For Quick Alerts
  ALLOW NOTIFICATIONS  
  For Daily Alerts

  'ನನಗೂ ರಾಹುಲ್ ಗೂ ಸಂಬಂಧವಿಲ್ಲ, ಮಗಳನ್ನು ಕೇಳಿ': ಗರಂ ಆದ ಸುನಿಲ್ ಶೆಟ್ಟಿ

  |

  ಟೀಂ ಇಂಡಿಯಾದ ಆಟಗಾರ ಕೆ.ಎಲ್ ರಾಹುಲ್ ಗರ್ಲ್ ಫ್ರೆಂಡ್ ವಿಚಾರದಲ್ಲಿ ಸದಾ ಸುದ್ದಿಯಾಗುತ್ತಿರುತ್ತಾರೆ. ಕನ್ನಡಿಗ ರಾಹುಲ್ ಬಾಲಿವುಡ್ ಸ್ಟಾರ್ ನಟ ಸುನಿಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿಯನ್ನು ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಒಂದು ವರ್ಷದಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ರಾಹುಲ್ ಮತ್ತು ಅಥಿಯಾ ಇಬ್ಬರು ಒಟ್ಟಿಗೆ ಓಡಾಡಿಕೊಂಡಿರುವ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ಇತ್ತೀಚಿಗೆ ಹೊಸ ಆಚರಣೆಗೆಂದು ವಿದೇಶಕ್ಕೆ ಹಾರಿದ್ದ ಈ ಜೋಡಿ ಏರ್ ಪೋರ್ಟ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿ ಮತ್ತೆ ಸುದ್ದಿಯಾಗಿದ್ದರು. ಅಲ್ಲದೆ ಒಂದಿಷ್ಟು ರೋಮ್ಯಾಂಟಿಕ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ. ಹಾಗಾಗಿ ಇಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧವಿದೆ ಎನ್ನುವ ಮಾತು ಕೇಳಿ ಬರುತ್ತಿವೆ. ಈ ಬಗ್ಗೆ ಈಗ ನಟ ಸುನಿಲ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಮಗಳ ಡೇಟಿಂಗ್ ವಿಚಾರ ಕೇಳಿ ಗರಂ ಆಗಿದ್ದಾರೆ.

  ಕೆ.ಎಲ್ ರಾಹುಲ್ 'ಪ್ರೀತಿ' ವಿಷ್ಯ ಬಿಚ್ಚಿಡ್ತಾ ಈ ರೋಮ್ಯಾಂಟಿಕ್ ಫೋಟೋ?

  ಸುನಿಲ್ ಶೆಟ್ಟಿ ಹೇಳಿದ್ದೇನು?

  ಸುನಿಲ್ ಶೆಟ್ಟಿ ಹೇಳಿದ್ದೇನು?

  ಇತ್ತೀಚಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ಸುನಿಲ್ ಶೆಟ್ಟಿ. ಮಗಳ ಡೇಟಿಂಗ್ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಗರಂ ಆಗಿದ್ದಾರೆ. "ನನಗೂ ರಾಹುಲ್ ಗೂ ಯಾವುದೆ ಸಂಬಂಧವಲ್ಲ. ನೀವು ಬೇಕಾದರೆ ಅತಿಯಾಳನ್ನು ಕೇಳಿಕೊಳ್ಳಿ. ಅದು ನಿಜವಾದರೆ ನೀವು ಬಂದು ನನ್ನ ಬಳಿ ಹೇಳಿ. ನಾನು ಆಗ ಮಾತನಾಡುತ್ತೇನೆ. ನಿಮಗೆ ಗೊತ್ತಿಲ್ಲದಿದ್ದರೆ, ನೀವು ನನ್ನನ್ನು ಹೇಗೆ ಕೇಳುತ್ತೀರಿ?" ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

  ಅತಿಯಾ-ರಾಹುಲ್ ಫೋಟೋಗೆ ಸುನಿಲ್ ಪ್ರತಿಕ್ರಿಯೆ

  ಅತಿಯಾ-ರಾಹುಲ್ ಫೋಟೋಗೆ ಸುನಿಲ್ ಪ್ರತಿಕ್ರಿಯೆ

  ಈ ಹಿಂದೆ ಕೆ.ಎಲ್ ರಾಹುಲ್ ಮತ್ತು ಅತಿಯಾ ಶೆಟ್ಟಿ ಇಬ್ಬರು ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ರಾಹುಲ್ ಹಳೆಯ ಟೆಲಿಫೋನ್ ಹಿಡಿದು ನಿಂತಿದ್ರೆ, ಪಕ್ಕದಲ್ಲಿ ಅತಿಯಾ ನಗುತ್ತ ಫೋಟೋಗೆ ಫೋಸ್ ನೀಡಿದ್ದರು. ಈ ಪೋಟೋಗೆ ನಟ ಸುನಿಲ್ ಶೆಟ್ಟಿ ಸೂಪರ್ ಇಮೋಜಿ ಹಾಕಿ ಪ್ರತಿಕ್ರಿಯೆ ನೀಡಿದ್ದರು. ಇನ್ನು ಟೀಂ ಇಂಡಿಯಾ ಆಟಗಾರರು ಸಹ ಪ್ರತಿಕ್ರಿಯೆ ನೀಡಿದ್ದರು. ಆದರೀಗ ಸುನಿಲ್ ಗರಂ ಆಗಿರುವುದು ಅಚ್ಚರಿ ಮೂಡಿಸಿದೆ.

  ಬಾಲಿವುಡ್ ಸ್ಟಾರ್ ನಟನ ಮಗಳ ಜೊತೆ ಕೆಎಲ್ ರಾಹುಲ್ ಡೇಟಿಂಗ್.?ಬಾಲಿವುಡ್ ಸ್ಟಾರ್ ನಟನ ಮಗಳ ಜೊತೆ ಕೆಎಲ್ ರಾಹುಲ್ ಡೇಟಿಂಗ್.?

  ರೋಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದ ಜೋಡಿ

  ರೋಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದ ಜೋಡಿ

  ನಟಿ ಅತಿಯಾ ಶೆಟ್ಟಿ ಹುಟ್ಟುಹಬ್ಬದ ದಿನವು ರಾಹುಲ್ ವಿಶೇಷವಾಗಿ ಶುಭಕೋರಿ ಸುದ್ದಿಯಾಗಿದ್ದರು. ಕೇವಲ ವಿಶ್ ಮಾಡಿದ್ದು ಮಾತ್ರವಲ್ಲದೆ, ಇಬ್ಬರ ರೋಮ್ಯಾಂಟಿಕ್ ಫೋಟೋವನ್ನು ಶೇರ್ ಮಾಡಿದ್ದರು. ಕೆಫೆಯೊಂದರಲ್ಲಿ ಕುಳಿತಿರುವ ಫೋಟೋ ಶೇರ್ ಮಾಡಿದ್ದರು. ಇಬ್ಬರು ಒಬ್ಬರಿಗೊಬ್ಬರು ನೋಡಿಕೊಂಡು ನಾಚಿಕೊಳ್ಳುತ್ತಿರುವ ಫೋಟೋ ಆದಾಗಿತ್ತು. ಇಬ್ಬರ ಲವ್ ರಿಲೇಶನ್ ಶಿಫ್ ಬಹಿರಂಗಗೊಳಿಸುವುದಕ್ಕಾಗಿಯೆ ಈ ಫೋಟೋ ಶೇರ್ ಮಾಡಲಾಗಿದೆಯಾ ಎನ್ನುವ ಚರ್ಚೆ ಜೋರಾಗಿ ನಡೆದಿತ್ತು.

  ಐರಾವತ ನಟಿಯ ಬೇಡಿಕೆ ತಿರಸ್ಕರಿಸಿದ್ರಾ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ.?ಐರಾವತ ನಟಿಯ ಬೇಡಿಕೆ ತಿರಸ್ಕರಿಸಿದ್ರಾ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ.?

  ಈ ಬಗ್ಗೆ ಪ್ರತಿಕ್ರಿಯೆ ನೀಡದ ಜೋಡಿ

  ಈ ಬಗ್ಗೆ ಪ್ರತಿಕ್ರಿಯೆ ನೀಡದ ಜೋಡಿ

  ನಟಿ ಅತಿಯಾ ಆಗಲಿ ಅಥವಾ ಕೆ.ಎಲ್ ರಾಹುಲ ಆಗಲಿ ಇಬ್ಬರ ರಿಲೇಶನ್ ಶಿಪ್ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಬೆಸ್ಟ್ ಫ್ರೆಂಡ್ಸ್ ಅಷ್ಟೆ ಎಂದು ಹೇಳಿಕೊಂಡು ಒಡಾಡುತ್ತಿದ್ದಾರೆ. ಆದರೆ ಇಬ್ಬರ ಕ್ಲೋಸ್ ನೆಸ್ ನೋಡಿದರೆ ಇಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧವಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಇಬ್ಬರು ಹೊಸವರ್ಷವನ್ನು ವಿದೇಶದಲ್ಲಿ ಆಚರಿಸಿ ಸುದ್ದಿಯಾಗಿದ್ದರು. ಆಗಾಗ ಇಬ್ಬರು ಸದ್ದು ಸುದ್ದಿ ಮಾಡುತ್ತಿರುತ್ತಾರೆ. ನಿಜಕ್ಕು ಪ್ರೀತಿಸುತ್ತಿದ್ದಾರಾ ಅಥವಾ ಸ್ನೇಹಿತರಷ್ಟೆನಾ ಎನ್ನುವುದನ್ನು ಅವರೆ ಹೇಳಬೇಕಿದೆ.

  English summary
  Bollywood Actor Suniel Shetty reaction about his daughter athiya shetty And K.L Rahul dating rumors. Rumours that Actress athiya shetty dating with cricketer K.L Rahul from last year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X