ರಶ್ಮಿಕಾರನ್ನು ಹಾಡಿ ಹೊಗಳಿದ ಬಾಲಿವುಡ್ ಸ್ಟಾರ್ ನಟ

ನಟಿ ರಶ್ಮಿಕಾ ಮಂದಣ್ಣ ಈಗಷ್ಟೆ ಬಾಲಿವುಡ್‌ನ ಎರಡು ಸಿನಿಮಾಗಳನ್ನು ಮುಗಿಸಿ ತೆಲುಗಿಗೆ ಮರಳಿದ್ದಾರೆ. ಬಾಲಿವುಡ್‌ನಲ್ಲಿ ಆರಂಭದಲ್ಲಿಯೇ ಇಬ್ಬರು ದೊಡ್ಡ ಸ್ಟಾರ್‌ಗಳೊಟ್ಟಿಗೆ ನಟಿಸುವ ಅವಕಾಶ ರಶ್ಮಿಕಾ ಮಂದಣ್ಣಗೆ ದೊರಕಿದೆ.

ಹಿಂದಿ ಸಿನಿಮಾದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಕಡಿಮೆ ಅವಧಿಯಲ್ಲಿಯೇ ಅಲ್ಲಿ ಬಹಳ ಒಳ್ಳೆಯ ಹೆಸರನ್ನೇ ಸಂಪಾದಿಸಿದ್ದಾರೆ. ಅಮಿತಾಬ್ ಬಚ್ಚನ್ ಜೊತೆಗೆ ನಟಿಸಿದ 'ಗುಡ್‌ ಬೈ' ಚಿತ್ರತಂಡದಿಂದ ರಶ್ಮಿಕಾ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಅದರಲ್ಲೂ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣರ ತಾಯಿ ಪಾತ್ರ ಮಾಡಿರುವ ನೀನಾ ಗುಪ್ತಾ ಅಂತೂ ರಶ್ಮಿಕಾರನ್ನು ಬಹುವಾಗಿ ಹೊಗಳಿದ್ದರು. ಇದೀಗ ಸ್ಟಾರ್ ನಟರೊಬ್ಬರು ರಶ್ಮಿಕಾರನ್ನು ಹೊಗಳಿದ್ದಾರೆ.

ರಶ್ಮಿಕಾ ಒಪ್ಪಿಕೊಂಡ ಮೊದಲ ಬಾಲಿವುಡ್ ಸಿನಿಮಾ 'ಮಿಷನ್ ಮಜ್ನು'ದ ನಾಯಕ ನಟ ಸಿದ್ಧಾರ್ಥ್ ಮಲ್ಹೋತ್ರಾ ನಟಿ ರಶ್ಮಿಕಾ ಮಂದಣ್ಣರ ವ್ಯಕ್ತಿತ್ವವನ್ನು, ನಟನೆಯನ್ನು ಬಹುವಾಗಿ ಹೊಗಳಿದ್ದಾರೆ.

ರಶ್ಮಿಕಾ ಮೃದು ಮನಸ್ಸಿನ ಹುಡುಗಿ: ಸಿದ್ಧಾರ್ಥ್ ಮಲ್ಹೋತ್ರಾ

ರಶ್ಮಿಕಾ ಮೃದು ಮನಸ್ಸಿನ ಹುಡುಗಿ: ಸಿದ್ಧಾರ್ಥ್ ಮಲ್ಹೋತ್ರಾ

'ಮಿಷನ್ ಮಜ್ನು' ಸಿನಿಮಾದ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಸಿದ್ಧಾರ್ಥ್ ಮಲ್ಹೋತ್ರಾ, ''ಆಕೆ ಬಹಳ ಮೃದು ಮನಸ್ಸಿನ ಹುಡುಗಿ. ಒಟ್ಟಿಗೆ ಸಿನಿಮಾದಲ್ಲಿ ನಟಿಸುವುದನ್ನು ನಾವಿಬ್ಬರೂ ಬಹಳ ಎಂಜಾಯ್ ಮಾಡಿದೆವು. ರಶ್ಮಿಕಾ ನಟಿಸಿದ್ದ ಮೊದಲ ಸಿನಿಮಾ ಕಿರಿಕ್ ಪಾರ್ಟಿಯನ್ನು ಕೆಲ ವರ್ಷಗಳ ಹಿಂದೆ ನೋಡಿದ್ದೆ. ನಮ್ಮ ಸಿನಿಮಾ ಮೂಲಕವೇ ಆಕೆ ಬಾಲಿವುಡ್ ಪ್ರವೇಶ ಮಾಡಬೇಕೆಂಬುದು ಮೊದಲೇ ನಿಶ್ಚಯವಾಗಿತ್ತೆನಿಸುತ್ತದೆ. ಆಕೆ ನಮ್ಮ ಸಿನಿಮಾಕ್ಕಾಗಿ ಬಹಳ ಶ್ರಮವಹಿಸಿ ಕೆಲಸ ಮಾಡಿದ್ದಾರೆ, ಸಂಭಾಷಣೆಗಳನ್ನು ಕಲಿಯುವುದು, ಉರ್ದು ಸಂಭಾಷಣೆಗಳನ್ನು ಹೇಳುವುದು ಎಲ್ಲದಕ್ಕೂ ಸಾಕಷ್ಟು ಶ್ರಮ ಹಾಕಿದ್ದಾರೆ'' ಎಂದಿದ್ದಾರೆ ಸಿದ್ಧಾರ್ಥ್ ಮಲ್ಹೋತ್ರಾ.

''ಕಣ್ಣುಗಳನ್ನೇ ಭಾವನೆ ಅಭಿವ್ಯಕ್ತಿಗೊಳಿಸಬಲ್ಲರು ರಶ್ಮಿಕಾ''

''ಕಣ್ಣುಗಳನ್ನೇ ಭಾವನೆ ಅಭಿವ್ಯಕ್ತಿಗೊಳಿಸಬಲ್ಲರು ರಶ್ಮಿಕಾ''

ಮುಂದುವರೆದು ಮಾತನಾಡಿರುವ ಸಿದ್ಧಾರ್ಥ್ ಮಲ್ಹೋತ್ರಾ, ''ರಶ್ಮಿಕಾ ಮಂದಣ್ಣಗೆ ಬಹಳ ಅಭಿವ್ಯಕ್ತಿಶೀಲ ಕಣ್ಣುಗಳಿವೆ. ಆಕೆಯ ಕಣ್ಣುಗಳಿಂದಲೇ ಭಾವನೆಗಳನ್ನು ಅಭಿವ್ಯಕ್ತಿ ಪಡಿಸಬಲ್ಲಳು. ಅವರ ಅಭಿಮಾನಿಗಳು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಹೇಳುತ್ತಿದ್ದರು. ನಾನು ಅದನ್ನು ನೋಡಿ ಮೆಚ್ಚಿಕೊಂಡೆ. ನಮ್ಮ ಸಿನಿಮಾ ಬಿಡುಗಡೆ ಆದ ಮೇಲೆ ರಶ್ಮಿಕಾ ಮಂದಣ್ಣಗೆ ಇನ್ನೂ ಹೆಚ್ಚಿನ ಅವಕಾಶಗಳು ಬಾಲಿವುಡ್‌ನಲ್ಲಿ ಖಂಡಿತ ದೊರಕಲಿವೆ. ಆಕೆ ಗಂಭೀರವಾಗಿ ಗಮನಿಸಬೇಕಾಗಿರುವ ನಟಿ'' ಎಂದಿದ್ದಾರೆ ಸಿದ್ಧಾರ್ಥ್ ಮಲ್ಹೋತ್ರಾ.

ರಶ್ಮಿಕಾರನ್ನು ಹೊಗಳಿದ್ದ ನಟಿ ನೀನಾ ಗುಪ್ತಾ

ರಶ್ಮಿಕಾರನ್ನು ಹೊಗಳಿದ್ದ ನಟಿ ನೀನಾ ಗುಪ್ತಾ

'ಗುಡ್‌ ಬೈ' ಹಿಂದಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣರ ತಾಯಿ ಪಾತ್ರದಲ್ಲಿ ನಟಿಸಿರುವ ನಟಿ ನೀನಾ ಗುಪ್ತಾ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ಬಗ್ಗೆ ಮಾತನಾಡುತ್ತಾ, ''ಆಕೆ ಸಣ್ಣ ಮಗುವಿದ್ದಂತೆ. ಚಿತ್ರೀಕರಣದ ಮೊದಲ ದಿನದಿಂದಲೇ ನಾನು ಆಕೆಯನ್ನು ಬಹಳ ಇಷ್ಟ ಪಡಲು ಆರಂಭಿಸಿದೆ. ಆಕೆ ನಿಜವಾಗಿಯೂ ನನ್ನ ಮಗಳು ಎನ್ನಿಸಲು ಆರಂಭವಾಯ್ತು. ನನಗಂತೂ ಆಕೆ ಬಹಳ ಇಷ್ಟವಾಗತೊಡಗಿದಳು. ಆಕೆಯ ಜೊತೆಗೆ ಸಮಯ ಕಳೆದಷ್ಟು ಆಕೆಯ ಮೇಲಿನ ಪ್ರೀತಿ ಹೆಚ್ಚಾಗುತ್ತಾ ಹೋಗುತ್ತದೆ ಆ ರೀತಿಯ ಹುಡುಗಿ ಆಕೆ. ರಶ್ಮಿಕಾಳದ್ದು ಸ್ವಚ್ಛವಾದ ಹೃದಯ. ಆಕೆ ಬಹಳ ಒಳ್ಳೆಯ ನಟಿ. ಬಹಳ ವಿನಯವಂತೆ, ಸರಳ ಜೀವಿ. ನಾವಿಬ್ಬರು ಕೆಲವೇ ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದರೂ ಸಹ. ನಾವಿಬ್ಬರೂ ಬಹಳ ಕಾಲದಿಂದಲ ಪರಿಚಿತರೇನೋ ಎನ್ನುವಷ್ಟು ಹತ್ತಿರವಾದೆವು. ಚಿತ್ರೀಕರಣದ ಸಂದರ್ಭದಲ್ಲಿ ನಾವಿಬ್ಬರೂ ಪರಸ್ಪರ ಬಹಳ ಹತ್ತಿರವಾದೆವು. ಸೆಟ್‌ನಲ್ಲಿ ಆಕೆ ಮತ್ತು ನಾನು ಅದ್ಭುತವಾದ ಗೆಳೆಯರಂತೆ ಇದ್ದೆವು. ಆಕೆಗೆ ದೊಡ್ಡ ಯಶಸ್ಸು ಭವಿಷ್ಯದಲ್ಲಿ ಕಾದಿದೆ' ಎಂದಿದ್ದಾರೆ.

ಎರಡು ಹಿಂದಿ ಸಿನಿಮಾ ಮುಗಿಸಿರುವ ರಶ್ಮಿಕಾ

ಎರಡು ಹಿಂದಿ ಸಿನಿಮಾ ಮುಗಿಸಿರುವ ರಶ್ಮಿಕಾ

ರಶ್ಮಿಕಾ ಮಂದಣ್ಣ ಮೊದಲಿಗೆ ಹಿಂದಿಯ 'ಮಿಷನ್ ಮಜ್ನು' ಸಿನಿಮಾ ಒಪ್ಪಿಕೊಂಡರು. ಅದರ ಹಿಂದೆಯೇ 'ಗುಡ್ ಬೈ' ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡರು. ಅಮಿತಾಬ್ ಬಚ್ಚನ್, ನೀನಾ ಗುಪ್ತಾ ನಟನೆಯ 'ಗುಡ್ ಬೈ' ಸಿನಿಮಾ ಬೇಗನೆ ಚಿತ್ರೀಕರಣ ಮುಗಿಸಿತು. 'ಮಿಷನ್ ಮಜ್ನು' ಸಿನಿಮಾದ ಚಿತ್ರೀಕರಣ ಕೆಲವು ದಿನಗಳ ಹಿಂದೆಯಷ್ಟೆ ಮುಗಿದಿದೆ. 'ಗುಡ್‌ ಬೈ' ಸಿನಿಮಾವನ್ನು ವಿಕಾಸ್ ಬಾಲ್ ನಿರ್ದೇಶನ ಮಾಡುತ್ತಿದ್ದಾರೆ. 'ಮಿಷನ್ ಮಜ್ನು' ಸಿನಿಮಾವನ್ನು ಶಂಥನು ಬಗ್ಚಿ ನಿರ್ದೇಶನ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಪ್ರಸ್ತುತ ತೆಲುಗಿನ 'ಪುಷ್ಪ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

More from Filmibeat

English summary
Bollywood actor Sidharth Malhotra praised Rashmika Mandanna. He said her eyes were very expressive. She will get many chances in Bollywood. They both acted in 'Mission Majnu' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X