For Quick Alerts
  ALLOW NOTIFICATIONS  
  For Daily Alerts

  ಲೆಕ್ಕ ಪತ್ರದಲ್ಲಿ ದೋಷ ಆರೋಪ: ಐಟಿ ನಿಗಾವಣೆಯಲ್ಲಿ ಸೋನು ಸೂದ್ ಆಸ್ತಿ

  |

  ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸಾವಿರಾರು ಮಂದಿಗೆ ಸಹಾಯ ಮಾಡಿದ ನಟ ಸೋನು ಸೂದ್‌ಗೆ ಐಟಿ ಸಂಕಷ್ಟ ಎದುರಾಗಿದೆ.

  ಸೋನು ಸೂದ್‌ಗೆ ಸಂಬಂಧಿಸಿದ ಮುಂಬೈನ ಆರು ಆಸ್ತಿಗಳ ಮೇಲೆ ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದು, ನಿಗಾವಣೆಗೆ ತೆಗೆದುಕೊಂಡಿವೆ. ಸೋನು ಸೂದ್ ತಮ್ಮ ಆದಾಯ ಲೆಕ್ಕಪತ್ರದಲ್ಲಿ ತಪ್ಪು ಮಾಡಿದ್ದಾರೆ ಎಂಬ ಆರೋಪದ ಮೇಲೆ ಹೀಗೆ ಐಟಿ ಅಧಿಕಾರಿಗಳು ನಿಗಾವಣೆ ಇಟ್ಟಿದ್ದಾರೆ.

  ಸೋನು ಸೂದ್‌ಗೆ ಸೇರಿದ ಮುಂಬೈನ ಆರು ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ನಿಗಾವಣೆ ಇಟ್ಟಿದ್ದಾರೆ. ಸೋನು ಸೂದ್ ಹೋಟೆಲ್, ಕಚೇರಿ, ನಿವಾಸದ ಮೇಲೆಯೂ ಐಟಿ ಅಧಿಕಾರಿಗಳು ನಿಗಾವಣೆ ಇಟ್ಟಿದ್ದಾರೆ. ಐಟಿ ಅಧಿಕಾರಿಗಳ ನಿಗಾವಣೆ ಕುರಿತಂತೆ ಸೋನು ಸೂದ್ ಯಾವುದೇ ಹೇಳಿಕೆ ನೀಡಿಲ್ಲ.

  ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸೋನು ಸೂದ್ ಸಾವಿರಾರು ಮಂದಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದ್ದರು. ಆಗೆಲ್ಲ ಸೋನು ಸೂದ್‌ರ ಆದಾಯ ಮೂಲದ ಬಗ್ಗೆ ನೆಟ್ಟಿಗರು ಪ್ರಶ್ನೆ ಮಾಡಿದ್ದರು. ತಮ್ಮ ಸ್ವಂತ ಹಣವನ್ನೇ ಖರ್ಚು ಮಾಡುತ್ತಿರುವಾಗಿಯೂ ಕೆಲವು ಆಸ್ತಿಗಳನ್ನು ಅಡಮಾನ ಇಟ್ಟಿರುವುದಾಗಿಯೂ ಸೋನು ಸೂದ್ ಹೇಳಿದ್ದರು.

  ಕೆಲವು ದಿನಗಳ ಹಿಂದಷ್ಟೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮೇರೆಗೆ ದೆಹಲಿ ಸರ್ಕಾರದ ಶಿಕ್ಷಣ ಯೋಜನೆಗಳಿಗೆ ಸೋನು ಸೂದ್ ರಾಯಭಾರಿ ಆಗಿದ್ದರು. ಅರವಿಂದ ಕೇಜ್ರಿವಾಲ್‌ ಜೊತೆಗೆ ಕೈ ಸೇರಿಸಿದ್ದಕ್ಕೆ ಸೋನು ಸೂದ್‌ ಮೇಲೆ ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ ಎಂದು ಕೆಲವು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಸೋನು ಸೂದ್‌ ವಿರುದ್ಧ ಕೆಲವು ದಿನಗಳ ಹಿಂದೆ ದೂರೊಂದು ದಾಖಲಾಗಿತ್ತು. ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಕೆಲವರಿಗೆ ರೆಮ್‌ಡಿಸೀವಿರ್ ಔಷಧದ ವ್ಯವಸ್ಥೆಯನ್ನು ಸೋನು ಸೂದ್ ಮಾಡಿಸಿದ್ದರು. ಸರ್ಕಾರಿ ಆಸ್ಪತ್ರೆಗಳಲ್ಲಿ ದೊರಕದ ಹಾಗೂ ವೈದ್ಯರ ಒಪ್ಪಿಗೆ ಇಲ್ಲದೆ ಕೊಡಬಾರದಾದ ಈ ಔಷಧವನ್ನು ಹೇಗೆ ವಿತರಣೆ ಮಾಡಿದರು ಎಂದು ಕೆಲವರು ಆರೋಪಿಸಿದ್ದರು. ಈ ಬಗ್ಗೆ ಪೊಲೀಸರು ಸೋನು ಸೂದ್ ಸೇರಿ ಇನ್ನೂ ಕೆಲವು ಸೆಲೆಬ್ರಿಟಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದರು.

  ಅದಕ್ಕೂ ಮುನ್ನಾ ಸೋನು ಸೂದ್, ನಿಯಮಗಳನ್ನು ಉಲ್ಲಂಘಿಸಿ ತಮ್ಮ ಹೋಟೆಲ್ ಅನ್ನು ಮಾರ್ಪಾಟು ಮಾಡಿದ್ದಾರೆ ಎಂದು ಬಿಎಂಸಿಯು ಸೋನು ಸೂದ್ ವಿರುದ್ಧ ಪ್ರಕರಣ ದಾಖಲಿಸಿತ್ತು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ಅಲ್ಲಿ ಇತ್ಯರ್ಥವಾಯಿತು.

  English summary
  Actor Sonu Sood's assets in Mumbai surveyed by income tax department. He helped so many people in coronavirus lock down time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X