Oscars 2024: ಆಸ್ಕರ್ ರೇಸ್‌ನಲ್ಲಿ ಐಪಿಎಸ್ ಅಧಿಕಾರಿ ಜೀವನ ಆಧಾರಿತ '12th ಫೇಲ್' ಸಿನಿಮಾ
ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ನಿಜ ಜೀವನದ ಕಥೆಯಾದ '12th ಫೇಲ್' ಸಿನಿಮಾ ಆಸ್ಕರ್ 2024 ಕ್ಕೆ ಸ್ವತಂತ್ರವಾಗಿ ನಾಮಿನೇಟ್ ಮಾಡಲಾಗಿದೆ ಎಂದು ನಟ ವಿಕ್ರಾಂತ್ ಮಾಸ್ಸಿ ಬಹಿರಂಗಪಡಿಸಿದ್ದಾರೆ. ನಿರ್ದೇಶನ ವಿಧು ವಿನೋದ್ ಚೋಪ್ರಾ '12th ಫೇಲ್'ಗೆ ಆಕ್ಷನ್ ಕಟ್ ಹೇಳಿದ್ದಾರೆ.
ವಿಧು ವಿನೋದ್ ಚೋಪ್ರಾ ನಿರ್ದೇಶನದ ''12th ಫೇಲ್" ಚಿತ್ರವನ್ನು ಸ್ವತಂತ್ರವಾಗಿ ಆಸ್ಕರ್‌ಗೆ ನಾಮಿನೇಟ್ ಮಾಡಲಾಗಿದೆ ಎಂದು ಬಾಲಿವುಡ್ ನಟ ವಿಕ್ರಾಂತ್ ಮಾಸ್ಸೆ ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ನಟ ಆಜ್‌ತಕ್ 2023 ರ ಈವೆಂಟ್‌ನಲ್ಲಿ ಮಾತನಾಡುತ್ತಿದ್ದರು.

ವಿಕ್ರಾಂತ್ ಮಾಸ್ಸೆ ನಟನೆಯ '12th ಫೇಲ್'
'12th ಫೇಲ್' 2023 ರ ಭಾರತೀಯ ಹಿಂದಿ ಭಾಷೆಯ ಬಯೋಪಿಕ್ ಆಗಿದೆ. ವಿಧು ವಿನೋದ್ ಚೋಪ್ರಾ ನಿರ್ಮಿಸಿ, ಬರೆದು ನಿರ್ದೇಶಿಸಿರಿವ ಈ ಸಿನಿಮಾ, ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಾಗಳು ತೀವ್ರ ಬಡತನವನ್ನು ಎದುರಿಸಿ ತಮ್ಮ ಕನಸನ್ನು ನನಸಾಗಿಸಿದ ಮನೋಜ್ ಕುಮಾರ್ ಶರ್ಮಾ ಅವರ ನಿಜ ಜೀವನ ಕಥೆಯನ್ನು ಆಧರಿಸಿದೆ. ಈ ಕಥೆ ಅನುರಾಗ್ ಪಾಠಕ್ ಅವರ 2019 ರ ಪುಸ್ತಕವನ್ನು ಆಧರಿಸಿದೆ.
'12th ಫೇಲ್' ಚಿತ್ರವು ಅಕ್ಟೋಬರ್ 27 ರಂದು ಚಿತ್ರಮಂದಿರಗಳಿಗೆ ಬಿಡುಗಡೆಯಾಗಿದೆ. ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿ ವಿಮರ್ಶಾತ್ಮಕ ಮೆಚ್ಚುಗೆ ಪಡೆಯಿತು. ಚಿತ್ರದಲ್ಲಿ ಮನೋಜ್ ಕುಮಾರ್ ಶರ್ಮಾ ಪಾತ್ರದಲ್ಲಿ ವಿಕ್ರಾಂತ್ ಮಾಸ್ಸಿ ನಟಿಸಿದ್ದಾರೆ. ಮೇಧಾ ಶಂಕರ್ ನಾಯಕಿಯಾಗಿ ನಟಿಸಿದ್ದಾರೆ. 20 ಕೋಟಿ ರೂಪಾಯಿ (US$2.5 ಮಿಲಿಯನ್) ಬಜೆಟ್‌ನಲ್ಲಿ ತಯಾರಾದ '12th ಫೇಲ್' ಚಿತ್ರವು 55 ಕೋಟಿ (US$6.9 ಮಿಲಿಯನ್) ರೂಪಾಯಿ ಗಳಿಸಿತು.
ನಟ ವಿಕ್ರಾಂತ್ ಮಾಸ್ಸಿ
ಪ್ರತಿಭಾನ್ವಿತ ನಟ ವಿಕ್ರಾಂತ್ ಮಾಸ್ಸಿ ಆರ್‌ಡಿ ನ್ಯಾಷನಲ್ ಕಾಲೇಜಿನಿಂದ ಶಿಕ್ಷಣವನ್ನು ಪಡೆದಿದ್ದು, ಧೂಮ್ ಮಚಾವೋ ಧೂಮ್ (2007) ಸಿನಿಮಾದೊಂದಿಗೆ ನಟನೆ ಪ್ರಾರಂಭಿಸಿದರು. ಇದಾದ ನಂತರ ಧರಮ್ ವೀರ್ (2008), ಬಾಲಿಕಾ ವಧು (2009-2010) ಮತ್ತು ಕುಬೂಲ್ ಹೈ (2013) ನಂತಹ ಕಿರುತೆರೆ ಧಾರಾವಾಹಿಗಳಲ್ಲಿ ಕೆಲಸ ಮಾಡಿದರು. ಲೂಟೆರಾ (2013), ದಿಲ್ ಧಡಕ್ನೆ ದೋ (2015) ಮತ್ತು ಹಾಫ್ ಗರ್ಲ್‌ಫ್ರೆಂಡ್ (2017) ನಲ್ಲಿ ಪೋಷಕ ಪಾತ್ರಗಳ ಮೂಲಕ ಖ್ಯಾತಿ ಗಳಿಸಿದ್ದಾರೆ. ಒಟಿಟಿ ವೇದಿಕೆಗಳಲ್ಲಿ ವಿಕ್ರಾಂತ್ ಮಾಸ್ಸಿ ಸಕತ್ ಫೇಮಸ್ ಆಕ್ಟರ್ ಆಗಿದ್ದಾರೆ.

ಆಸ್ಕರ್ 2024
ಎಮ್ಮಿ ಪ್ರಶಸ್ತಿ ವಿಜೇತ ಜಿಮ್ಮಿ ಕಿಮ್ಮೆಲ್ ಮುಂಬರುವ 2024 ರ ಆಸ್ಕರ್ ಸಮಾರಂಭದ ನಿರೂಪಕರಾಗಿದ್ದಾರೆ. ಮಾರ್ಚ್ 10, 2024 ರಂದು ಭಾನುವಾರ ಡಾಲ್ಬಿ ಥಿಯೇಟರ್‌ನಲ್ಲಿ 96 ನೇ ಆಸ್ಕರ್‌ಗಳು ನಡೆಯಲಿದೆ. ಈಗಾಗಲೇ ಭಾರತದಿಂದ ಮಲಯಾಳಂ ಸಿನಿಮಾ '2018' ಈಗಾಗಲೇ ಆಸ್ಕರ್‌ಗೆ ನಾಮನಿರ್ದೇಶನವಾಗಿದೆ.


Click it and Unblock the Notifications











