For Quick Alerts
  ALLOW NOTIFICATIONS  
  For Daily Alerts

  ಸೋನು ಸೂದ್‌ಗೆ ಕೊರೊನಾ ನೆಗೆಟಿವ್, ಶುಭಾಶಯಗಳ ಮಹಾಪೂರ

  |

  ಕಳೆದ ವರ್ಷ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಬಹುವಾಗಿ ಸಮಾಜ ಸೇವೆ ಮಾಡಿ 'ಮಸೀಹಾ' (ದೇವರು) ಎನಿಸಿಕೊಂಡಿದ್ದ ನಟ ಸೋನು ಸೂದ್‌ಗೆ ಇತ್ತೀಚೆಗಷ್ಟೆ ಕೊರೊನಾ ಪಾಸಿಟಿವ್ ಆಗಿತ್ತು. ಆದರೆ ಹೊಸ ವರದಿ ಪ್ರಕಾರ ಸೋನುಗೆ ಕೊರೊನಾ ನೆಗೆಟಿವ್ ಆಗಿದೆ.

  ನಟ ಸೋನು ಸೂದ್‌ಗೆ ಏಪ್ರಿಲ್ 17 ರಂದು ಕೊರೊನಾ ಪಾಸಿಟಿವ್ ಆಗಿತ್ತು. ವರದಿ ಬಂದಾಗಿನಿಂದಲೂ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಐಸೋಲೇಷನ್‌ಗೆ ಒಳಪಟ್ಟಿದ್ದರು ನಟ. ಇದೀಗ ಸೋನು ಸೂದ್‌ಗೆ ನೆಗೆಟಿವ್ ವರದಿ ಬಂದಿದ್ದು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಸೋನು ಸೂದ್‌ಗೆ ಕೊರೊನಾ ಪಾಸಿಟಿವ್ ಆಗಿದ್ದಾಗ ಅವರ ಅಭಿಮಾನಿಗಳು ಹಾಗೂ ಹಲವರು ಆತಂಕವನ್ನು ವ್ಯಕ್ತಪಡಿಸಿದ್ದರು. ಕೊರೊನಾ ಸಂಕಷ್ಟದ ಸಮಯದಲ್ಲಿ ಯಥೇಚ್ಛವಾಗಿ ದುಡಿದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ಮರುಗಿದ್ದರು. ಈಗ ವರದಿ ನೆಗೆಟಿವ್ ಆದಾಗ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

  ಸೋನು ಸೂದ್ ಅವರು ಇತ್ತೀಚೆಗಷ್ಟೆ ಕೊರೊನಾದ ಲಸಿಕೆಯನ್ನು ಪಡೆದಿದ್ದರು ಎರಡನೇ ಡೋಸೇಜ್ ಲಸಿಕೆ ಪಡೆಯುವ ಮುನ್ನವೇ ಸೋನು ಸೂದ್‌ಗೆ ಕೊರೊನಾ ಪಾಸಿಟಿವ್ ಆಗಿತ್ತು. ಸೋನು ಸೂದ್ ಅವರು ಪಂಜಾಬ್ ರಾಜ್ಯದ ಲಸಿಕೆ ಅಭಿಯಾನಕ್ಕೆ ರಾಯಭಾರಿ ಸಹ ಆಗಿದ್ದಾರೆ.

  ನಟ ಸೋನು ಸೂದ್ ಅವರು ಭಾರತದಲ್ಲಿ ಕೊರೊನಾ ಆರಂಭವಾದಾಗಿನಿಂದಲೂ ಯಾವುದೇ ಶಾಸಕ, ಸಚಿವರೊಬ್ಬರು ಮಾಡಬಹುದಾದುದ್ದಕ್ಕಿಂತಲೂ ಹೆಚ್ಚಿನ ಕಾರ್ಯಗಳನ್ನು ಮಾಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ತಮ್ಮ ಸ್ವ-ಊರುಗಳಿಗೆ ತಲುಪಿಸುವ ಕಾರ್ಯವನ್ನು ಸೋನು ಸೂದ್ ಮಾಡಿದ್ದರು. ಅದು ಮಾತ್ರವೇ ಅಲ್ಲದೆ ಉಚಿತ ಆಹಾರ ವಿತರಣೆ, ಔಷಧ ವಿತರಣೆ ಹೀಗೆ ಹಲವಾರು ಸಮಾಜ ಮುಖಿ ಕಾರ್ಯದಲ್ಲಿ ಸೋನು ಸೂದ್ ತೊಡಗಿಸಿಕೊಂಡಿದ್ದರು. ಈಗಲೂ ಅವರು ತಮ್ಮ ಸಾಮಾಜಿಕ ಕಾರ್ಯಗಳನ್ನು ಬಿಟ್ಟಿಲ್ಲ.

  ಕೊರೊನಾ ಪಾಸಿಟಿವ್ ಆಗಿದ್ದ ಸಮಯದಲ್ಲಿಯೂ ಸಹ ಸೋನು ಸೂದ್ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಈ ಬಗ್ಗೆ ಅವರು ಕೆಲವು ದಿನಗಳ ಹಿಂದೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

  English summary
  Sonu Sood tested COVID 19 positive on April 17 now he has under gone test again and result came as negative.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X