ಬಡ ರೈತನ ಕುಟುಂಬಕ್ಕೆ ಸೋನು ಸೂದ್ ನೆರವು: ಟ್ರ್ಯಾಕ್ಟರ್ ಗಿಫ್ಟ್ ನೀಡಿದ ನಟ
ಲಾಕ್ ಡೌನ್ ಆದಾಗಿನಿಂದಲೂ ಕಷ್ಟದಲ್ಲಿರೋರಿಗೆ ಸಹಾಯ ಮಾಡುತ್ತಿರುವ ನಟ ಸೋನು ಸೂದ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಸೋನು ಸೂದ್ ಮಾಡಿರುವ ಮತ್ತೊಂದು ಸಹಾಯಕ್ಕೆ ಜನರು ಶಹಬ್ಬಾಷ್ ಎನ್ನುತ್ತಿದ್ದಾರೆ. ಲಾಕ್ ಡೌನ್ ನಲ್ಲಿ ಬಡವರ ಬೆನ್ನಿಗೆ ನಿಂತಿರುವ ಸೋನು ಸೂದ್ ಆಂಧ್ರಪ್ರದೇಶದ ಬಡ ರೈತರ ಕುಟುಂಬಕ್ಕೆ ನೆರವಾಗಿದ್ದಾರೆ.
Recommended Video
ಕೆಲ ದಿನಗಳ ಹಿಂದೆ ರೈತರೊಬ್ಬರು ತನ್ನ ಹೊಲದಲ್ಲಿ ಎತ್ತುಗಳಿಲ್ಲದೆ ಇಬ್ಬರು ಹೆಣ್ಣು ಮಕ್ಕಳಿಂದನೇ ನೇಗಿಲನ್ನು ಎಳೆಯಿಸಿ, ಭೂಮಿ ಉಳುಮೆ ಮಾಡುತ್ತಿದ್ದ ದೃಶ್ಯ ವೈರಲ್ ಆಗಿತ್ತು. ಆಂಧ್ರಪ್ರದೇಶದ ಚಿತ್ತೂರ್ ನ ರೈತ ನಾಗೇಶ್ವರ್ ರಾವ್ ಕುಟುಂಬ ಎಂದು ಗೊತ್ತಾಗಿದೆ.
ಈ ವಿಡಿಯೋ ನೋಡಿದ ಸೋನು ಸೂದ್ ಕುಟುಂಬದ ಪರಿಸ್ಥಿತಿ ತಿಳಿದುಕೊಂಡು ಅವರಿಗೆ ಸಹಾಯ ಮಾಡಲು ಮುಂದಾದರು. ಅಲ್ಲದೆ ಹೆಣ್ಣುಮಕ್ಕಳು ಶಿಕ್ಷಣದ ಕಡೆ ಗಮನ ಹರಿಸಲಿ ಮತ್ತು ಆ ರೈತನ ಕುಟುಂಬಕ್ಕೆ ಸಹಾಯಮಾಡುವುದಾಗಿ ಟ್ವೀಟ್ ಮಾಡಿದ್ದರು. ಮೊದಲು ಎತ್ತುಗಳನ್ನು ಕೊಡಿಸುವುದಾಗಿ ಹೇಳಿದ್ದ ಸೋನು ನಂತರ ಟ್ರ್ಯಾಕ್ಟರ್ ನೀಡುವುದಾಗಿ ಹೇಳಿದ್ದರು.

"ಈ ಕುಟುಂಬ ಎತ್ತುಗಳಿಗೆ ಅರ್ಹವಲ್ಲ. ಟ್ರ್ಯಾಕ್ಟರ್ ಗೆ ಅರ್ಹರು. ಆದ್ದರಿಂದ ನಿಮಗೆ ಟ್ರ್ಯಾಕ್ಟರ್ ಕಳುಹಿಸುತ್ತೇನೆ. ಸಂಜೆ ಹೊತ್ತಿಗೆ ಟ್ರ್ಯಾಕ್ಟರ್ ಹೊಲವನ್ನು ಉಳುಮೆ ಮಾಡುತ್ತದೆ. ಆಶೀರ್ವದಿಸಿರಿ" ಎಂದು ಟ್ವೀಟ್ ಮಾಡಿದ್ದಾರೆ.
ಸೋನು ಸೂದ್ ಮಾತಿನಂತೆ ಟ್ರ್ಯಾಕ್ಟರ್ ಭಾನುವಾರ ಸಂಜೆ ರೈತನ ಜಮೀನು ಸೇರಿದೆ. ಟ್ರ್ಯಾಕ್ಟರ್ ನೋಡಿ ಕುಟುಂಬದವರು ಸಂತಸಗೊಂಡಿದ್ದಾರೆ. ಸೋನು ಸೂದ್ ಕೆಲಸಕ್ಕೆ ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಶ್ಲಾಘಿಸಿದ್ದಾರೆ. ಅಲ್ಲದೆ ಅವರ ಇಬ್ಬರು ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸುವುದಾಗಿ ಹೇಳಿದ್ದಾರೆ.


Click it and Unblock the Notifications











