ಯಾರಾದರು ಈ ವಾರಿಯರ್ ಅಜ್ಜಿಯ ವಿಳಾಸ ತಿಳಿಸಿ: ನಟ ಸೋನು ಸೂದ್, ರಿತೇಶ್ ದೇಶ್ ಮುಖ್

ಲಕ್ಷಾಂತರ ಕಾರ್ಮಿಕರ ನೆರವಿಗೆ ನಿಂತ ನಟ ಸೋನು ಸೂದ್ ರಿಯಲ್ ಲೈಫ್ ಹೀರೋ ಆಗಿದ್ದಾರೆ. ಸೋನು ಸೂದ್ ಕೆಲಸಕ್ಕೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾರ್ಮಿಕರನ್ನು ಸುರಕ್ಷಿತವಾಗಿ ಮರಳಿ ಗೂಡಿಗೆ ಸೇರಿದ್ದಲ್ಲದೆ ಅವರಿಗೆ ಆರ್ಥಿಕ ಸಹಾಯವನ್ನು ಮಾಡುತ್ತಿದ್ದಾರೆ. ವಲಸೆ ಕಾರ್ಮಿಕರಿಗಾಗಿಯೆ ಸಹಾಯವಾಣಿಯನ್ನು ತೆರೆದು ಅದರ ಮೂಲಕ ತೆರವಿಗೆ ದಾವಿಸುತ್ತಿದ್ದಾರೆ.

Recommended Video

1500 ಜನ ವಿದ್ಯಾರ್ಥಿಗಳನ್ನು ವಿದೇಶದಿಂದ ಕರೆತಂದ Sonu Sood | Kyrgyzstan | Filmibeat Kannnada

ಕಾರ್ಮಿಕರನ್ನು ಮರಳಿ ಮನೆಗೆ ಸೇರಿಸುವ ಜವಾಬ್ದಾರಿ ಜೊತೆಗೆ ಅವರಿಗೆ ಕೆಲಸ ಕೊಡಿಸಲು ಮುಂದಾಗಿದ್ದಾರೆ. ಲಾಕ್ ಡೌನ್ ಆದಾಗಿನಿಂದಲೂ ವಲಸೆ ಕಾರ್ಮಿಕರಿಗೆ ಸಹಾಯ ಮಾಡುತ್ತಿರುವ ಸೋನು ಸೂದ್ ಅವರನ್ನು ನಿಜ ಜೀವದ ಹೀರೋ ಎಂದು ಬಣ್ಣಿಸುತ್ತಿದ್ದಾರೆ. ಇದಾಗ ಸೋನು ಸೂದ್ ವಾರಿಯರ್ ಅಜ್ಜಿಯ ವಿಳಾಸ ಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಕೇಳಿಕೊಂಡಿದ್ದಾರೆ. ಯಾರಿದು ವಾರಿಯರ್ ಅಜ್ಜಿ? ಮುಂದೆ ಓದಿ..

ವಾರಿಯರ್ ಅಜ್ಜಿ ವಿಡಿಯೋ ಫುಲ್ ವೈರಲ್

ವಾರಿಯರ್ ಅಜ್ಜಿ ವಿಡಿಯೋ ಫುಲ್ ವೈರಲ್

ಸಾಮಾಜಿಕ ಜಾಲತಾಣದಲ್ಲಿ ವಾರಿಯರ್ ಅಜ್ಜಿ ಫುಲ್ ಫೇಮಸ್. 75 ವರ್ಷದ ಅಜ್ಜಿಯೊಬ್ಬರು ಹೊಟ್ಟೆ ಪಾಡಿಗಾಗಿ ರಸ್ತೆಗೆ ಇಳಿದಿದ್ದಾರೆ. ತಾನು ಕಲಿತ ಕಲೆಯನ್ನು ಪ್ರದರ್ಶಿಸುತ್ತಾ ಹಣ ಸಂಪಾದನೆ ಮಾಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಜ್ಜಿ ಕಲೆಗೆ ಬಾಲಿವುಡ್ ಸ್ಟಾರ್ಸ್ ಫಿದಾ

ಅಜ್ಜಿ ಕಲೆಗೆ ಬಾಲಿವುಡ್ ಸ್ಟಾರ್ಸ್ ಫಿದಾ

ಅಜ್ಜಿಯ ಕಲೆಗೆ ಫಿದಾ ಆಗಿರುವ ಬಾಲಿವುಡ್ ಸ್ಟಾರ್ಸ್ ದಯವಿಟ್ಟು ಅವರ ವಿಳಾಸ ನೀಡಿ ಎಂದು ಕೇಳುತ್ತಿದ್ದಾರೆ. ನಟ ರಿತೇಶ್ ದೇಶಮುಖ್ ಮತ್ತು ಸೋನು ಸೂದ್ ಈ ವಿಡಿಯೋ ಶೇರ್ ಮಾಡಿ. ವಿಳಾಸ ಕೇಳಿದ್ದಾರೆ. ರಿತೇಶ್ ದೇಶಮುಖ್ "ವಾರಿಯರ್ ಅಜ್ಜಿ. ಯಾರಾದರು ಅವರ ವಿಳಾಸ ನೀಡಿ" ಎಂದು ಎಂದಿದ್ದಾರೆ.

ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆ ಹೇಳಿಕೊಡಬೇಕು

ನಟ ಸೋನು ಸೂದ್ ಸಹ ಈ ವಿಡಿಯೋ ಶೇರ್ ಮಾಡಿ ನಮ್ಮ ದೇಶದ ಹೆಣ್ಣುಮಕ್ಕಳಿಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಲು ತರಬೇತಿ ನೀಡಬೇಕು. ಅವರ ವಿಳಾಸವನ್ನು ದಯವಿಟ್ಟು ತಿಳಿಸಿ ಎಂದು ಹೇಳಿದ್ದಾರೆ. "ನಾನು ಒಂದು ಸಣ್ಣ ತರಬೇತಿ ಕೇಂದ್ರವನ್ನು ತೆರೆಯಬೇಕು. ನಮ್ಮ ದೇಶದ ಹೆಣ್ಣುಮಕ್ಕಳಿಗೆ ಸ್ವಯಂ ರಕ್ಷಣೆ ತಂತ್ರಗಳನ್ನು ಹೇಳಿಕೊಡಬೇಕು" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಪುಣೆ ಮೂಲದ ಅಜ್ಜಿ

ಪುಣೆ ಮೂಲದ ಅಜ್ಜಿ

ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಲಾವಿದರ ಬೇಡಿಕೆ ಮೇರಿಗೆ ಅಜ್ಜಿಯ ವಿಳಾಸವನ್ನು ನೆಟ್ಟಿಗರು ನೀಡಿದ್ದಾರೆ. ವಾರಿಯರ್ ಅಜ್ಜಿ ಎಂದೇ ಫೇಮಸ್ ಆಗಿರುವ ಇವರ ಹೆಸರು ಶಾಂತಾ ಬಾಲು ಪವಾರ್. ಪುಣೆ ಮೂಲದವರು. ಕಲಾವಿದರು ವಿಳಾಸ ತಿಳಿದುಕೊಂಡು ಅಜ್ಜಿಯ ನೆರವಿಗೆದಾವಿಸಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Actor Sonu sood and Riteish Deshmukh shares Warrior aaji video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X