ಡ್ರೈವರ್‌ರನ್ನು ಕಳೆದುಕೊಂಡ ನೋವಲ್ಲಿ ವರುಣ್ ಧವನ್ ಕಡಲ ತೀರದಲ್ಲಿ ಮಾಡಿದ್ದೇನು?

ನಟ ವರುಣ್ ಧವನ್ ಕಾರು ಚಾಲಕ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಜನವರಿ 18ರಂದು ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆ ಸೇರಿಸುವ ಮುನ್ನವೇ ಪ್ರಾಣ ಬಿಟ್ಟಿದ್ದರು ಮನೋಜ್. ಈ ಘಟನೆ ನಂತರ ಸಾಕಷ್ಟು ಮನನೊಂದಿದ್ದ ವರುಣ್ ಧವನ್ ಶೂಟಿಂಗ್‌ನಿಂದಲೂ ಬ್ರೇಕ್ ತೆಗೆದುಕೊಂಡಿದ್ದರು. ಸುಮಾರು 26 ವರ್ಷಗಳಿಂದ ವರುಣ್ ಧವನ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಮನೋಜ್ ನಿಷ್ಠಾವಂತ ಕೂಡ ಹೌದು. ಮನೆ ಸದಸ್ಯರಲ್ಲಿ ಒಬ್ಬರಂತೆ ಇದ್ದ ಮನೋಜ್ ಸಾವು ವರುಣ್ ಧವನ್ ಕುಟುಂಬಕ್ಕೆ ಸಾಕಷ್ಟು ನೋವು ತಂದಿದೆ.

ಇದೇ ನೋವಿನಲ್ಲಿ ಇರುವ ವರುಣ್ ಧವನ್ ಇನ್ನೂ ಕೂಡ ಶೂಟಿಂಗ್‌ಗೆ ಹಾಜರಾಗಿಲ್ಲ. ಒಂದು ವಾರದಿಂದಲೂ ಅದೇ ನೋವಿನಲ್ಲಿ ಇರುವ ಅವರು ಇಂದು ಮನೋಜ್‌ರನ್ನು ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ. ಕಡಲ ತೀರದಲ್ಲಿ "ಮನೋಜ್ ಬಾಯ್ ವೀ ಮಿಸ್‌ ಯೂ ಸೋ ಮಚ್" ಮನೋಜ್ ಎಂದು ಬರೆದು ಅದರ ಸುತ್ತ ಹಾರ್ಟ್ ಬಿಡಿಸಿರುವ ವರುಣ್ ಧವನ್ ವಿಶೇಷವಾಗಿ ತನ್ನ ಕಾರು ಚಾಲಕನನ್ನು ನೆನೆದುಕೊಂಡಿದ್ದಾರೆ. ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ರೀತಿ ಬರೆದು ಸ್ಟೋರಿ ಹಾಕಿಕೊಂಡಿರುವ ವರುಣ್‌ಗೆ ಅವರ ಸ್ನೇಹಿತ ಕೂಡ ಸಾಥ್ ನೀಡಿದ್ದಾರೆ. ಅಲ್ಲದೇ ಈ ನೋವಿನಿಂದ ನಾನು ಇನ್ನು ಹೊರಬಂದಿಲ್ಲ ಎಂಬ ಬಗ್ಗೆ ತಿಳಿಸಿದ್ದಾರೆ.

ಇದಿಷ್ಟೇ ಅಲ್ಲದೇ ಮನೋಜ್‌ರ ನೆನಪಲ್ಲಿ ಒಂದು ವಿಡಿಯೋವನ್ನು ವರುಣ್ ಧವನ್ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ವನ್ನು ಶೇರ್ ಮಾಡಿಕೊಳ್ಳುವ ಮೂಲಕ ಮನೋಜ್ ಬಗ್ಗೆ ಒಂದಷ್ಟು ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ ವರುಣ್. "ಮನೋಜ್ ನನ್ನ ಲೈಫ್‌ನಲ್ಲಿ ಕಳೆದ 26 ವರ್ಷಗಳಿಂದ ಇದ್ದಾರೆ. ಮನೋಜ್ ನನ್ನ ಎಲ್ಲವೂ ಆಗಿದ್ದ. ಮನೋಜ್‌ನನ್ನು ಕಳೆದುಕೊಂಡಿರುವ ನೋವನ್ನು ಹೇಳಲು ನನಗೆ ಪದಗಳು ಸಿಗುತ್ತಿಲ್ಲ. ಆದರೇ ಜನರಿಗೆ ಮನೋಜ್ ಬಗ್ಗೆ ತಿಳಿಸಬೇಕು ಯಾಕಂದ್ರೆ ಮನೋಜ್ ಒಬ್ಬ ಅದ್ಭುತ ಮತ್ತು ಮನುಷ್ಯತ್ವದಿಂದ, ತುಂಬಾ ಆಸಕ್ತಿದಾಯಕವಾಗಿ ಜೀವನ ನಡೆಸುತ್ತಿದ್ದ. ಮನೋಜ್ ಅಣ್ಣ ನನ್ನ ಜೀವನದಲ್ಲಿ ಇಷ್ಟು ವರ್ಷ ಇದ್ದಿದ್ದಕ್ಕೆ ನಾನು ಯಾವಾಗಲು ಚಿರಋಣಿಯಾಗಿ ಇರುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋವನ್ನು ನೋಡಿದರೆ ವರುಣ್ ಧವನ್ ಮನೋಜ್ ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿದೆ. ವರುಣ್ ಧವನ್ ಕಾರು ಚಾಲಕ ಮನೋಜ್ ಹೃದಯಾಘಾತದಿಂದ ಜನವರಿ 18ಕ್ಕೆ ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೇ ಕಾರು ಚಾಲಕ ಮನೋಜ್ ವರುಣ್ ಧವನ್ ಕಣ್ಣ ಮುಂದೆಯೇ ಸಾವನ್ನಪ್ಪಿದ್ದಾರೆ. ಜನವರಿ 18ರಂದು ವರುಣ್ ಧವನ್‌ರನ್ನು ಮನೋಜ್ ಶೂಟಿಂಗ್ ಜಾಗಕ್ಕೆ ಡ್ರಾಪ್ ಮಾಡಿದ್ದಾರೆ. ಆಡ್ ಶೂಟ್‌ನಲ್ಲಿ ವರುಣ್ ಧವನ್ ಭಾಗಿ ಆಗಬೇಕಿತ್ತು. ಡ್ರಾಪ್ ಮಾಡಿದ ಸಂದರ್ಭವೇ ಮನೋಜ್ ಅವರಿಗೆ ಎದೆ ನೋವು ಕಾಣಿಸಿಕೊಂಡು, ತೀವ್ರ ನೋವಿನಿಂದ ಒದ್ದಾಡಿದ್ದಾರೆ. ಇದನ್ನು ಗಮನಿಸಿದ ವರುಣ್ ಧವನ್ ಕೂಡಲೇ ಮನೋಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.

Actor Varun Dhawan Still Remembers the Car Driver.

ಆಡ್ ಶೂಟ್ ಎಲ್ಲವನ್ನು ನಿಲ್ಲಿಸಿ ಮನೋಜ್‌ ಜೊತೆ ವರುಣ್ ಧವನ್ ಕೂಡ ತೆರಳಿದ್ದರು. ಮುಂಬೈನ ಖಾಸಗಿ ಆಸ್ಪತ್ರೆಗೆ ಮನೋಜ್ ಅವರನ್ನು ಕರೆದುಕೊಂಡು ಹೋಗಲಾಗಿತ್ತು. ಆದರೇ ಆಸ್ಪತ್ರೆ ತಲುಪುವ ಮುನ್ನವೇ ಮನೋಜ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವರುಣ್ ಧವನ್ ಮೊದಲಿನಿಂದಲೂ ಮನೋಜ್ ಅವರ ಬಳಿ ಉತ್ತಮ ಒಡನಾಟವನ್ನು ಹೊಂದಿದ್ದರು. ಒಂದಲ್ಲ ಎರಡಲ್ಲಾ ಸುಮಾರು 26 ವರ್ಷಗಳಿಂದ ಮನೋಜ್ ವರುಣ್ ಧವನ್ ಅವರ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು.

Actor Varun Dhawan Still Remembers the Car Driver.

ಮನೋಜ್ ಸಾವಿನ ನಂತರ ಅವರ ಕುಟುಂಬದ ಎಲ್ಲಾ ಜವಾಬ್ದಾರಿಯನ್ನು ವರುಣ್ ಧವನ್ ತೆಗೆದುಕೊಂಡಿದ್ದಾರೆ. ಮನೋಜ್ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ, ಮನೆಯ ನಿರ್ವಹಣೆ ಜವಾಬ್ದಾರಿ ಇನ್ಮುಂದೆ ವರುಣ್ ಅವರದ್ದು ಎಂಬ ಬಗ್ಗೆ ವರದಿ ಆಗಿದೆ. ತಮ್ಮ ಜೊತೆ ಬಹಳ ಅನ್ಯೋನ್ಯವಾಗಿದ್ದ ಮನೋಜ್‌ ಅವರ ಕುಟುಂಬದ ಜವಾಬ್ದಾರಿ ಹೊತ್ತು ವರುಣ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ಮನೋಜ್ ಅಂತಿಮ ವಿಧಿ ವಿಧಾನದ ಎಲ್ಲಾ ಜವಾಬ್ದಾರಿಯನ್ನು ವರುಣ್ ಧವನ್ ಕುಟುಂಬವೇ ನೋಡಿಕೊಂಡಿತ್ತು.

More from Filmibeat

English summary
Actor Varun Dhawan is still remembers the car driver. His car driver Manoj passed away due to heart attack
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X