twitter
    For Quick Alerts
    ALLOW NOTIFICATIONS  
    For Daily Alerts

    'ರಿಯಲ್ ಹೀರೋ' ಸೋನು ಸೂದ್ ಮತ್ತೊಂದು ಮಹತ್ವದ ಕಾರ್ಯ, ವಿದ್ಯಾರ್ಥಿಗಳಿಗೆ ಅನುಕೂಲ!

    |

    ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕೋಟ್ಯಾಂತರ ಜನರು ಸಂಕಷ್ಟಕ್ಕೆ ಸಿಲುಕಿದರು. ಕೈಯಲ್ಲಿದ್ದ ಕೆಲಸ ಕಳೆದುಕೊಂಡರು, ತಮ್ಮ ಊರಿಗೆ ಹೋಗಲು ದುಡ್ಡಿಲ್ಲದ ಪರದಾಡಿದರು. ತಿನ್ನಲು ಊಟ ಸಹ ಸಿಗದ ಒದ್ದಾಡಿದವರು. ಆಗ ಆ ಜನರ ಪಾಲಿಗೆ ಹೀರೋ ಆಗಿದ್ದು ನಟ ಸೋನು ಸೂದ್.

    ವಲಸೆ ಕಾರ್ಮಿಕರಿಗಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಿದರು. ಊರುಗಳಿಗೆ ಹೋಗಲು ಬಯಸುವವರಿಗೆ ಊಟ-ತಿಂಡಿ ನೀಡಿ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಟ್ಟರು. ವಿದೇಶಗಳಲ್ಲಿ ಸಿಲುಕಿಕೊಂಡಿದ್ದವರಿಗೆ ನೆರವು ನೀಡಿದರು. ಆನ್‌ಲೈನ್ ಶಿಕ್ಷಣಕ್ಕಾಗಿ ಸ್ಮಾರ್ಟ್ ಫೋನ್ ಇಲ್ಲದ ಕೆಲವು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದರು. ಹಿರಿಯ ಅಜ್ಜಿಯೊಬ್ಬರಿಗೆ ಮಾರ್ಷಲ್ ಆರ್ಟ್ಸ್ ಶಾಲೆ ಕಟ್ಟಿಕೊಟ್ಟರು.

    ವಾರಿಯರ್ ಅಜ್ಜಿಗೆ ಸೋನು ಸೂದ್ ಸಹಾಯ: ಮಾರ್ಷಲ್ ಆರ್ಟ್ಸ್ ತರಬೇತಿ ಶಾಲೆ ನಿರ್ಮಿಸಿದ ನಟವಾರಿಯರ್ ಅಜ್ಜಿಗೆ ಸೋನು ಸೂದ್ ಸಹಾಯ: ಮಾರ್ಷಲ್ ಆರ್ಟ್ಸ್ ತರಬೇತಿ ಶಾಲೆ ನಿರ್ಮಿಸಿದ ನಟ

    ಹೀಗೆ, ಕಳೆದ ಐದಾರು ತಿಂಗಳಿನಿಂದ ಜನಸಾಮಾನ್ಯರ ಪಾಲಿಗೆ ರಿಯಲ್ ಹೀರೋ ಆಗಿರುವ ಸೋನು ಸೂದ್ ಈಗ ಮತ್ತೊಂದು ಮಹತ್ವದ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಮುಂದೆ ಓದಿ....

    ಬಡಮಕ್ಕಳಿಗೆ ವಿದ್ಯಾರ್ಥಿ ವೇತನ!

    ಬಡಮಕ್ಕಳಿಗೆ ವಿದ್ಯಾರ್ಥಿ ವೇತನ!

    ಬಡತನದಲ್ಲಿ ಸಿಲುಕಿ ಕಷ್ಟುಪಟ್ಟು ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲು ನಟ ಸೋನು ಸೂದ್ ಮುಂದಾಗಿದ್ದಾರೆ. ತಮ್ಮ ತಾಯಿ ಸರೋಜ್ ಸೂದ್ ಅವರ ಹೆಸರಿನಲ್ಲಿ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ನಟ ಯೋಜಿಸಿದ್ದಾರೆ.

    ನನ್ನ ಕಣ್ಣಲ್ಲಿ ಬಡತನ ನೋಡಿದ್ದೇನೆ

    ನನ್ನ ಕಣ್ಣಲ್ಲಿ ಬಡತನ ನೋಡಿದ್ದೇನೆ

    ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಸೋನು ಸೂದ್ "ಕಳೆದ ಕೆಲವು ತಿಂಗಳುಗಳಲ್ಲಿ, ಬಡವರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣ ಪಾವತಿಸಲು ಹೇಗೆ ಹೆಣಗಾಡುತ್ತಿದ್ದಾರೆಂದು ನಾನು ನೋಡಿದ್ದೇನೆ. ಕೆಲವರಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಫೋನ್‌ ಹೊಂದಿಲ್ಲ, ಕೆಲವರಿಗೆ ಶುಲ್ಕ ಪಾವತಿಸಲು ಹಣವಿಲ್ಲ. ಆದ್ದರಿಂದ, ನನ್ನ ತಾಯಿ ಪ್ರೊಫೆಸರ್ ಸರೋಜ್ ಸೂದ್ ಹೆಸರಿನಲ್ಲಿ ವಿದ್ಯಾರ್ಥಿವೇತನವನ್ನು ನೀಡಲು ನಾನು ದೇಶಾದ್ಯಂತದ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ'' ಎಂದು ಮಾಹಿತಿ ನೀಡಿದರು.

    ಯಾದಗಿರಿಯ ಬಡ ದಂಪತಿ ಮೊಬೈಲ್‌ಗೆ ಸೋನು ಸೂದ್ ಸಂದೇಶ!ಯಾದಗಿರಿಯ ಬಡ ದಂಪತಿ ಮೊಬೈಲ್‌ಗೆ ಸೋನು ಸೂದ್ ಸಂದೇಶ!

    ಯಾರೆಲ್ಲ ಈ ಸ್ಕಾಲರ್‌ಶಿಪ್ ಪಡೆಯಬಹುದು?

    ಯಾರೆಲ್ಲ ಈ ಸ್ಕಾಲರ್‌ಶಿಪ್ ಪಡೆಯಬಹುದು?

    ವಾರ್ಷಿಕ ಆದಾಯ 2 ಲಕ್ಷ ರೂಗಿಂತ ಕಡಿಮೆ ಇರುವ ಕುಟುಂಬಗಳಿಂದ ಬರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ, ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆ ಉತ್ತಮವಾಗಿರಬೇಕು ಎಂದು ನಟ ಷರತ್ತು ವಿಧಿಸಿದ್ದಾರೆ. ಅಂತವರು ಎಲ್ಲಾ ವೆಚ್ಚಗಳು-ಕೋರ್ಸ್ ಶುಲ್ಕಗಳು, ಹಾಸ್ಟೆಲ್ ವಸತಿ ಮತ್ತು ಆಹಾರ ಎಲ್ಲವನ್ನು ಸೋನು ಸೂದ್ ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

    ಯಾವೆಲ್ಲ ಕೋರ್ಸ್‌ಗಳಲ್ಲಿ ಈ ಯೋಜನೆ ಸಿಗಲಿದೆ

    ಯಾವೆಲ್ಲ ಕೋರ್ಸ್‌ಗಳಲ್ಲಿ ಈ ಯೋಜನೆ ಸಿಗಲಿದೆ

    ವರದಿಗಳ ಪ್ರಕಾರ, ಸೋನು ಸೂದ್ ಘೋಷಿಸಿರುವ ವಿದ್ಯಾರ್ಥಿವೇತನ ಮೆಡಿಸಿನ್, ಎಂಜಿನಿಯರಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ರೊಬೊಟಿಕ್ಸ್ ಮತ್ತು ಆಟೊಮೇಷನ್, ಸೈಬರ್‌ಸೆಕ್ಯೂರಿಟಿ, ಡಾಟಾ ಸೈನ್ಸ್, ಫ್ಯಾಶನ್, ಜರ್ನಲಿಸಮ್ ಮತ್ತು ಬಿಸಿನೆಸ್ ಸ್ಟಡೀಸ್ ಕೋರ್ಸ್‌ನ ವಿದ್ಯಾರ್ಥಿಗಳಿಗೂ ಲಭ್ಯವಿರುತ್ತದೆ.

    Recommended Video

    Rakesh Adiga spiritual Rap , ಕನ್ನಡಧ Rapperಗಳಿಗೆ ಕಿವಿಮಾತು | Rakesh Adiga | Filmibeat Kannada
    ತಾಯಿಯ ಆಸೆ ಮುಂದುವರಿಸುವೆ

    ತಾಯಿಯ ಆಸೆ ಮುಂದುವರಿಸುವೆ

    ಸೋನು ಸೂದ್ ಅವರ ತಾಯಿ ಸರೋಜ್ ಸೂದ್ ಮೊಗಾ (ಪಂಜಾಬ್) ನಲ್ಲಿ ಪ್ರೊಫೆಸರ್ ಆಗಿದ್ದು, ಉಚಿತವಾಗಿ ಬೋಧಿಸುತ್ತಿದ್ದರು. ತಮ್ಮ ತಾಯಿ ಕೆಲಸವನ್ನು ಮುಂದೆ ತೆಗೆದುಕೊಂಡು ಹೋಗಬೇಕು ಎಂಬ ಆಸೆ ಹೊಂದಿದ್ದ ನಟ 'ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    English summary
    Bollywood actor Sonu Sood to offer scholarship to underprivileged students in Various Fields in his mother saroj sood's name.
    Saturday, September 12, 2020, 12:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X