ಹುಟ್ಟುಹಬ್ಬದ ದಿನ ತನ್ನ ದೊಡ್ಡ ಕನಸನ್ನು ಬಹಿರಂಗ ಪಡಿಸಿದ ಸೋನು ಸೂದ್

By ಫಿಲ್ಮಿಬೀಟ್ ಡೆಸ್ಕ್

ಬಹುಭಾಷಾ ನಟ, ರಿಯಲ್ ಹೀರೋ ಸೋನು ಸೂದ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸೋನು ತನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡದಿದ್ದರೂ ಅಭಿಮಾನಿಗಳು ನೆಚ್ಚಿನ ನಟನ ಜನ್ಮದಿನವನ್ನು ಅದ್ದೂರಿಯಾಗಿ ಸಂಭ್ರಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬ ಆಚರಿಸುತ್ತಿದ್ದಾರೆ.

ಆಂಧ್ರ ಪ್ರದೇಶದ ಅಭಿಮಾನಿಗಳು ಸೋನು ಸೂದ್‌ಗಾಗಿ ಮತ್ತೊಂದು ದೇವಸ್ಥಾನ ನಿರ್ಮಿಸುತ್ತಿದ್ದಾರೆ. ಈಗಾಗಲೇ ಆಂಧ್ರಪ್ರದೇಶದಲ್ಲಿ ಸೋನು ಸೂದ್‌ಗಾಗಿ ಒಂದು ದೇವಾಲಯ ಕಟ್ಟಿಸಿ ಪೂಜೆ ಮಾಡುತ್ತಿದ್ದಾರೆ. ಇದೀಗ ಮತ್ತೊಂದು ದೇವಸ್ಥಾನ ನಿರ್ಮಾಣವಾಗುತ್ತಿರುವುದು ವಿಶೇಷ. ಅಭಿಮಾನಿಗಳ ಪ್ರೀತಿ, ಅಭಿಮಾನಕ್ಕೆ ಸೋನು ಸೂದ್ ಮನಸೋತಿದ್ದಾರೆ.

ಇಂದು ಹುಟ್ಟುಹಬ್ಬದ ದಿನ ಸೋನು ಸೂದ್ ಆಂಗ್ಲ ಪತ್ರಿಕೆ ಜೊತೆ ಮಾತನಾಡಿ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ತನ್ನ ಕನಸುಗಳ ಬಗ್ಗೆಯೂ ಸೋನು ಸೂದ್ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ...

ನನ್ನ ಕೆಲಸ ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ

ನನ್ನ ಕೆಲಸ ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ

ಅಭಿಮಾನಿಗಳ ಪ್ರೀತಿಯ ಬಗ್ಗೆ ಮಾತನಾಡಿದ ಸೋನು "ಇದು ತುಂಬಾ ದೊಡ್ಡ ವಿಷಯ. ಅವರು ಪ್ರೀತಿ ಸುರಿಸುತ್ತಿರುವುದಕ್ಕೆ ನಾನು ವಿನಮ್ರನಾಗಿದ್ದೇನೆ. ನಾನು ಪ್ರಾರಂಭ ಮಾಡಿದ ಈ ಕೆಲಸ ಕೇವಲ ಒಂದು ಹಳ್ಳಿ ಅಥವಾ ರಾಜ್ಯಕ್ಕೆ ಸೀಮಿತವಾಗಿಲ್ಲ. ಇದು ಇಡೀ ದೇಶಕ್ಕೆ ಮಾಡುತ್ತಿದ್ದೇನೆ. ಇದನ್ನು ಇನ್ನು ದೊಡ್ಡದಾಗಿ ಮಾಡುವ ಬಯಕೆ ಹೊಂದಿದ್ದೇನೆ" ಎಂದು ಸೋನು ಸೂದ್ ಹೇಳಿದ್ದಾರೆ.

ಉಚಿತ ಶಿಕ್ಷಣದ ಕನಸು ಕಂಡಿರುವ ರಿಯಲ್ ಹೀರೋ

ಉಚಿತ ಶಿಕ್ಷಣದ ಕನಸು ಕಂಡಿರುವ ರಿಯಲ್ ಹೀರೋ

ಇದೇ ಸಮಯದಲ್ಲಿ ಸೋನು ಸೂದ್ ತನ್ನ ದೊಡ್ಡ ಕನಸಿನ ಬಗ್ಗೆ ಮಾತನಾಡಿದ್ದಾರೆ. ಶಿಕ್ಷಣದ ಬಗ್ಗೆ ದೊಡ್ಡ ಕನಸು ಕಂಡಿರುವ ರಿಯಲ್ ಹೀರೋ "ಮುಂಬರುವ ವರ್ಷಗಳಲ್ಲಿ ಈ ದೇಶದ ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣ ಸಿಗಬೇಕು ಎಂದು ನಾನು ಬಯಸುತ್ತೇನೆ" ಎಂದು ಹೇಳಿದ್ದಾರೆ.

ಕಳೆದ ವರ್ಷ ಲಾಕ್ ಡೌನ್‌ನಿಂದ ಪ್ರಾರಂಭವಾದ ಕೆಲಸ

ಕಳೆದ ವರ್ಷ ಲಾಕ್ ಡೌನ್‌ನಿಂದ ಪ್ರಾರಂಭವಾದ ಕೆಲಸ

ಕಳೆದ ವರ್ಷ ಕೊರೊನಾ ಲಾಕ್ ಡೌನ್‌ನಿಂದ ಮಾನವೀಯ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸೋನು ಸೂದ್ ಸಾವಿರಾರು ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಅನೇಕರ ಬದುಕಿಗೆ ಬೆಳಕಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಹಾಯ ಕೇಳಿ ಸಂದೇಶ ಕಳುಹಿಸಿದರೆ ಅಂತವರ ನೆರವಿಗೆ ಸೋನು ದಾವಿಸುತ್ತಿದ್ದಾರೆ. ಕಳೆದ ವರ್ಷದಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ಸೋನು ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ದೊಡ್ಡ ಕನಸುಗಳನ್ನು ಕಂಡಿದ್ದಾರೆ.

ಈ ಕೆಲಸ ಇನ್ನು ದೊಡ್ಡದಾಗಬೇಕು

ಈ ಕೆಲಸ ಇನ್ನು ದೊಡ್ಡದಾಗಬೇಕು

ತಾನು ಮಾಡುತ್ತಿರುವ ಕೆಲಸ ಇನ್ನು ದೊಡ್ಡದಾಗಬೇಕು, ಇನ್ನು ಹೆಚ್ಚಿನ ಜನರಿಗೆ ಸೇವೆ ಸಿಗುವಂತಾಗಬೇಕು ಎಂದು ಸೋನು ಹೇಳಿದ್ದಾರೆ. ಸಹಾಯ ಕೇಳಿ ಬರುತ್ತಿರುವ ಕರೆಗಳು ಜಾಸ್ತಿ ಆಗಿವೆ ಎನ್ನುವ ಸೋನು, ತನ್ನ ಹುಟ್ಟುಹಬ್ಬದ ದಿನ ಮಹತ್ವದ ಕೆಲಸ ಮಾಡಲು ನಿರ್ಧರಿಸಿದ್ದಾರೆ.

ದೂರ ಊರುಗಳಿಂದ ಜನ ಬರ್ತಾರೆ

ದೂರ ಊರುಗಳಿಂದ ಜನ ಬರ್ತಾರೆ

"ನನಗೆ ಬೇರೆ ಬೇರೆ ರಾಜ್ಯಗಳಿಂದ ಕರೆಗಳು ಬರುತ್ತಿವೆ. ನನ್ನ ಹುಟ್ಟುಹಬ್ಬಕ್ಕೆ ಕೆಲವರು ನಡೆದುಕೊಂಡು ಬರುತ್ತಿದ್ದಾರೆ. ಇನ್ನು ಕೆಲವರು ಸೈಕಲ್, ಬೈಕ್ ಗಳಲ್ಲಿ ಬರುತ್ತಿದ್ದಾರೆ. ಇದರಿಂದ ತಲುಪಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಮೊದಲು ಸರಿಯಾದ ಸಂಪರ್ಕ ವ್ಯವಸ್ಥೆ ಮಾಡಬೇಕು. ಇದು ದೊಡ್ಡ ಸವಾಲಾಗಿದೆ. ಇದಕ್ಕೆ ಸಮಯ ತೆಗೆದುಕೊಂಡರು ಇದು ಸಂಭವಿಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಸೋನು ಹೇಳಿದ್ದಾರೆ.

ಹುಟ್ಟುಹಬ್ಬದ ದಿನ ಮಹತ್ವದ ಕೆಲಸ

ಹುಟ್ಟುಹಬ್ಬದ ದಿನ ಮಹತ್ವದ ಕೆಲಸ

"ಈ ವರ್ಷದ ಹುಟ್ಟುಹಬ್ಬಕ್ಕೆ ಆಸ್ಪತ್ರೆಗಳಲ್ಲಿ ಕನಿಷ್ಠ 1000 ದಿಂದ 1500 ಉಚಿತ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಮತ್ತು ಮುಂದಿನ ವರ್ಷ ಹುಟ್ಟುಹಬ್ಬದ ಸಮಯಕ್ಕೆ ಹತ್ತು ಪಟ್ಟು ವಿದ್ಯಾರ್ಥಿ ವೇತನ ಹೆಚ್ಚಾಗಿರುತ್ತದೆ" ಎಂದು ಹೇಳಿದ್ದಾರೆ.

ಹುಟ್ಟುಹಬ್ಬ ಆಚರಣೆ ಬಗ್ಗೆ ಸೋನು ಮಾತು

ಹುಟ್ಟುಹಬ್ಬ ಆಚರಣೆ ಬಗ್ಗೆ ಸೋನು ಮಾತು

ಹುಟ್ಟುಹಬ್ಬವನ್ನು ದೊಡ್ಡದಾಗಿ ಆಚರಣೆ ಮಾಡಲು ಇಷ್ಟಪಡದ ಸೋನು ಅದರಲ್ಲಿ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ಎರಡು ಮೂರು ವರ್ಷ ನಾನು ನನ್ನ ಹುಟ್ಟುಹಬ್ಬದಂದು ವಿಮಾನದಲ್ಲಿ ಇರಲು ಆಯ್ಕೆಮಾಡಿಕೊಳ್ಳುತ್ತಿದ್ದೆ. ನನಗೀಗ ಮುಜುಗರವಾಗುತ್ತೆ ಎಂದು ಬಹಿರಂಗಪಡಿಸಿದರು.

ಜನ್ಮದಿನ ಆಚರಣೆ ಮಾಡಿಕೊಳ್ಳಲು ಇಷ್ಟವಿಲ್ಲ ಎಂದ ಸೋನು

ಜನ್ಮದಿನ ಆಚರಣೆ ಮಾಡಿಕೊಳ್ಳಲು ಇಷ್ಟವಿಲ್ಲ ಎಂದ ಸೋನು

"ನಾನು ನನ್ನ ಪೋಷಕರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅವರು ಯಾವಾಗಲು ನನ್ನ ಸುತ್ತಲು ಇರಬೇಕೆಂದು ನಾನು ಬಯಸುತ್ತೇನೆ. ನನ್ನನ್ನು ಈ ಜಗತ್ತಿಗೆ ಕರೆತಂದ ಯಾರು ಈಗ ಇಲ್ಲಿ ಇಲ್ಲ. ಹಾಗಾಗಿ ನನ್ನ ಹುಟ್ಟುಹಬ್ಬವನ್ನು ನಾನು ಆಚರಿಸಬೇಕು ಅಂತ ಅನಿಸುವುದಿಲ್ಲ. ಆದರೆ ನನ್ನ ಕುಟುಂಬಕ್ಕಾಗಿ ನಾನು ಮಾಡುತ್ತೇನೆ" ಎಂದು ಹೇಳಿದ್ದಾರೆ.

ಸಣ್ಣ ಉದ್ಯಮಕ್ಕೆ ಬೆಂಬಲ

ಸಣ್ಣ ಉದ್ಯಮಕ್ಕೆ ಬೆಂಬಲ

ಸದ್ಯ ಕೊರೊನಾ ಎರಡನೇ ಅಲೆಯ ಭೀಕರತೆ ಕಡಿಮೆಯಾಗಿದೆ. ಹಾಗಂತ ಸೋನು ಸೂದ್ ಸೈಲೆಂಟ್ ಆಗಿಲ್ಲ. ಈಗಲೂ ಸಹಾಯ ಮಾಡುತ್ತಿದ್ದಾರೆ. ಸಣ್ಣ ಉದ್ಯಮಕ್ಕೆ ಬೆಂಬಲ ನೀಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ್ದಂತೆ ವಿಡಿಯೋಗಳನ್ನು ಮಾಡಿ ಶೇರ್ ಮಾಡುತ್ತಿದ್ದಾರೆ. ಚಿಕ್ಕ ಚಿಕ್ಕ ವ್ಯಪಾರಿಗಳಿಗೆ, ಉದ್ಯಮಕ್ಕೆ ಬೆಂಬಲ ನೀಡಿ ಮನವಿ ಮಾಡುವ ಇಂಟ್ರಸ್ಟಿಂಗ್ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.

ಮಾನವೀಯ ಕೆಲಸಗಳ ಜೊತೆಗೆ ಸಿನಿಮಾ

ಮಾನವೀಯ ಕೆಲಸಗಳ ಜೊತೆಗೆ ಸಿನಿಮಾ

ಮಾನವೀಯ ಕೆಲಸಗಳ ಜೊತೆಗೆ ಸೋನು ಸೂದ್ ಸಿನಿಮಾಗಳಲ್ಲೂ ತೊಡಗಿಕೊಂಡಿದ್ದಾರೆ. ಹಾಗಂತ ತೆರೆಮೇಲೆ ಹೀರೋ ಆಗಿ ಮಿಂಚುತ್ತಿದ್ದಾರೆ ಅಂತ ಯೋಚಿಸಬೇಡಿ. ಸೋನು ಸೂದ್ ವಿಲನ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗಿನ ಆಚಾರ್ಯ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಸೋನು ಸೂದ್ ಜೊತೆ ಫೈಟ್‌ ಮಾಡಲು, ಅವರ ಮೇಲೆ ಕೈ ಮಾಡುವ ದೃಶ್ಯಗಳನ್ನು ಮಾಡಲು ಭಯವಾಗುತ್ತೆ ಎಂದು ಚಿರಂಜೀವಿ ಹೇಳಿದ್ದರು. ಈ ಸಿನಿಮಾ ಜೊತೆಗೆ ಹಿಂದಿಯ ಪೃಥ್ವಿರಾಜ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ತಮಿಳಿನ ಒಂದು ಸಿನಿಮಾದಲ್ಲಿ ಸೋನು ಬ್ಯುಸಿಯಾಗಿದ್ದಾರೆ.

More from Filmibeat

English summary
Actor Sonu Sood opened up about his birthday wish for this year. "I want to have at least 1000-1500 free beds in hospitals, and ten times more scholarships for students by my next birthday,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X