For Quick Alerts
  ALLOW NOTIFICATIONS  
  For Daily Alerts

  ರಾಜಕೀಯಕ್ಕೆ ಸೋನು ಸೂದ್? ಭವಿಷ್ಯದ ಬಗ್ಗೆ ರಿಯಲ್ ಹೀರೋ ಮಾತು

  |

  ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಬಾಲಿವುಡ್ ನಟ ಸೋನು ಸೂದ್ ಮಾಡುತ್ತಿರುವ ಜನಸೇವೆ ಅಪಾರ. ತನ್ನ ಸ್ವಂತ ದುಡ್ಡಿನಿಂದ ಸಂಕಷ್ಟದಲ್ಲಿರುವ ಸಾವಿರಾರು ಜನರಿಗೆ ನೆರವು ನೀಡಿರುವ ಕಲಾವಿದ ಜನಸಾಮಾನ್ಯರ ಪಾಲಿಗೆ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ.

  ಸೋನು ಸೂದ್ ಜನಪರ ಕಾರ್ಯ ನೋಡಿದ ಅನೇಕರು ರಾಜಕೀಯಕ್ಕೆ ಬರುವ ತಯಾರಿ ಎಂದು ಟೀಕಿಸಿದರು. ಇನ್ನು ಹಲವು ನೀವು ರಾಜಕೀಯಕ್ಕೆ ಬನ್ನಿ ಎಂದು ಆಹ್ವಾನಿಸಿದರು. ಮತ್ತಷ್ಟು ಜನರ ಸೋನು ಸೂದ್ ಈ ದೇಶದ ಪ್ರಧಾನಿ ಆಗ್ಬೇಕು ಎಂದು ಅಭಿಯಾನನೂ ಮಾಡಿದರು. ನಮ್ಮ ರಾಜ್ಯಕ್ಕೆ ನಿಮ್ಮಂತ ವ್ಯಕ್ತಿ ಮುಖ್ಯಮಂತ್ರಿ ಆಗ್ಬೇಕು ಎಂದು ಅಸೆ ಪಟ್ಟವರು ಇದ್ದಾರೆ. ಹೀಗೆ, ಸೋನು ಸೂದ್‌ರನ್ನು ರಾಜಕಾರಣಿಯಾಗಿ ನೋಡಲು ಬಹಳಷ್ಟು ಜನರ ಬಯಸುತ್ತಿದ್ದಾರೆ. ಈ ಕುರಿತು ನಟ ಸೋನು ಸೂದ್ 'ಬಾಲಿವುಡ್ ಲೈಫ್' ವೆಬ್‌ಸೈಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಮುಂದೆ ಓದಿ....

  ರಾಜಕೀಯ ನನ್ನ ಉದ್ದೇಶವಲ್ಲ

  ರಾಜಕೀಯ ನನ್ನ ಉದ್ದೇಶವಲ್ಲ

  ''ನಾನು ಒಬ್ಬ ನಟ ಎನ್ನುವುದನ್ನು ಯಾವಾಗಲೂ ಹೇಳಿಕೊಳ್ಳುತ್ತಿದ್ದೇನೆ. ಒಂದು ವೃತ್ತಿಯಾಗಿ ಇದನ್ನು ಇಷ್ಟ ಪಡುತ್ತೇನೆ'' ಎಂದು ಸೋನು ಸೂದ್ ಬಾಲಿವುಡ್ ಲೈಫ್ ವೆಬ್‌ಸೈಟ್ ಜೊತೆ ಹೇಳಿದರು. ರಾಜಕೀಯ ಎಂಟ್ರಿ ಬಗ್ಗೆ ಮಾತನಾಡಿ ''ಸದ್ಯಕ್ಕೆ ರಾಜಕೀಯ ಪ್ರವೇಶ ಮಾಡುವ ಯಾವುದೇ ಉದ್ದೇಶ ನನಗಿಲ್ಲ'' ಎನ್ನುವ ಮೂಲಕ ಕುತೂಹಲಕ್ಕೆ ತಾತ್ಕಾಲಿಕವಾಗಿ ತೆರೆ ಎಳೆದಿದ್ದಾರೆ.

  ಎಲ್ಲಿದ್ದರೂ ಸಹಾಯ ಮಾಡಬಹುದು

  ಎಲ್ಲಿದ್ದರೂ ಸಹಾಯ ಮಾಡಬಹುದು

  ''ಜನರಿಗೆ ಸಹಾಯ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಎಲ್ಲಿದ್ದರೂ ಸಹಾಯ ಮಾಡಬಹುದು. ನನ್ನದೇ ರೀತಿಯಲ್ಲಿ ಪ್ರತಿದಿನ ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. ಕೆಲವರು ಜನರಿಗೆ ನೆರವು ನೀಡಲು ಬೇರೆ ಮಾರ್ಗ ಹುಡುಕಿಕೊಳ್ಳಬಹುದು'' ಎಂದು ಸೋನು ಸೂದ್ ತಿಳಿಸಿದರು.

  ವಲಸೆ ಕಾರ್ಮಿಕರ ಕಷ್ಟ ನನಗೆ ಪ್ರೇರೇಪಿಸಿತು

  ವಲಸೆ ಕಾರ್ಮಿಕರ ಕಷ್ಟ ನನಗೆ ಪ್ರೇರೇಪಿಸಿತು

  ''ಕಳೆದ ವರ್ಷ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ರೈಲು, ಬಸ್‌ಗಳಲ್ಲಿ ಹೋದಾಗ ನಾನು ಅದನ್ನು ಬಹಳ ಹತ್ತಿರದಿಂದ ನೋಡಿದೆ. ಆ ದೃಶ್ಯಗಳನ್ನು ನನ್ನನ್ನು ಬೆಚ್ಚಿ ಬೀಳಿಸಿತು. ಅದನ್ನು ನೋಡಿದ್ಮೇಲೆ ಜನರಿಗೆ ಸಹಾಯ ಮಾಡಬೇಕು ಎಂದು ಮನಸ್ಸಿನಲ್ಲಿ ಹುಟ್ಟಿಕೊಂಡಿತು. ಎಲ್ಲವೂ ಅರಂಭವಾಗಿದ್ದು ಅಲ್ಲಿಂದಲೇ. ನಾನು ಮತ್ತು ನನ್ನ ತಂಡ ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ'' ಎಂದು ಸೋನು ಹೇಳಿಕೊಂಡಿದ್ದಾರೆ.

  Sonu Sood ಈಗ ಕೆಲವರ ಪಾಲಿನ ದೇವರು | Filmibeat Kannada
  ಸೋನು ಸೂದ್ ಪಿಎಂ ಆಗ್ಬೇಕು

  ಸೋನು ಸೂದ್ ಪಿಎಂ ಆಗ್ಬೇಕು

  ಸೋನು ಸೂದ್ ಜನಪರ ಕೆಲಸ ನೋಡಿದ ಅಭಿಮಾನಿಗಳು ''ಈ ದೇಶದ ಪಿಎಂ ಆಗ್ಬೇಕು'' ಎಂದು ಅಭಿಪ್ರಾಯ ಪಟ್ಟಿದ್ದರು. ಆ ಬಗ್ಗೆ ಸೋನು ಸೂದ್ ಸಹ ಪ್ರತಿಕ್ರಿಯಿಸಿದ್ದರು. ರಾಖಿ ಸಾವಂತ್ ಸಹ ಸೋನು ಪ್ರಧಾನಿ ಆಗ್ಬೇಕು ಎಂದಿದ್ದರು. ಆದರೆ, ಅರುಂಧತಿ ಖ್ಯಾತಿಯ ನಟ ಮಾತ್ರ ''ನಾನು ಸಾಮಾನ್ಯ ಮನುಷ್ಯನಾಗಿರುವುದು ಉತ್ತಮ'' ಎಂದಿದ್ದರು.

  English summary
  Real Hero fame Bollywood actor Sonu sood has speaks about joining political.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X