For Quick Alerts
  ALLOW NOTIFICATIONS  
  For Daily Alerts

  ಮೋದಿ ಟ್ರೇಲರ್ ನೋಡಿ ಚೀಪ್ ಟ್ರಿಕ್ ಎಂದ ನಟ ಸಿದ್ಧಾರ್ಥ್

  |
  ಮೋದಿ ಟ್ರೇಲರ್ ನೋಡಿ ಚೀಪ್ ಟ್ರಿಕ್ ಎಂದ ನಟ ಸಿದ್ಧಾರ್ಥ್..!

  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೀವನವನ್ನು ಆಧಾರಾವಾಗಿ ಇಟ್ಟುಕೊಂಡು ಮಾಡಿದ್ದ 'ಪಿ ಎಂ ನರೇಂದ್ರ ಮೋದಿ, ಬೇಸ್ಡ್ ಆನ್ ಟ್ರು ಸ್ಟೋರಿ' ಸಿನಿಮಾದ ಟ್ರೇಲರ್ ನಿನ್ನೆ ಬಿಡುಗಡೆಯಾಗಿದೆ. ಒಂದೇ ದಿನಕ್ಕೆ ಚಿತ್ರದ ಟ್ರೇಲರ್ ಯೂಟ್ಯೂಬ್ ನಲ್ಲಿ 9 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ.

  ಸಿನಿಮಾದ ಟ್ರೇಲರ್ ನೋಡಿ ಎಲ್ಲರೂ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಅದೇ ರೀತಿ ಟಾಲಿವುಡ್ ಹಾಗೂ ಕಾಲಿವುಡ್ ನಟ ಸಿದ್ಧಾರ್ಥ್ ಚಿತ್ರದ ಟ್ರೇಲರ್ ನೋಡಿ ಟ್ವೀಟ್ ಮಾಡಿದ್ದಾರೆ. ಆದರೆ, ಸಿದ್ಧಾರ್ಥ್ ಮಾಡಿರುವ ಟ್ವೀಟ್ ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ.

  ವಿಡಿಯೋ : ನರೇಂದ್ರ ಮೋದಿಯಾಗಿ ಎಂಟ್ರಿ ಕೊಟ್ಟ ವಿವೇಕ್ ಓಬೆರಾಯ್ ವಿಡಿಯೋ : ನರೇಂದ್ರ ಮೋದಿಯಾಗಿ ಎಂಟ್ರಿ ಕೊಟ್ಟ ವಿವೇಕ್ ಓಬೆರಾಯ್

  ''ಪಿ ಎಂ ನರೇಂದ್ರ ಮೋದಿ' ಟ್ರೇಲರ್ ನಲ್ಲಿ ಮೋದಿ ಅವರು ಹೇಗೆ ಬ್ರಿಟಿಷರ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂಬುದನ್ನು ತೋರಿಸುವುದನ್ನು ಮರೆತಿದ್ದಾರೆ. ಒಂದು ವೇಳೆ ಅದನ್ನು ತೋರಿಸಿದ್ದರೆ ಜಾತ್ಯಾತೀತತೆ, ಕಮ್ಯೂನಿಸ್ಟ್, ನಕ್ಸಲರ ಮತ್ತು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಕಾಲೆಳೆಯಬಹುದಿತ್ತು. ಈ ಟ್ರೇಲರ್ ಒಂದು ಚೀಪ್ ಟ್ರಿಕ್ ತರ ಕಾಣುತ್ತಿದೆ.'' ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಮಾತುಗಳ ಮೂಲಕ ಗೇಲಿ ಮಾಡಿದ್ದಾರೆ.

  ಈ ರೀತಿ ಬಯೋಪಿಕ್ ಮಾಡುವ ಸಿನಿಮಾ ಮೇಕರ್ ಗಳ ಪ್ರಾಮಾಣಿಕ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಇತಿಹಾಸವನ್ನು ಬದಲಾಯಿಸಲು ಸಾಧ್ಯ ಇಲ್ಲ ಎಂದಿದ್ದಾರೆ.

  ಖ್ಯಾತ ನಿರ್ದೇಶಕ ಓಮಂಗ್ ಕುಮಾರ್ ಈ ಚಿತ್ರಕ್ಕೆ ಡೈರೆಕ್ಷನ್ ಮಾಡಿದ್ದಾರೆ. ವಿವೇಕ್ ಓಬೆರಾಯ್ ಚಿತ್ರದಲ್ಲಿ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Tollywood and Kollywood actor Siddharth tweets about 'P M Narendra Modi' movie trailer. Vivek Oberoi playing Narendra Modi role in this movie, directed by Omung Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X