For Quick Alerts
  ALLOW NOTIFICATIONS  
  For Daily Alerts

  ಶಶಿ ಕಪೂರ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

  By ಜೇಮ್ಸ್ ಮಾರ್ಟಿನ್
  |

  ಹಿಂದಿ ಚಿತ್ರರಂಗದ ಹಿರಿಯ ನಟ ಶಶಿ ಕಪೂರ್ ಅವರಿಗೆ ಕೇಂದ್ರ ಸರ್ಕಾರ ಹುಟ್ಟುಹಬ್ಬದ ಉಡುಗೊರೆ ನೀಡಿದೆ. ಇತ್ತೀಚೆಗಷ್ಟೇ 77ನೇ ಬರ್ಥ್ ಡೇ ಆಚರಿಸಿಕೊಂಡ ಶಶಿ ಕಪೂರ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ದಾದಾ ಸಾಹೇಬ್ ಫಾಲ್ಕೆ ಘೋಷಿಸಲಾಗಿದೆ.

  ಪೃಥ್ವಿರಾಜ್ ಕಪೂರ್ ಅವರ ಪುತ್ರ ಶಶಿ ಕಪೂರ್ ಅವರು ತಂದೆಯಂತೆ ರಂಗಭೂಮಿ ಕಲಾವಿದರಾಗಿ ಬೆಳೆದು ಚಿತ್ರರಂಗದಲ್ಲಿ ಸ್ಟಾರ್ ಆಗಿ ಬೆಳೆದರು.

  ಹಿಂದಿ ಚಿತ್ರರಂಗದ ಶೋ ಮ್ಯಾನ್ ರಾಜ್ ಕಪೂರ್ ಹಾಗೂ ಶಮ್ಮಿ ಕಪೂರ್ ಅವರ ಕಿರಿಯ ಸೋದರರಾಗಿರುವ ಶಶಿ ಅವರು ಜೆನ್ನಿಫರ್ ಕೆಂಡಲ್ ಅವರನ್ನು ಮದುವೆಯಾದರು. ದಂಪತಿಗೆ ಕುನಾಲ್, ಕರಣ್ ಹಾಗೂ ಸಂಜನಾ ಕಪೂರ್ ಮೂವರು ಮಕ್ಕಳು.[ದಾದಾ ಸಾಹೇಬ್ ಫಾಲ್ಕೆ ಸಾಧನೆಗಳು]

  ರಾಜ್ ಕಪೂರ್ ಅವರ 'ಆವಾರ' ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡ ಶಶಿ ಅವರು 1961ರಲ್ಲಿ ಧರ್ಮ್ ಪುತ್ರ ಚಿತ್ರದ ಮೂಲಕ ಮುಖ್ಯ ಪಾತ್ರಧಾರಿಯಾಗಿ ಅಭಿನಯಿಸತೊಡಗಿದರು.

  ಸುಮಾರು 116 ಹಿಂದಿ ಚಿತ್ರಗಳಲ್ಲಿ ನಟಿಸಿದ್ದು, ಅವುಗಳ ಪೈಕಿ 61ಚಿತ್ರಗಳಲ್ಲಿ ಹೀರೋ ಆಗಿದ್ದಾರೆ. 55 ಬಹು ನಾಯಕ ಪ್ರಧಾನ ಚಿತ್ರಗಳಲ್ಲಿ, 21 ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ 7 ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಶಶಿ ಅಭಿನಯಿಸಿದ್ದಾರೆ.

  2011ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದ ಶಶಿ ಕಪೂರ್ ಅವರು ಮೂರು ಬಾರಿ ರಾಷ್ಟ್ರಪ್ರಶಸ್ತಿ ಗೆದ್ದಿದ್ದಾರೆ. ಕಳೆದ ವರ್ಷ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಾಹಿತಿ, ನಿರ್ದೇಶಕ ಗುಲ್ಜಾರ್ ಅವರಿಗೆ ನೀಡಿ ಗೌರವಿಸಲಾಗಿತ್ತು. 62ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಶಶಿ ಅವರಿಗೆ ಒಲಿದಿದೆ.

  English summary
  Actor Shashi Kapoor to receive India's highest honour in cinema Dadasaheb Phalke Award. Shashi Kapoor recently celebrated his 77th birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X