ಮತ್ತೆ ಒಂದಾದ ಕಿಯಾರ-ಸಿದ್ದಾರ್ಥ್, ಗಾಳಿ ಸುದ್ದಿಗೆ ಬಿತ್ತು ಬ್ರೇಕ್

ಬಾಲಿವುಡ್ ಕ್ಯೂಟ್ ಕಪಲ್ ಎಂದೇ ಫೇಮಸ್ ಆಗಿರುವ ನಟಿ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಬಗ್ಗೆ ಕೆಲ ದಿನಗಳ ಹಿಂದೆ ಗಾಸಿಪ್ ಹರಡಿತ್ತು. ಇವರಿಬ್ಬರು ಬೇರೆ ಬೇರೆ ಆಗಿದ್ದಾರೆ. ಎಂಬ ಗಾಳಿ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡಿತ್ತು. ಆ ಸಮಯದಲ್ಲಿ ಇಬ್ಬರ ನಡೆಯೂ ಕೂಡ ಹಾಗೆ ಇತ್ತು. ಹೀಗಾಗಿ ಬ್ರೇಕಪ್ ಸುದ್ದಿ ಸಖತ್ ಸೌಂಡ್ ಮಾಡಿತ್ತು.

ಬಾಲಿವುಡ್‌ನಲ್ಲಿ ಹಲವು ನಟ-ನಟಿಯರು ನಡುವೆ ಲವ್ ಆಗುತ್ತೆ ಮತ್ತೆ ಬ್ರೇಕಪ್ ಆಗುತ್ತೆ ಇದು ಬಾಲಿವುಡ್ ಮಂದಿಗೆ ಕಾಮನ್ ಆಗಿ ಬಿಟ್ಟಿದೆ. ಸದ್ಯ ಈ ಲಿಸ್ಟ್‌ನಲ್ಲಿ ಕಿಯಾರಾ ಹಾಗೂ ಸಿದ್ದಾರ್ಥ್ ಹೆಸರು ಕೂಡ ಕೇಳಿ ಬರುತ್ತಿತ್ತು.

ಸದ್ಯ ಈ ಗಾಳಿ ಸುದ್ದಿಗೆಲ್ಲಾ ಬ್ರೇಕ್ ಬಿದ್ದಿದ್ದು, ಈ ಮುದ್ದಾದ ಜೋಡಿ ಎಲ್ಲಾ ಮುನಿಸು ಮರೆತು ಮತ್ತೆ ಒಂದಾಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಫ್ಯಾನ್ಸ್ ಕೂಡ ಇವರಿಬ್ಬರೂ ಮುಂದಕ್ಕೂ ಹೀಗೆ ಇರಲಿ ಎಂದು ಹಾರೈಸಿದ್ದಾರೆ.

 ಬ್ರೇಕಪ್ ಸುದ್ದಿಗೆ ಅಂತ್ಯ ಹಾಡಿದ ಕಿಯಾರಾ-ಸಿದ್ದಾರ್ಥ್

ಬ್ರೇಕಪ್ ಸುದ್ದಿಗೆ ಅಂತ್ಯ ಹಾಡಿದ ಕಿಯಾರಾ-ಸಿದ್ದಾರ್ಥ್

ಇತ್ತೀಚಿಗೆ ಬಾಲಿವುಡ್‌ನಲ್ಲಿ ಹೆಚ್ಚು ಫೇಮಸ್ ಆಗಿದ್ದ ಜೋಡಿಗಳೆಂದರೆ ಅದು ಕಿಯಾರಾ ಅಂಡ್ ಸಿದ್ದಾರ್ಥ್. ಇವರಿಬ್ಬರ ಜೋಡಿ ಎಲ್ಲೆಡೆ ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು. ಅಲ್ಲದೆ ಈ ಜೋಡಿ ಪ್ರೀತಿ ವಿಷಯ ಕಂಡು ಅಭಿಮಾನಿಗಳು ಕೂಡ ಖುಷ್ ಆಗಿದ್ದರು. ಆದರೆ, ಕೆಲವೊಂದು ಭಿನ್ನಭಿಪ್ರಾಯದಿಂದ ಸ್ವಲ್ಪ ದಿನ ಈ ಜೋಡಿ ದೂರಾಗಿದ್ದರು. ಆದರೆ, ಇದನ್ನು ಕೆಲವರು ಇವರಿಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಗಾಳಿ ಸುದ್ದಿ ಹರಡಿದ್ದರು. ಸದ್ಯ ಈ ಸುದ್ದಿಗೆಲ್ಲಾ ಬ್ರೇಕ್ ಹಾಕಿ ಮತ್ತೆ ಸಿದ್ದಾರ್ಥ್- ಕಿಯಾರಾ ಒಂದಾಗಿದ್ದಾರೆ.

 'ಭೂಲ್ ಭುಲಯ್ಯ 2' ಸಕ್ಸಸ್‌ಗೆ ವಿಶ್ ಮಾಡಿದ ಸಿದ್ದಾರ್ಥ್

'ಭೂಲ್ ಭುಲಯ್ಯ 2' ಸಕ್ಸಸ್‌ಗೆ ವಿಶ್ ಮಾಡಿದ ಸಿದ್ದಾರ್ಥ್

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅಭಿನಯಿಸಿರುವ 'ಭೂಲ್ ಭುಲಯ್ಯ 2' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಿಟ್ಟಿನಲ್ಲಿ ಕಿಯಾರಾ ಸಿದ್ದಾರ್ಥ್‌ಗೆ ಸಿನಿಮಾ ವೀಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಕಿಯಾರಾ ಮನವಿಯಂತೆ ಸಿದ್ದಾರ್ಥ್ ಸಿನಿಮಾ ನೋಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಅಲ್ಲದೆ ಸಿನಿಮಾ ನೋಡಿದ ಬಳಿಕ ಸಿದ್ದಾರ್ಥ್ ಕಿಯಾರಾ ಅವರನ್ನು ತಬ್ಬಿ ಚಿತ್ರದ ಕುರಿತು ಪ್ರಶಂಸಿದ್ದಾರೆ. ಈ ಮೂಲಕ ತಮ್ಮಿಬ್ಬರ ನಡುವೆ ಯಾವಯದೇ ವೈಮನಸ್ಸು ಇಲ್ಲ ಎಲ್ಲವೂ ಸರಿಯಾಗಿದೆ ಎಂದು ಈ ಜೋಡಿ ತೋರಿಸಿ ಕೊಟ್ಟಿದೆ.

 'ಭೂಲ್ ಭುಲಯ್ಯ 2' ಕಲೆಕ್ಷನ್ ಎಷ್ಟು ?

'ಭೂಲ್ ಭುಲಯ್ಯ 2' ಕಲೆಕ್ಷನ್ ಎಷ್ಟು ?

ನಟ ಕಾರ್ತಿಕ್ ಆರ್ಯನ್ ಮತ್ತು ಕಿಯಾರ ಅಡ್ವಾಣಿ ಅಭಿನಯದ ಹಾರರ್ ಅಂಡ್ ಕಾಮಿಡಿ ಸಿನಿಮಾವಾದ 'ಭೂಲ್ ಭುಲಯ್ಯ 2' ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಸೌತ್ ಸಿನಿಮಾಗಳ ಅಬ್ಬರದಿಂದ ಕಳೆದ ಎರಡು ತಿಂಗಳಿನಿಂದ ಬಾಲಿವುಡ್‌ನ ಸಿನಿಮಾಗಳು ಕಲೆಕ್ಷನ್‌ ಇಲ್ಲದೆ ಒದ್ದಾಡುತ್ತಿದ್ದವು. ಸದ್ಯ ಈಗ 'ಭೂಲ್ ಭುಲಯ್ಯ 2' ಸಿನಿಮಾ ಮೂಲಕ ಕೊಂಚ ಚೇತರಿಕೆ ಕಂಡಿದೆ. ರಿಲೀಸ್ ಆದ ಮೊದಲ ದಿನವೇ 14.11 ಕೋಟಿ ಬಾಚಿಕೊಂಡ ಸಿನಿಮಾ ನಂತರ ವಿಕೇಂಡ್‌ನಲ್ಲಿ 18.34 ಕೋಟಿ ಕಲೆಕ್ಷನ್ ಮಾಡಿಕೊಂಡಿದೆ. ಭಾನುವಾರ 23.5 ಕೋಟಿ ರೂ ಯಿಂದ 25 ಕೋಟಿ ರೂವರೆಗೂ ಭರ್ಜರಿ ಕಲೆಕ್ಷನ್ ಮಾಡಿಕೊಂಡಿದ್ದು, ಈ ಬಾರಿಯ ವಿಕೇಂಡ್‌ನಲ್ಲಿ ಬರೋಬ್ಬರಿ 50 ರಿಂದ 57 ಕೋಟಿ ಕಲೆಕ್ಷನ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

 ಮುಂಬರುವ ಸಿನಿಮಾದಲ್ಲಿ ಕಿಯಾರಾ ಬ್ಯುಸಿ

ಮುಂಬರುವ ಸಿನಿಮಾದಲ್ಲಿ ಕಿಯಾರಾ ಬ್ಯುಸಿ

ನಟ ಸಿದ್ದಾರ್ಥ್ ಮಲ್ಹೋತ್ರಾ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಕಿಯಾರಾ ಕೂಡ ಮುಂಬರುವ ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದರಿಂದ ಇಬ್ಬರು ಒಟ್ಟಾಗಿ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಸದ್ಯ ಸಿದ್ದಾರ್ಥ್ 'ಮಿಷನ್ ಮಜ್ನು' ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ಇದರ ಜೊತೆಗೆ ರೋಹಿತ್ ಶೆಟ್ಟಿ ಜೊತೆ ವೆಬ್ ಸೀರಿಸ್ ಕೂಡ ಮಾಡುತ್ತಿದ್ದಾರೆ. ಇದಾದ ಬಳಿಕ 'ಯೋಧ', 'ಥ್ಯಾಂಕ್ ಗಾಡ್' ಚಿತ್ರಗಳಲ್ಲೂ ಅಭಿನಯಿಸುತ್ತಿದ್ದಾರೆ. ಇನ್ನು ಕಿಯಾರಾ ಕೂಡ 'ಗೋವಿಂದ ನಾಮ್ ಮೇರಾ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಒಟ್ಟಿನಲ್ಲಿ ಎಲ್ಲಾ ಮರೆತು ಈ ಜೋಡಿ ಮತ್ತೆ ಒಂದಾಗಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

More from Filmibeat

English summary
Actor Siddarth Malhotra and Kiara Advani Back Together. Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X