For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಬೆನ್ನು ಬಿದ್ದ ಕೊರೊನಾ: ಭೂಮಿ ಪಡ್ನೆಕರ್, ವಿಕ್ಕಿ ಕೌಶಲ್‌ಗೆ ಕೊರೊನಾ

  |

  ಬಾಲಿವುಡ್ ಇಂಡಸ್ಟ್ರಿಯಲ್ಲಿ ಕೊರೊನಾ ವೈರಸ್ ಸೋಂಕಿತ ಸೆಲೆಬ್ರಿಟಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ ಎರಡನೇ ಅಲೆಯಲ್ಲಿ ಬಿಟೌನ್ ಸೆಲೆಬ್ರಿಟಿಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದೆನಿಸುತ್ತಿದೆ.

  'ಉರಿ' ಖ್ಯಾತಿಯ ನಟ ವಿಕ್ಕಿ ಕೌಶಲ್‌ಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಕ್ಕಿ ಕೌಶಲ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ''ಮುನ್ನೆಚ್ಚರಿಕೆ ಕ್ರಮ ಹಾಗೂ ಎಲ್ಲಾ ರೀತಿಯ ಕಾಳಜಿ ವಹಿಸಿದರೂ ನನಗೆ ಪಾಸಿಟಿವ್ ಬಂದಿದೆ'' ಎಂದು ನಟ ಪೋಸ್ಟ್ ಹಾಕಿದ್ದಾರೆ.

  ನಟ ಅಕ್ಷಯ್ ಕುಮಾರ್‌ಗೆ ಕೊರೊನಾ ವೈರಸ್ ಪಾಸಿಟಿವ್ನಟ ಅಕ್ಷಯ್ ಕುಮಾರ್‌ಗೆ ಕೊರೊನಾ ವೈರಸ್ ಪಾಸಿಟಿವ್

  ''ಸದ್ಯ ನಾನು ಕ್ವಾರಂಟೈನ್ ಆಗಿದ್ದೇನೆ, ಕೊರೊನಾ ನಿಯಮಗಳನ್ನು ಪಾಲಿಸುತ್ತಿದ್ದು, ಅಗತ್ಯ ಚಿಕಿತ್ಸೆ ಪಡೆಯುತ್ತಿದ್ದೇನೆ. ದಯವಿಟ್ಟು ನನ್ನ ಸಂಪರ್ಕಕ್ಕೆ ಬಂದಿದ್ದವರು ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ'' ಎಂದು ವಿನಂತಿಸಿದ್ದಾರೆ.

  ಮತ್ತೊಂದೆಡೆ ನಟಿ ಭೂಮಿ ಪಡ್ನೆಕರ್ ಅವರಿಗೂ ಕೊರೊನಾ ಸೋಂಕು ದೃಢವಾಗಿದೆ. ವಿಕ್ಕಿ ಕೌಶಲ್ ಪೋಸ್ಟ್ ಮಾಡುವುದಕ್ಕೂ ಕೆಲವೇ ಗಂಟೆಗಳ ಹಿಂದೆ ಭೂಮಿ ಪಡ್ನೆಕರ್ ಸಹ ಕೋವಿಡ್‌ಗೆ ತುತ್ತಾಗಿರುವುದನ್ನು ಖಚಿತಪಡಿಸಿದ್ದರು.

  ಅಕ್ಷಯ್ ಕುಮಾರ್ ಬಳಿಕ 'ರಾಮ್ ಸೇತು' ಚಿತ್ರದ 45 ಸಿಬ್ಬಂದಿಗೆ ಕೊರೊನಾಅಕ್ಷಯ್ ಕುಮಾರ್ ಬಳಿಕ 'ರಾಮ್ ಸೇತು' ಚಿತ್ರದ 45 ಸಿಬ್ಬಂದಿಗೆ ಕೊರೊನಾ

  ''ಸೌಮ್ಯರೋಗ ಲಕ್ಷಣಗಳಿದ್ದು, ಕೂಡಲೇ ಕ್ವಾರಂಟೈನ್ ಆಗಿದ್ದೇನೆ'' ಎಂದು ನಟಿ ಭೂಮಿ ಪಡ್ನೆಕರ್ ಮಾಹಿತಿ ನೀಡಿದ್ದಾರೆ. ಅಂದ್ಹಾಗೆ, ವಿಕ್ಕಿ ಕೌಶಲ್ ಮತ್ತು ಭೂಮಿ ಪಡ್ನೆಕರ್ 'ಮಿಸ್ಟರ್ ಲೆಲೆ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

  Actor Vicky Kaushal and Bhumi Pednekar Test Positive For Covid 19

  ಇನ್ನು ಕೊರೊನಾ ಸೋಂಕಿಗೆ ಒಳಗಾಗಿದ್ದ ನಟ ಕಾರ್ತಿಕ್ ಆರ್ಯನ್‌ಗೆ ಕೊರೊನಾ ನೆಗೆಟಿವ್ ಬಂದಿದೆ. ಎರಡು ವಾರಗಳ ಹಿಂದೆ ಕಾರ್ತಿಕ್ ಆರ್ಯನ್ ಸೋಂಕಿಗೆ ಒಳಗಾಗಿರುವುದನ್ನು ತಿಳಿಸಿದ್ದರು. ಇದೀಗ, ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ.

  ದುನಿಯಾ ವಿಜಯ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ | Filmibeat Kannada

  ಇತ್ತೀಚಿಗಷ್ಟೆ ಬಾಲಿವುಡ್ ನಟ ಅಕ್ಷಯ್ ಕುಮಾರ್, ಹಿರಿಯ ನಟ ಗೋವಿಂದ, 'ದಂಗಲ್' ಖ್ಯಾತಿಯ ಫಾತಿಮಾ, ಆಲಿಯಾ ಭಟ್‌ಗೆ ಕೊರೊನಾ ತಗುಲಿದೆ.

  English summary
  'Mr Lele' Co-Stars Vicky Kaushal and Bhumi Pednekar Tests Positive For Covid 19. and Kartik Aaryan Testing COVID-19 Negative.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X