ಬಾಲಿವುಡ್ ನಟ ವರುಣ್ ಧವನ್ ಹತ್ತಿರದ ಸಂಬಂಧಿಗೆ ಕೊರೊನಾ ಪಾಸಿಟಿವ್
ತಮ್ಮ ಹತ್ತಿರದ ಸಂಬಂಧಿಕರೊಬ್ಬರಿಗೆ ಕೊರೊನಾ ವೈರಸ್ ಪಾಸಿಟಿವ್ ಆಗಿರುವ ಬಗ್ಗೆ ವರುಣ್ ಧವನ್ ಮಾಹಿತಿ ಹೊರಹಾಕಿದ್ದಾರೆ.
Recommended Video
ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಲೈವ್ ಬಂದಿದ್ದ ವರುಣ್ ಧವನ್, ತಮ್ಮ ಹತ್ತಿರದ ಸಂಬಂಧಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂದಿದ್ದು, ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ತಮ್ಮ ಅಭಿಮಾನಿಗಳು ಸೇರಿದಂತೆ ಎಲ್ಲರೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಿ, ಎಲ್ಲರೂ ಮನೆಯಲ್ಲೇ ಇದ್ದು, ಸುರಕ್ಷಿತವಾಗಿರಿ ಎಂದು ವರುಣ್ ಧವನ್ ಮನವಿ ಮಾಡಿದ್ದಾರೆ.
ನಿಮ್ಮ ಹತ್ತಿರದಲ್ಲಿರುವವರಿಗೆ ಕೊರೊನಾ ಪಾಸಿಟಿವ್ ಬಂದಾಗ ಅದರ ತೀವ್ರತೆ ನಿಮಗೆ ಗೊತ್ತಾಗುತ್ತದೆ. ಅದು ಭಯಾನಕ ಅನುಭವ. ಆತಂಕ ನೂರು ಪಟ್ಟಾಗುತ್ತದೆ ಎಂದು ವರುಣ್ ಧವನ್ ಹೇಳಿದ್ದಾರೆ.

ಮುಂಬೈನಲ್ಲಿ ಅತ್ಯಧಿಕ ಪ್ರಕರಣಗಳು
ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತ್ಯಧಿಕ ಕೊರೊನಾ ಪಾಸಿಟಿವ್ ಪ್ರಕರಣಗಳು ಈವರೆಗೆ ಪತ್ತೆಯಾಗಿವೆ. ಮುಂಬೈನಲ್ಲಿ 1298 ಮಂದಿಗೆ ಕೊರೊನಾ ಆಗಿದೆ (ಏಪ್ರಿಲ್ 13 ರ ವರೆಗೆ). ಬಾಲಿವುಡ್ ಗೆ ಸಂಬಂಧಿಸಿದ ಕೆಲವು ವ್ಯಕ್ತಿಗಳಿಗೂ ಕೊರೊನಾ ಬಂದಿದೆ.

ಬಾಲಿವುಡ್‌ನ ಕೆಲವರಿಗೆ ಕೊರೊನಾ ಪಾಸಿಟಿವ್
ಗಾಯಕಿ ಕನ್ನಿಕಾ ಕಪೂರ್ ಗೆ ಕೊರೊನಾ ಪಾಸಿಟಿವ್ ಆಗಿತ್ತು, ನಂತರ ಆಕೆ ಗುಣಮುಖರಾಗಿದ್ದಾರೆ. ನಂತರ ನಿರ್ಮಾಪಕನ ಮಕ್ಕಳಿಬ್ಬರಿಗೂ ಕೊರೊನಾ ಪಾಸಿಟಿವ್ ಆಗಿತ್ತು, ಈಗ ಅವರಿಬ್ಬರೂ ಗುಣಮುಖರಾಗಿದ್ದಾರೆ.

ಕೊರೊನಾ ಗುಣಮುಖರೊಂದಿಗೆ ಲೈವ್ ಮಾಡಿದ ವರುಣ್
ಗುಣಮುಖರಾಗಿ ಮನೆಗೆ ಬಂದಿದ್ದ ಜೊಯಾ ಮೊರಾನಿ ಅವರೊಂದಿಗೆ ಲೈವ್ ಮಾಡಿದ ವರುಣ್ ಧವನ್ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ದೇಣಿಗೆ ನೀಡಿರುವ ವರುಣ್ ಧವನ್
ವರುಣ್ ಧವನ್ 30 ಲಕ್ಷ ಹಣವನ್ನು ಪ್ರಧಾನಿ ಪರಿಹಾರ ನಿಧಿ ಮತ್ತು 25 ಲಕ್ಷ ಹಣವನ್ನು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಹಲವು ಸಿನಿಮಾಗಳನ್ನು ಬ್ಯುಸಿಯಿದ್ದ ವರುಣ್ ಧವನ್ ಪ್ರಸ್ತುತ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಉಳಿದಿದ್ದಾರೆ.


Click it and Unblock the Notifications











