For Quick Alerts
  ALLOW NOTIFICATIONS  
  For Daily Alerts

  2020ರಲ್ಲಿ ಮತ್ತೊಂದು ಸಾವು: ಖ್ಯಾತ ನಟ ವಿಶಾಲ್ ಆನಂದ್ ವಿಧಿವಶ

  |

  ಚಿತ್ರರಂಗಕ್ಕೆ 2020ನೇ ವರ್ಷ ಕರಾಳ ವರ್ಷ ಎನ್ನಬಹುದು. ಈ ವರ್ಷ ಹಲವು ಸೆಲೆಬ್ರಿಟಿಗಳು ಕೊನೆಯುಸಿರೆಳೆದರು. ಇದೀಗ, ಹಿಂದಿ ಚಿತ್ರರಂಗದ ಹಿರಿಯ ಹಾಗೂ ಖ್ಯಾತ ನಟ ವಿಶಾಲ್ ಆನಂದ್ (81) ನಿಧನರಾಗಿದ್ದಾರೆ.

  ಹೆಸರು ಬದಲಿಸಿಕೊಂಡಿದ್ದ ವಿಶಾಲ್ ಆನಂದ್ ಮೂಲ ಹೆಸರು ಭೀಷ್ಮಾಮ್ ಕೊಹ್ಲಿ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಅಕ್ಟೋಬರ್ 4 ರಂದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

  ಹಿಂದಿ ಚಿತ್ರರಂಗದ ಹಿರಿಯ ಚಿತ್ರ ಸಾಹಿತಿ ಅಭಿಲಾಷ್ ನಿಧನ

  1976ರಲ್ಲಿ ತೆರೆಕಂಡಿದ್ದ 'ಚಲ್ತೆ ಚಲ್ತೆ' ಚಿತ್ರದ ಮೂಲಕ ಬಹಳ ದೊಡ್ಡ ಖ್ಯಾತಿ ಗಳಿಸಿಕೊಂಡಿದ್ದರು. ಈ ಚಿತ್ರದಲ್ಲಿ ಸಿಮಿ ಅಗರ್‌ವಾಲ್ ಎದುರು ನಟಿಸಿದ್ದರು. ವೃತ್ತಿ ಜೀವನದಲ್ಲಿ ಸುಮಾರು 11 ಚಿತ್ರಗಳಲ್ಲಿ ವಿಶಾಲ್ ಆನಂದ್ ಬಣ್ಣ ಹಚ್ಚಿದ್ದರು. ಕೆಲವು ಚಿತ್ರಗಳನ್ನು ನಿರ್ದೇಶನ ಸಹ ಮಾಡಿದ್ದು, ಇನ್ನು ಕೆಲವು ಚಿತ್ರಗಳಿಗೆ ನಿರ್ಮಾಪಕರಾಗಿದ್ದರು

  ಹಮರಾ ಅಧಿಕಾರ್, ಸಾ-ರೆ-ಗಾ-ಮ-ಪ, ಟ್ಯಾಕ್ಸಿ ಡ್ರೈವರ್, ಇಂತೆಜಾರ್, ಹಿಂದೂಸ್ತಾನ್ ಕಿ ಕಸಮ್, ಚಲ್ತೆ ಚಲ್ತೆ, ದಿಲ್ ಸೆ ಮೈಲ್ ದಿಲ್, ಕಿಸ್ಮೆತ್ ಮತ್ತು ಮೈನೆ ಜೀನಾ ಸಿಖ್ ಲಿಯಾ ಅಂತಹ ಚಿತ್ರಗಳಲ್ಲಿ ವಿಶಾಲ್ ಕಾಣಿಸಿಕೊಂಡಿದ್ದರು.

  ಅತ್ತಿಗೆ ಸೀಮಂತ ಮುಗಿಸಿದ ದೊಡ್ಡ ಮನವಿಯೊಂದನ್ನು ಮಾಡಿಕೊಂಡ Dhruva Sarja | Filmibeat Kannada

  ನಟ ಪುರಬ್ ಕೊಹ್ಲಿ ಅವರು ವಿಶಾಲ್ ಆನಂದ್‌ಗೆ ಸಂಬಂಧಿಕ ಎನ್ನುವುದು ಅನೇಕರಿಗೆ ತಿಳಿದಿಲ್ಲ. ವಿಶಾಲ್ ಆನಂದ್ ಅವರ ಸೋದರ ಅಳಿಯ ಪುರಬ್ ಕೊಹ್ಲಿ.

  English summary
  Actor Singer Vishal Anand passes away at age 81 after prolonged illness.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X