ಕೋವಿಡ್ ಸೋಂಕಿತೆಗೆ ಏರ್ ಆಂಬುಲೆನ್ಸ್ ಸೇವೆ ಮೂಲಕ ಚಿಕಿತ್ಸೆ ಕೊಡಿಸಿದ ಸೋನು ಸೂದ್

'ರಿಯಲ್ ಹೀರೋ' ಸೋನು ಸೂದ್ ಕಳೆದವಾರವಷ್ಟೆ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಕ್ವಾರಂಟೈನ್‌ನಲ್ಲಿದ್ದ ಸೋನು ಈಗ ಕೊರೊನಾದಿಂದ ಗುಣಮುಖರಾಗಿದ್ದಾರೆ. ಸದ್ಯ ವಿಶ್ರಾಂತಿಯಲ್ಲಿರುವ ಸೋನು ತನ್ನ ಸಾಮಾಜಿಕ ಕೆಲಸವನ್ನು ನಿಲ್ಲಿಸಿಲ್ಲ. ಅಗತ್ಯ ಸೇವಗೆಳನ್ನು ಸೋನು ಸೂದ್ ಮಾಡುತ್ತಿದ್ದಾರೆ.

ಕೊರೊನಾವೈರಸ್‌ನಿಂದ ಬಳಲುತ್ತಿದ್ದ ರೋಗಿಯನ್ನು ನಾಗಪುರದಿಂದ ಹೈದರಾಬಾದ್ ಗೆ ಏರ್ ಆಂಬುಲೆನ್ಸ್ ವಿಮಾನ ಮೂಲಕ ಕರೆತಂದು ಸೋನು ಸೂದ್ ಚಿಕಿತ್ಸೆ ಕೊಡಿಸಿದ್ದಾರೆ. 25 ವರ್ಷದ ಹುಡುಗಿ ಕೋವಿಡ್‌ನಿಂದ ತೀವ್ರ ಬಳಲುತ್ತಿದ್ದರು. ಚಿಕಿತ್ಸೆಗಾಗಿ ನಾಗಪುರದ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಶ್ವಾಸಕೋಶ ಕಸಿ ಮತ್ತು ಇನ್ನು ಕೆಲವು ವಿಶೇಷ ಚಿಕಿತ್ಸೆ ಮಾಡಿಬೇಕಾದ ಕಾರಣ, ಹೈದರಾಬಾದ್ ನ ಅಪೊಲೊ ಆಸ್ಪತ್ರೆಯಲ್ಲಿ ಮಾತ್ರ ಸಾಧ್ಯ ಎಂದು ವೈದ್ಯರು ಸೂಚಿಸಿದರು.

ಕಂಗಾಲಾಗಿದ್ದ ಪೋಷಕರ ಸಹಾಯಕ್ಕೆ ತಕ್ಷಣ ಧಾವಿಸಿದ ಸೋನು ಸೂದ್, ಹೈದರಾಬಾದ್‌ನ ಆರು ವೈದ್ಯರ ತಂಡದೊಂದಿಗೆ ನಾಗಪುರದಿಂದ ಹೈದರಾಬಾದ್ ಅಪೊಲೊ ಆಸ್ಪತ್ರೆಗೆ ಏರ್ ಆಂಬುಲೆನ್ಸ್ ಮೂಲಕ ಶಿಫ್ಟ್ ಮಾಡಲಾಗಿದೆ. ಅಪೊಲೋ ಆಸ್ಪತ್ರೆಯಲ್ಲಿ ಉತ್ತಮವಾದ ಚಿಕಿತ್ಸೆ ಕೊಡಿಸಿದ್ದಾರೆ.

Actor Sonu Sood gets covid patient airlifted from Nagpur to Hyderabad for treatment

ಈ ಬಗ್ಗೆ ಮಾತನಾಡಿದ ನಟಸೋನು ಸೂದ್, 'ಶೇ.20ರಷ್ಟು ಬದುಕುಳಿಯುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದರು. ನಾನು ಖಂಡಿತ ಅವಳು 25 ವರ್ಷದ ಯುವತಿ, ಕಠಿಣ ಯುದ್ಧ ಮಾಡುತ್ತಾಳೆ. ಇದರಿಂದ ಹೊರಬರುತ್ತಾಳೆ. ಅದಕ್ಕಾಗಿ ನಾವು ಈ ಅವಕಾಶವನ್ನು ಪಡೆದುಕೊಂಡೆವು. ಅವಳಿಗೆ ಚಿಕಿತ್ಸೆ ನೀಡಲು ದೇಶದ ಅತ್ಯುತ್ತಮ ವೈದ್ಯರತಂಡವನ್ನು ಸಂಪರ್ಕಿಸಿ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ಶೀಘ್ರದಲ್ಲೇ ಗುಣಮುಖರಾಗಿ ಹಿಂದಿರುಗುತ್ತಾರೆ' ಎಂದು ಹೇಳಿದ್ದಾರೆ.

ಕೊರೊನಾ ಎರಡನೇ ಅಲೆ ಭೀಕರವಾಗಿದ್ದು, ಸೋಂಕಿತರು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಆಸ್ಪತ್ರೆ, ಆಕ್ಸಿಜನ್ ಸಿಗದೆ ನರಳಾಡುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಬೇರೆ ರೋಗಿಗಳಿಗೂ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಕಷ್ಟದ ಸಮಯದಲ್ಲಿ ನಾಗಪುರದಿಂದ ಏರ್ ಲಿಫ್ಟ್ ಮೂಲಕ ಚಿಕಿತ್ಸೆ ಕೊಡಿಸಿದ ಸೋನು ಸೂದ್ ಅವರಿಗೆ ಮತ್ತೊಮ್ಮೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Actor Sonu Sood gets covid patient airlifted from Nagpur to Hyderabad for treatment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X