'ಬೆಂಗಳೂರಿಗರೇ ಆತಂಕ ಬೇಡ, ನಿಮಗಾಗಿ ಸೋನು ಸೂದ್ ಇದ್ದೇನೆ'
ಬಾಲಿವುಡ್ ನಟ ಸೋನು ಸೋದ್ ಮಾನವೀಯತೆಯ ಕಾರ್ಯ ಮುಂದುವರಿದಿದೆ. ಸಿನಿಮಾ ನಟನ ಜೊತೆ ಹಲವು ಎನ್‌ಜಿಓ ಸಂಸ್ಥೆಗಳು ಕೈ ಜೋಡಿಸಿ ಸಾರ್ವಜನಿಕರ ಸಹಾಯಕ್ಕೆ ನಿಂತಿವೆ.
ಕೊರೊನಾ ವೈರಸ್ ಎರಡನೇ ಅಲೆಗೆ ಸಿಲುಕಿರುವ ಬೆಂಗಳೂರಿಗೆ ಸೋನು ಸೂದ್ ಅಭಯಹಸ್ತ ಚಾಚಿದ್ದಾರೆ. ಕೊರೊನಾ ಹಾಟ್‌ಸ್ಪಾಟ್ ಎನಿಸಿಕೊಂಡಿರುವ ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಸಂಖ್ಯೆ ಹಾಗೂ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಭಾರಿ ಏರಿಕೆ ಕಂಡಿದೆ.
ಪ್ರಮುಖವಾಗಿ ಆಕ್ಸಿಜನ್ ಕೊರತೆ ಉಂಟಾಗಿ ಬೆಂಗಳೂರಿನಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಘಟನೆಗಳು ಮರುಕಳಿಸಬಾರದು ಎಂಬ ಕಾರಣಕ್ಕೆ ಸೋನು ಸೂದ್ ಆಕ್ಸಿಜನ್ ನೆರವು ಘೋಷಿಸಿದ್ದಾರೆ. ಅಗತ್ಯವಿರುವವರು ಮಾತ್ರ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿನಂತಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸೋನು ಸೂದ್ ''ಬೆಂಗಳೂರಿಗರೇ ನೀವು ಉಸಿರಾಡಲು ನಾನು ಸಹಾಯ ಮಾಡುತ್ತೇನೆ, ತುರ್ತು ಸಮಸ್ಯೆಯಿದ್ದರೆ ಮಾತ್ರ ಸಂಪರ್ಕಿಸಿ'' ಎಂದು ವಾಟ್ಸಾಪ್ ನಂಬರ್ ಹಂಚಿಕೊಂಡಿದ್ದಾರೆ.
ಈಗಾಗಲೇ ಬೆಂಗಳೂರಿನ ಹಲವು ಕಡೆ ಸೋನು ಸೋದ್ ಫೌಂಡೇಶನ್ ಕಡೆಯಿಂದ ಆಕ್ಸಿಜನ್ ವ್ಯವಸ್ಥೆ, ಐಸಿಯು ಬೆಡ್ ವ್ಯವಸ್ಥೆ ಸೇರಿದಂತೆ ಹಲವರು ರೀತಿ ಸಹಾಯ ಮಾಡಲಾಗಿದೆ.


Click it and Unblock the Notifications










