ಕೆ.ಎಲ್ ರಾಹುಲ್ ಮತ್ತು ಮಗಳು ಆಥಿಯಾ ಜೋಡಿ ಬಗ್ಗೆ ಸುನಿಲ್ ಶೆಟ್ಟಿ ಹೇಳಿದ್ದೇನು?

ಬಾಲಿವುಡ್‌ನ ಖ್ಯಾತ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್ ರಾಹುಲ್ ಪ್ರೀತಿ, ಪ್ರೇಮದ ವಿಚಾರ ಗುಟ್ಟಾಗಿ ಉಳಿದಿಲ್ಲ. ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಇಬ್ಬರೂ ಸುದ್ದಿಯಾಗುತ್ತಿರುತ್ತಾರೆ. ಇದೀಗ ಅಥಿಯಾ ಶೆಟ್ಟಿ ಮತ್ತು ರೂಮರ್ ಬಾಯ್ ಫ್ರೆಂಡ್ ಕೆ.ಎಲ್ ರಾಹುಲ್ ಇಬ್ಬರ ಇಂಗ್ಲೆಂಡ್ ಪ್ರವಾಸ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಇಬ್ಬರು ಇಂಗ್ಲೆಂಡ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ಅಥಿಯಾ ಅಥವಾ ರಾಹುಲ್ ಎಲ್ಲಿಯೂ ತಮ್ಮ ಪ್ರೀತಿಯ ಬಗ್ಗೆ ಬಹಿರಂಗ ಪಡಿಸಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಇಬ್ಬರೂ ಸ್ನೇಹಿತರಷ್ಟೆ ಎಂದು ಜಾರಿಕೊಳ್ಳುತ್ತಾರೆ. ಇನ್ನು ಅಥಿಯಾ ತಂದೆ ಖ್ಯಾತ ನಟ ಸುನಿಲ್ ಶೆಟ್ಟಿ ಕೂಡ ಮಗಳ ಡೇಟಿಂಗ್ ವಿಚಾರದ ಬಗ್ಗೆ ಎಲ್ಲೂ ಬಾಯಿಬಿಟ್ಟಿಲ್ಲ.

ಆದರೀಗ ಈ ಜೋಡಿ ಅದ್ಭುತವಾಗಿದೆ ಎಂದು ನಟ ಸುನಿಲ್ ಶೆಟ್ಟಿ ಹೇಳುವ ಮೂಲಕ . ಪ್ರಮುಖ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ನಟ ಸುನಿಲ್ ಶೆಟ್ಟಿ ಮಗಳು ಅಥಿಯಾ ಮತ್ತು ರಾಹುಲ್ ಜೋಡಿಯ ಬಗ್ಗೆ ಮಾತನಾಡಿದ್ದಾರೆ. ಮಗಳು ಅಥಿಯಾ ಇಂಗ್ಲೆಂಡ್ ಪ್ರವಾಸ ಹೋಗಿರುವ ಬಗ್ಗೆ ಸುನಿಲ್ ಶೆಟ್ಟಿ ಖಚಿತ ಪಡಿಸಿದ್ದಾರೆ. ಆದರೆ ಆಕೆಯ ಸಹೋದರ ಅಹನ್ ಜೊತೆ ಹೋಗಿದ್ದಾರೆ ಎಂದು ಹೇಳಿದ್ದಾರೆ.

Actor Sunil Shetty opens up about Athiya Shetty and K L Rahuls rumaoured affair

ಹೌದು, ಅವಲು ಇಂಗ್ಲೆಂಡಿನಲ್ಲಿ ಇದ್ದಾಳೆ. ಸಹೋದರ-ಸಹೋದರಿ ಜೋಡಿ ಸಮಯ ಕಳೆಯಲು ಅಲ್ಲಿಗೆ ಹೋಗಿದ್ದಾರೆ" ಎಂದು ಸುನಿಲ್ ಶೆಟ್ಟಿ ಹೇಳಿದ್ದಾರೆ. ಇನ್ನು ಅಥಿಯಾ ಮತ್ತು ರಾಹುಲ್ ಇಬ್ಬರೂ ಜಾಹೀರಾತು ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಬಗ್ಗೆ ಮಾತನಾಡಿದ ಸುನಿಲ್, ನೀವು ಅವರೊಂದಿಗೆ ಮಾತನಾಡುವುದು ಉತ್ತಮ ಎಂದು ಭಾವಿಸುತ್ತೇನೆ. ನನ್ನ ಪ್ರಕಾರ ಇದು ಅಂತರಾಷ್ಟ್ರೀಯ ಬ್ರಾಂಡ್ ಮತ್ತು ಇಬ್ಬರನ್ನು ಆಯ್ಕೆ ಮಾಡಿದ್ದಾರೆ. ನನ್ನ ಪ್ರಕಾರ ಇಬ್ಬರೂ ಅದ್ಭುತವಾಗಿ ಕಾಣಿಸುತ್ತಾರೆ. ಇವರದ್ದು ಸುಂದರ ಜೋಡಿ. ಜಾಹೀರಾತಿನಲ್ಲಿ ಇಬ್ಬರೂ ತುಂಬಾ ಅದ್ಭುತವಾಗಿ ಕಾಣಿಸುತ್ತಾರೆ" ಎಂದು ಹೇಳಿದ್ದಾರೆ.

ಜಾಹೀರಾತು ಬಗ್ಗೆ ಮಾತನಾಡುತ್ತಲೇ ಇಬ್ಬರದು ಅದ್ಭುತ ಜೋಡಿ ಎಂದು ಸುನಿಲ್ ಶೆಟ್ಟಿ ಒಪ್ಪಿಕೊಳ್ಳುವ ಮೂಲಕ ರಾಹುಲ್ ಮತ್ತು ಅಥಿಯಾ ನಡುವಿನ ಪ್ರೀತಿ-ಪ್ರೇಮದ ಬಗ್ಗೆ ಸುಳಿವು ನೀಡಿದ್ದಾರೆ. ಅಂದಹಾಗೆ ಅಥಿಯಾ ಮತ್ತು ರಾಹುಲ್ ಸಂಬಂಧದ ಬಗ್ಗೆ ಈ ಹಿಂದೆ ಪ್ರತಿಕ್ರಿಯೆ ನೀಡಿದ್ದ ಸುನಿಲ್ ಶೆಟ್ಟಿ, "ಅವರ ಸಂಬಂಧದ ಬಗ್ಗೆ ನನಗೆ ಗೊತ್ತಿಲ್ಲ. ಒಂದು ವೇಳೆ ಅಥಿಯಾ ಏನಾದರು ನಿಮಗೆ ಹೇಳಿದ್ರೆ ಅಮೇಲೆ ಬಂದು ನನಗೆ ಹೇಳಿ" ಎಂದು ಉತ್ತರಿಸಿದ್ರು.

Recommended Video

Darshan ವಿಚಾರದಲ್ಲಿ ಸುಳ್ಳು ಹೇಳಿದ್ರ ಹೋಟೆಲ್ ಮಾಲೀಕ ಸಂದೇಶ್ | Darshan Hotel Controversy |Filmibeat Kannada

2015ರಲ್ಲಿ ಹೀರೋ ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ನಟಿ ಅಥಿಯಾ ಶೆಟ್ಟಿ, ನಟ ಸೂರಜ್ ಪಾಂಚೋಲಿ ಜೊತೆ ನಟಿಸಿದ್ದರು. ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ಅಥಿಯಾ ಸಿನಿಮಾಗಿಂತ ಹೆಚ್ಚಾಗಿ ರಾಹುಲ್ ಜೊತೆಗಿನ ಪ್ರೀತಿ, ಡೇಟಿಂಗ್ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿದ್ದಾರೆ.

More from Filmibeat

English summary
Bollywood Actor Sunil Shetty opens up about Athiya Shetty and K L Rahul's rumaoured affair. He says look brilliant togaether.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X