"ನನ್ನ ಮುಖ ನೋಡಿದ್ರೆ ನನಗೆ ಅಸಹ್ಯ ಅನ್ನಿಸುತ್ತಿತ್ತು.. ಹೀರೊಗಳ ಕೈಲಿ ಒದೆ ತಿಂದು ಸಾಕಾಗಿದೆ"

ಖಡಕ್ ವಿಲನ್ ಪಾತ್ರಗಳಿಂದ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿರುವ ನಟ ಶರತ್ ಸಕ್ಸೆನಾ. ಮಧ್ಯಪ್ರದೇಶ ಮೂಲದ ನಟ ಬಾಲಿವುಡ್‌ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಶರತ್ ಸಕ್ಸೆನಾ ವೃತ್ತಿ ಜೀವನ, ತಮಗೆ ಸಿಕ್ಕ ಪಾತ್ರಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ ಶರತ್, "ಬಾಲಿವುಡ್‌ನಲ್ಲಿ ನನಗೆ ಒಳ್ಳೆ ಅವಕಾಶಗಳು ಸಿಗುತ್ತಿಲ್ಲ. ಅದಕ್ಕೆ ಹೆಚ್ಚು ಸೌತ್ ಸಿನಿಮಾಗಳಲ್ಲಿ ನಟಿಸ್ತಿದ್ದೀನಿ. ಅಲ್ಲಿ ನನಗೆ ಬರೀ ಫೈಟ್ ಸೀನ್‌ಗಳು ಮಾತ್ರ ಕೊಡುತ್ತಿದ್ದರು. ಬೆಳಗ್ಗೆ ಎದ್ದು ಕನ್ನಡಿ ಮುಂದೆ ನಿಂತರೆ ನನ್ನ ಬಗ್ಗೆ ನನಗೆ ಅಹಸ್ಯ ಮೂಡುತ್ತಿತ್ತು. ಯಾಕಂದರೆ ಯಾವಾಗ ರೆಡಿಯಾಗಿ ಸೆಟ್‌ಗೆ ಹೋದರು ಹೀರೊಗಳ ಕೈಯಲ್ಲಿ ಒದೆ ತಿನ್ನಬೇಕಿತ್ತು. ಅದಕ್ಕೆ ನನ್ ಮುಖ ಕೂಡ ನನಗೆ ಇಷ್ಟವಾಗುತ್ತಿರಲಿಲ್ಲ. ಕೆಲವೊಮ್ಮೆ ನನ್ನನ್ನು ನಾನು ಶಪಿಸಿಕೊಳ್ಳುತ್ತಿದ್ದೆ"

Actor Sharat Saxena shocking comments on Bollywood

"ಹೀರೊಗಳ ಎಂಟ್ರಿ ಸೀನ್‌ಗಳಲ್ಲಿ ನಮ್ಮನ್ನು ತೋರಿಸುತ್ತಿದ್ದರು. ಆಗ ಆತ ಬಂದು ನನ್ನನ್ನು ಚೆನ್ನಾಗಿ ಹೊಡೆದು ಹೀರೊ ಎನಿಸಿಕೊಳ್ಳುತ್ತಿದ್ದ. ಕಳೆದ 30 ವರ್ಷಗಳಿಂದ ಇದೇ ನನ್ನ ಕೆಲಸವಾಗಿ ಹೋಗಿದೆ. ಒಂದು ಕಾಲದಲ್ಲಿ ನಾನು ಬಾಲಿವುಡ್‌ನಲ್ಲಿ ಸಿನಿಮಾ ಮಾಡೋದು ಬೇಡ ಎಂದುಕೊಂಡೆ. ನನ್ನ ಪತ್ನಿ ಬಳಿ ಕೇಳಿದೆ, ಹಣ ಇದ್ಯಾ ಅಂತ. ಇದ್ಯಾ ಒಂದು ವರ್ಷ ಬದುಕಲು ಸಮಸ್ಯೆ ಆಗಲ್ಲ ಎಂದಳು. ಆ ದಿನದಿಂದಲೇ ನಾನು ಹಿಂದಿ ಸಿನಿಮಾಗಳಲ್ಲಿ ನಟಿಸೋದು ನಿಲ್ಲಿಸಿದೆ"

Actor Sharat Saxena shocking comments on Bollywood

ಸೌತ್ ಸಿನಿಮಾಗಳಲ್ಲಿ ನಟನೆ

"ದೇವರ ದಯೆಯಿಂದ ನಾನು ಈ ನಿರ್ಧಾರ ಕೈಗೊಂಡ ಮೂರ್ನಾಲ್ಕು ದಿನಗಳಲ್ಲಿ ಕಮಲ್ ಹಾಸನ್ ಆಫೀಸ್‌ನಿಂದ ಕರೆ ಬಂತು.1991ರಲ್ಲು 'ಗುಣ' ಚಿತ್ರದಲ್ಲಿ ಒಳ್ಳೆ ಪಾತ್ರ ಕೊಟ್ಟು ಅದಕ್ಕೆ ತಕ್ಕ ಸಂಭಾವನೆ ಕೂಡ ಕೊಟ್ಟರು. ಹಿಂದಿಯಲ್ಲಿ 'ಗೂಂಡಾ ರಾಜ್' ಸಿನಿಮಾ ಮಾಡುವಾಗ ಚಿರಂಜೀವಿ ಅವರನ್ನು ಭೇಟಿ ಮಾಡಿದೆ. ಆ ಮೂಲಕ ತೆಲುಗು ಚಿತ್ರರಂಗಕ್ಕೆ ಬಂದೆ. 10ರಿಂಧ 15 ಸಿನಿಮಾಗಳಲ್ಲಿ ನಟಿಸಿದೆ. ನಾಗಾರ್ಜುನ ಸಿನಿಮಾಗಳಲ್ಲಿ ಕೆಲಸ ಮಾಡಿದೆ."

ಪಾರ್ಟಿಗೂ ನನ್ನನ್ನು ಕರೆಯಲ್ಲ

"ಮಲಯಾಳಂನಲ್ಲಿ ಪ್ರಿಯದರ್ಶನ್ ಸಿನಿಮಾಗಳಲ್ಲಿ ನಟಿಸೋ ಅವಕಾಶ ಸಿಕ್ಕಿತು. ಇನ್ನು ನನ್ನನ್ನು ಪಾರ್ಟಿಗಳಿಗೂ ಯಾರು ಕರೆಯಲ್ಲ. ಸ್ಟಾರ್‌ಗಳಿಗೆ ಮಾತ್ರ ಪಾರ್ಟಿಗಳೆಲ್ಲಾ. ಆ ಸ್ಟಾರ್‌ಗಳು ಕೂಡ ಮತ್ತೊಂದು ಹಂತ ತಲುಪಿದ್ದಾರೆ. ಸ್ಟಾರ್ಸ್ ಬರೀ ಸ್ಟಾರ್ಸ್ ಜೊತೆ ಮಾತ್ರ ಮಾತನಾಡುತ್ತಾರೆ. ಸ್ಟಾರ್ಸ್, ಸ್ಟಾರ್ಸ್ ಜೊತೆ ಡಿನ್ನರ್ ಮಾಡ್ತಾರೆ, ಅವರವರೇ ಪಾರ್ಟಿ ಮಾಡಿಕೊಳ್ಳುತ್ತಾರೆ. ನಾವೆಲ್ಲಾ ಚಿತ್ರರಂಗದ ಪರ್ಯಾಯ ಭಾಗ ಆಗಿದ್ದೇವೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವರ್ಕೌಟ್ ಮಾಡಿದ್ರೆ ಒಳ್ಳೆ ನಿದ್ರೆ ಬರುತ್ತೆ

"ಚಿತ್ರರಂಗದಲ್ಲಿ ಒಂದು ಭಾಗ ಇದೆ. ಅದು ಪ್ರಪಂಚಕ್ಕೆ ಗೊತ್ತಿಲ್ಲ. ಇನ್ನುಳಿದಂತೆ ನಾವೆಲ್ಲಾ ಶೂಟಿಂಗ್ ವೇಳೆ ಭೇಟಿ ಆಗುತ್ತೇವೆ. ಶೂಟಿಂಗ್ ಮುಗಿದರೆ ಎಲ್ಲಾ ಮುಗಿಯಿತು ಅಷ್ಟೇ. ಎಂಜಿನಿಯರಿಂಗ್ ಓದಿಕೊಂಡಿರುವ ಶರತ್, ಬಡಗಿ ಕೆಲಸ ಕೂಡ ಕಲಿತ್ತಿದ್ದಾರೆ. ಮನೆಯಲ್ಲಿ ಟೇಬರ್, ಕಬೋರ್ಡ್ ಸೇರಿದಂತೆ ಸಾಕಷ್ಟು ಪೀಠೋಪಕರಣಗಳನ್ನು ತಾವೇ ತಯಾರಿಸಿಕೊಂಡಿದ್ದಾರೆ. ಮನೆಯಲ್ಲಿ ಜಿಮ್ ಇದೆ. ದಿನ ವರ್ಕೌಟ್ ಮಾಡುತ್ತೇನೆ. ಚೆನ್ನಾಗಿ ದೇಹ ದಂಡಿಸಿದರೆ ಒಳ್ಳೆ ನಿದ್ದೆ ಬರುತ್ತದೆ. ಎಲ್ಲವನ್ನು ಮರೆಯುತ್ತೇನೆ" ಎಂದು ಹೇಳಿದ್ದಾರೆ.

ಕನ್ನಡ ಚಿತ್ರದಲ್ಲೂ ನಟನೆ

ಇತ್ತೀಚೆಗೆ ವರ್ಷಗಳಲ್ಲಿ ನಾನು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕಾರಣ ಡೈಲಾಗ್ ಓದಿ ಹೇಳಲು ಆಗಲ್ಲ. ಹಿಂದೆ ಪೇಪರ್‌ನಲ್ಲಿ ಬರೆದು, ಮುಂದೆ ದೊಡ್ಡದಾಗಿ ಹಲಗೆ ಮೇಲೆ ಬರೆದು ತೋರಿಸುತ್ತಿದ್ದರು. ಓದಿ ಹೇಳುತ್ತಿದ್ದೆ. ಈಗ ಬೈಫೋಕಲ್ ಅದು ಸಾಧ್ಯವಾಗುತ್ತಿಲ್ಲ ಎಂದು ಶರತ್ ಸಕ್ಸೇನಾ ಹೇಳಿದ್ದಾರೆ. ಹಿಂದಿಯ 'ಮಿ. ಇಂಡಿಯಾ', 'ತ್ರಿದೇವ್', 'ಫನಾ', 'ಬಾಡಿಗಾರ್ಡ್', 'ದಬಾಂಗ್- 3', ತಮಿಳಿನ 'ಗುಣ', 'ನರಸಿಂಹ', 'ವಿವೇಗಂ' ತೆಲುಗಿನ 'ಮುಠಾಮೇಸ್ತ್ರಿ', 'ಎಸ್. ಪಿ ಪರಶುರಾಮ್' ಕನ್ನಡದ 'ಚಕ್ರವರ್ತಿ' ಸೇರಿದಂತೆ 300ಕ್ಕೂ ಅಧಿಕ ಸಿನಿಮಾಗಳಲ್ಲಿ ಶರತ್ ನಟಿಸಿದ್ದಾರೆ.

More from Filmibeat

English summary
Actor Sharat Saxena shocking comments on Bollywood. he said I did not like my face. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X