನನ್ನನ್ನು ಹಾಗೆ ಬೆಳೆಸಿಲ್ಲ" ಎಂದು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.
ತಮ್ಮನ್ನು ತಾವು ಹೊಗಳಿಕೊಳ್ಳುವುದು ಭಾರತೀಯ ಸಂಸ್ಕೃತಿಗೆ ವಿರುದ್ಧವಾದ ಪ್ರವೃತ್ತಿ ಎಂದಿರುವ ಅವರು, "ಇದು ಹಿಂದೂಸ್ತಾನಿ ಸಂಸ್ಕೃತಿ ಅಲ್ಲ. ನಾನು ಇದನ್ನು ಇತರ ಸಂಸ್ಕೃತಿಗಳಲ್ಲಿ ನೋಡಿದ್ದೇವೆ. ಹಿಂದೂ ಸಂಸ್ಕೃತಿಯಲ್ಲಿ ಕೆಲಸ ಮಾಡಿ ಸುಮ್ಮನಿರಿ. ನೀಚು ಎಲ್ಲಿಂದ ಬಂದರೂ ವಿನಮ್ರರಾಗಿರಿ ಮತ್ತು ಹಿರಿಯರನ್ನು ಗೌರವಿಸಿ. ಅದು ನಮ್ಮ ಸಂಸ್ಕೃತಿಯ ಚಿಂತನೆಯಾಗಿದೆ. ಇದರ ಬಗ್ಗೆ ಜೋರಾಗಿ ಮಾತನಾಡಬೇಕು "ಎಂದು ಶಾಹಿದ್ ಕಪೂರ್ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಮತ್ತು ಶಾಹಿದ್ ಕಪೂರ್
ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲಿ ಹೆಚ್ಚು ಆಕ್ಟಿವ್ ಆಗಿರದ ಬಗ್ಗೆ ಮಾತನಾಡಿರುವ ಅವರು, "ನಾನು ಸೋಶಿಯಲ್ ಮಿಡಿಯಾದಲ್ಲಿ ತಮ್ಮ ಜೀವನದ ಬಗ್ಗೆ ಎಲ್ಲವನ್ನೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ನನ್ನ ಮಕ್ಕಳು ಸೆಲಬ್ರಿಟಿಗಳ ಮಕ್ಕಳಲ್ಲದೇ ಎಲ್ಲರ ಮಕ್ಕಳಂತೆ ಸಾಮಾನ್ಯ ಬಾಲ್ಯವನ್ನು ಕಳೆಯಬೇಕು ಎಂದು ನಾನು ಬಯಸುತ್ತಾನೆ" ಎಂದು ನಟ ತಿಳಿಸಿದ್ದಾರೆ.
ನಟ ಶಾಹಿದ್ ಕಪೂರ್ ಮೀರಾ ರಜಪೂತ್ ಅವರನ್ನು ವಿವಾಹವಾಗಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಮಿಶಾ ಮತ್ತು ಮಗ ಜೈನ್. ಇತ್ತೀಚೆಗೆ, ಶಾಹಿದ್ ಕುಟುಂಬವು ತನ್ನ ಮಕ್ಕಳ ಗೌಪ್ಯತೆಯನ್ನು ಕಾಪಾಡಲು ಮುಂಬೈ ಸಮೀಪದ ಪಟ್ಟಣಕ್ಕೆ ಸ್ಥಳಾಂತರಗೊಂಡಿದೆ. ಅಲ್ಲಿನ ಸ್ಥಳವನ್ನು ಇಷ್ಟಪಟ್ಟಿರುವುದಾಗಿ ಮತ್ತು ಸ್ವಲ್ಪ ದೂರದ ಸ್ಥಳದಲ್ಲಿ ಇರುವುದು ಮಕ್ಕಳಿ ದೃಷ್ಟಿಯಿಂದ ತುಂಬಾ ಒಳ್ಳೆಯದು ಎಂದಿದ್ದಾರೆ.

ತಮ್ಮ ಮಕ್ಕಳನ್ನು ಪ್ರಚಾರದಿಂದ ದೂರವಿಡುವ ಕಾರಣ ಇಂತಹ ನಿರ್ಧಾರವನ್ನು ತೆಗೆದುಕೊಂಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, "ಪ್ರಾಮಾಣಿಕವಾಗಿ, ಪೋಷಕರಾಗಿ, ನನ್ನ ಮಕ್ಕಳಿಗೆ ಸಾಧ್ಯವಾದಷ್ಟು ಸಾಮಾನ್ಯ ಜೀವನಶೈಲಿಯನ್ನು ನೀಡುವುದು ನನ್ನ ಕರ್ತವ್ಯವಾಗಿದೆ. ನಾನು ಕೆಲವು ವಿಷಯಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ನಾನು ಅವರಿಗೆ ಸಾಧ್ಯವಾದಷ್ಟು ಸಾಮಾನ್ಯ ಜೀವನ ನೀಡುತ್ತೇನೆ. ನಾನು ವೈಯಕ್ತಿಕವಾಗಿ ಸಹಜತೆಯನ್ನು ಬಯಸುತ್ತೇನೆ. ಜೀವನದಲ್ಲಿ ಸರಳವಾದ ವಿಷಯಗಳಿಗೆ ಹೆಚ್ಚಿನ ಮೌಲ್ಯವಿದೆ ಎಂದು ಭಾವಿಸುತ್ತೇನೆ" ಎಂದಿದ್ದಾರೆ.


Click it and Unblock the Notifications











