For Quick Alerts
  ALLOW NOTIFICATIONS  
  For Daily Alerts

  ಕತ್ರಿನಾ ಕೈಫ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ತಮಿಳಿನ ಸ್ಟಾರ್ ನಟ

  |

  ನಟಿ ಕತ್ರಿನಾ ಕೈಫ್ ಈ ಹಿಂದೆ ಕೆಲವು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಬಾಲಿವುಡ್‌ ನಲ್ಲಿ ಸ್ಥಾನ ಭದ್ರವಾದ ಬಳಿಕ ಅವರು ದಕ್ಷಿಣದತ್ತ ತಲೆ ಹಾಕಿಲ್ಲ.

  ಆದರೆ ಹೊಸ ಸಿನಿಮಾ ಒಂದರಲ್ಲಿ ನಟಿ ಕತ್ರಿನಾ ಕೈಫ್ ಜೊತೆಗೆ ದಕ್ಷಿಣದ ಖ್ಯಾತ ನಟನೊಬ್ಬ ತೆರೆ ಹಂಚಿಕೊಳ್ಳಲಿದ್ದಾರೆ.

  ನಟ ವಿಜಯ್ ಸೇತುಪತಿ ಹಿಂದಿ ಸಿನಿಮಾದಲ್ಲಿ ಕತ್ರಿನಾ ಕೈಫ್ ಜೊತೆಗೆ ನಟಿಸಲಿದ್ದಾರೆ. 'ಅಂಧಾದುನ್' ಎಂಬ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಶ್ರೀರಾಮ್ ರಾಘವ್ ಮುಂದಿನ ಸಿನಿಮಾದಲ್ಲಿ ಕತ್ರಿನಾ ಕೈಫ್ ಹಾಗೂ ವಿಜಯ್ ಸೇತುಪತಿ ಜೊತೆಯಾಗಿ ನಟಿಸುತ್ತಿದ್ದಾರೆ.

  ವಿಜಯ್ ಸೇತುಪತಿ ಈಗಾಗಲೇ 'ಮುಂಬೈಕರ್' ಸಿನಿಮಾದ ಮೂಲಕ ಬಾಲಿವುಡ್‌ ಗೆ ಪಾದಾರ್ಪಣೆ ಮಾಡಿದ್ದಾರೆ. ಈಗ ಕತ್ರಿನಾ ಕೈಫ್ ಜೊತೆಗೆ ಹೊಸ ಸಿನಿಮಾಕ್ಕೆ ಸಹಿ ಹಾಕಲಿದ್ದಾರೆ ನಟ ವಿಜಯ್ ಸೇತುಪತಿ.

  'ಅಂಧಾದುನ್' ಬಳಿಕ ವರುಣ್ ಧವನ್ ಜೊತೆಗೆ 'ಎಕ್ಕೀಸ್' ಸಿನಿಮಾ ನಿರ್ದೇಶಿಸಬೇಕಿತ್ತು ಶ್ರೀರಾಮ್ ರಾಘವ್. ಆದರೆ ಆ ಸಿನಿಮಾ ಅದೇಕೋ ಕೈಗೂಡಲಿಲ್ಲ. ಇದೀಗ ಕತ್ರಿನಾ ಕೈಫ್ ಹಾಗೂ ವಿಜಯ್ ಸೇತುಪತಿ ಜೊತೆಗೆ ಸಿನಿಮಾ ಮಾಡಲು ತಯಾರಾಗಿದ್ದಾರೆ.

  ಅಮೀರ್ ಖಾನ್ ಜೊತೆಗೆ 'ಲಾಲ್ ಸಿಂಗ್ ಛಡ್ಡಾ' ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ವಿಜಯ್ ಸೇತುಪತಿ ಆ ಸಿನಿಮಾದಲ್ಲಿ ನಟಿಸುತ್ತಿಲ್ಲ. ವಿಜಯ್ ಸೇತುಪತಿ ನಟಿಸಿರುವ 'ಮಾಸ್ಟರ್' ಸಿನಿಮಾ ಹಿಂದಿಗೆ ಡಬ್ ಆಗಿ ಬಿಡುಗಡೆ ಆಗಲಿದೆ.

  ನಟಿ ಕತ್ರಿನಾ ಕೈಫ್ ಪ್ರಸ್ತುತ ಅಕ್ಷಯ್ ಕುಮಾರ್ ಜೊತೆಗೆ ಸೂರ್ಯವಂಶಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಇನ್ನೂ ಕೆಲವು ಸಿನಿಮಾಗಳು ಕತ್ರೀನಾ ಕೈಫ್ ಕೈಯಲ್ಲಿದೆ.

  English summary
  Actor Vijay Sethupathi to act with Katrina Kaif in Hindi movie directing by Shriram Raghav.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X