ವಲಸೆ ಕಾರ್ಮಿಕರಿಗೆ ಕೆಲಸ ಕೊಡಿಸಲು ಮುಂದಾದ ನಟ ಸೋನು ಸೂದ್
ಲಕ್ಷಾಂತರ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಮರಳಿ ಗೂಡು ಸೇರಿಸಿದ ನಟ ಸೋನು ಸೂದ್ ಈಗ ಅವರಿಗೆ ಕೆಲಸನೂ ಕೊಡಿಸಲು ಮುಂದಾಗಿದ್ದಾರೆ. ಮೊನ್ನೆ ಮೊನ್ನೆಷ್ಟೆ ವಲಸೆ ಕಾರ್ಮಿಕರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದ ಸೋನು ಈಗ ಅವರಿಗೆ ಅವರ ಊರುಗಳಲ್ಲಿಯೇ ಉದ್ಯೋಗ ಕೊಡಿಸಲು ನಿರತರಾಗಿದ್ದಾರೆ.
ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೋನು ಸೂದ್ ಒಂದು ಹೊಸ ಆಪ್ ಬಿಡುಗಡೆ ಮಾಡಿದ್ದಾರೆ. ಪ್ರವಾಸಿ ರೋಜ್ಗರ್ ಆಪ್ ಎಂಬ ಆಪ್ ಮೂಲಕ ಯಾವ ಊರಿನಲ್ಲಿ ಕೆಲಸಗಳಿವೆ ಎನ್ನುವ ಸಹ ಇದೆ. ಅಗತ್ಯವಿರುವವರು ಈ ಆಪ್ ಬಳಸಿಕೊಂಡು ಕೆಲಸ ಪಡೆದುಕೊಳ್ಳಬಹುದು.
ಜುಲೈ 23ರಂದು ಆಪ್ ಲಾಂಚ್ ಆಗಲಿದೆ. ನಿರ್ಮಾಣ ಕೆಲಸ, ಗಾರ್ಮೆಂಟ್ಸ್, ಎಂಜಿನಿಯರಿಂಗ್, ಬಿಪಿಓಗಳು, ಭದ್ರತೆ, ಆಟೋಮೊಬೈಲ್, ಇ ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ ಸಂಬಂಧಿಸಿದ ಪ್ರಸಿದ್ಧ 500ಕ್ಕು ಹೆಚ್ಚು ಕಂಪನಿಗಳಿಂದ ಉದ್ಯೋಗಾವಕಾಶಗಳು ಲಭ್ಯವಾಗಲಿದೆ. ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಕೊಯಮತ್ತೂರು, ಅಹಮದಾಬಾದ್ ಮತ್ತು ತಿರುವನಂತಪುರಂ ಸೇರಿದ್ದಂತೆ ಏಳು ನಗರಗಳಲ್ಲಿ 24 ಗಂಟೆಗಳ ಸಹಾಯವಾಣಿಯೊಂದಿಗೆ ಬೆಂಬಲ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಸೋನು ಸೂದ್, "ವಲಸೆ ಕಾರ್ಮಿಕರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಹಲವರು ಕೆಲಸ ಬಗ್ಗೆಯೇ ಮಾತನಾಡುತ್ತಿದ್ದರು. ಊರಿಗೆ ಹೋಗಿ ಏನು ಮಾಡುವುದು, ಅಲ್ಲಿ ಕೆಲಸ ಸಿಗುತ್ತೊ ಇಲ್ಲವೋ ಎಂಬ ಭಯ ವ್ಯಕ್ತಪಡಿಸುತ್ತಿದ್ದರು. ಹಾಗಾಗಿ ಅವರನ್ನು ಊರಿಗೆ ತಲುಪಿಸುವುದು ಮಾತ್ರವಲ್ಲ, ಕೆಲಸ ಕೊಡಿಸುವ ಪ್ರಯತ್ನ ಮಾಡಬೇಕೆಂದು, ಈ ಆಪ್ ಬಿಡುಗಡೆ ಮಾಡಿರುವುದು" ಎಂದು ಹೇಳಿದ್ದಾರೆ.


Click it and Unblock the Notifications











