Vivek Oberoi: ಮಾಜಿ ಗರ್ಲ್‌ಫ್ರೆಂಡ್ ಐಶ್ವರ್ಯಾ ರೈಗೆ ಟಾಂಗ್ ಕೊಟ್ರಾ ನಟ ವಿವೇಕ್ ಒಬೆರಾಯ್!?
ಬಾಲಿವುಡ್‌ನಲ್ಲಿ ಪ್ರೇಮ, ಪ್ರೀತಿ, ವಿರಹದ ಘಟನೆಗಳು ನಡೆಯುತ್ತಲೆ ಇವೆ. ಜೋಡಿಗಳ ಮಧ್ಯೆ ಮತ್ತೊಬ್ಬರ ಪ್ರವೇಶದಿಂದಾಗಿ ಬ್ರೇಕ್ ಅಪ್‌ಗಳು ನಡೆಯುತ್ತಲೆ ಇವೆ. ಕೆಲವರು ಅದನ್ನು ಮುಕ್ತವಾಗಿ ಹೇಳಿಕೊಂಡರೆ ಮತ್ತೆ ಕೆಲವರು ಅವುಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ, ನಟ ವಿವೇಕ್ ಒಬೆರಾಯ್ ಇತ್ತೀಚೆಗೆ ತನ್ನ ಮಾಜಿ ಗರ್ಲ್‌ಫ್ರೆಂಡ್ ಐಶ್ವರ್ಯಾ ರೈ ಬಗ್ಗೆ ಪರೋಪ್ಷವಾಗಿ ಮಾತನಾಡಿದ್ದಾರೆ.
ನಟಿ ಐಶ್ವರ್ಯಾ ರೈ ಮತ್ತು ವಿವೇಕ್ ಒಬೆರಾಯ್ ಅವರ ರಿಲೇಷನ್‌ಶಿಪ್ ತುಂಬಾ ವೈರಲ್ ಆಗಿದ್ದ ವಿಷಯವೇ. ಆ ಸಂದರ್ಭದಲ್ಲಿ ಎಲ್ಲೇಲ್ಲೂ ಅವರದ್ದೇ ಸುದ್ದಿಯಿತ್ತು. ಆದರೆ, ಇಬ್ಬರ ನಡುವೆ ಬಂದಿದ್ದು ನಟ ಸಲ್ಮಾನ್ ಖಾನ್. ಇವರಿಂದಾಗಿ ಐಶ್ವರ್ಯಾ ರೈ ಮತ್ತು ವಿವೇಕ್ ಒಬೆರಾಯ್ ಬೇರ್ಪಟ್ಟಿದ್ದರು. ಇದಾದ ನಂತರ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಡೇಟಿಂಗ್ ಕೂಡ ತುಂಬಾ ದಿನ ನಡೆಯಲಿಲ್ಲ. ಇಬ್ಬರು 2005 ರಲ್ಲಿ ಬೇರ್ಪಟ್ಟರು.

ತಮ್ಮ ಹಳೆಯ ಸಂಬಂಧಗಳ ಬಗ್ಗೆ ಮಾತನಾಡಿದ ವಿವೇಕ್ ಒಬೆರಾಯ್!
ಬದುಕಿನಲ್ಲಿ ಈಗಾಗಲೇ ತುಂಬಾ ಮುಂದೆ ಸಾಗಿರುವ ನಟಿ ಐಶ್ವರ್ಯಾ ರೈ ತಮ್ಮ ಹಳೆಯ ಸಂಬಂಧಗಳ ಬಗ್ಗೆ ಮಾತನಾಡುವುದಿಲ್ಲ. ಎಲ್ಲವನ್ನು ಬಿಟ್ಟು ವೈಯಕ್ತಿಕ ಮತ್ತು ವೃತಿಪರವಾಗಿಯೂ ಮುಂದೆ ಹೋಗಿದ್ದಾರೆ. ಆದರೆ, ವಿವೇಕ್ ಒಬೆರಾಯ್ ಅನೇಕ ಸಂದರ್ಭಗಳಲ್ಲಿ ಈ ಬಗ್ಗೆ ಸೂಕ್ಷ್ಮವಾಗಿ ಟಾಂಗ್ ನೀಡಿದ್ದಾರೆ.
ಇತ್ತೀಚೆಗೆ, ಅನಸ್ ಬೌಖಾಶ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ನಟ ವಿವೇಕ್ ಒಬೆರಾಯ್, ತನ್ನ ಹಿಂದಿನ ಸಂಬಂಧಗಳನ್ನು ಚರ್ಚಿಸುವಾಗ ಹೆಸರು ಹೇಳದೇಯೇ ನಟಿಯಿಂದ ತಾನು ಬೇಕ್‌ಅಪ್ ಮಾಡಿಕೊಂಡ ಬಗ್ಗೆ ಮಾತನಾಡಿದ್ದಾರೆ,

ಐಶ್ವರ್ಯ ರೈ ಬಚ್ಚನ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ವಿವೇಕ್ ಒಬೆರಾಯ್
ಹಿಂದಿನ ಸಂಬಂಧಗಳಲ್ಲಿ ತಮ್ಮ ಮನಸ್ಸು ಒಡೆದ ಅನುಭವಗಳನ್ನು ಹಂಚಿಕೊಂಡಿರುವ ನಟ ವಿವೇಕ್ ಒಬೆರಾಯ್, ಯಾರದೇ ಹೆಸರನ್ನು ತೆಗೆದುಕೊಂಡಿಲ್ಲ. "ನಾನು ಎಲ್ಲ ಇರುವ ಅಥವಾ ಏನೂ ಇಲ್ಲದ ವ್ಯಕ್ತಿ. ನಾನು ಒಬ್ಬರನ್ನು ಪ್ರೀತಿಸಿದರೇ ಅವರನ್ನು ನನ್ನ ಮನಸಾರೆ ಪ್ರೀತಿಸುತ್ತೇನೆ. ಆದರೆ ನನ್ನಂತಹ ಜನರಿಗೆ ಸಿಗುವುದು ನೋವು ಮಾತ್ರ. ಆದರೆ ನನಗೆ ನೋವಾದರೆ ಅದರಿಂದ ಹೊಬರುವುದು ತುಂಬಾ ಕಷ್ಟ" ಎಂದು ಹೇಳಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದಂತೆ, "ಎಲ್ಲವೂ ಆರಂಭದಲ್ಲಿ ಅದ್ಭುತವಾಗಿತ್ತು. ನಂತರ ಮಧ್ಯೆ ಅಹಂಕಾರ (ಈಗೋ) ಅಡ್ಡ ಬರುತ್ತದೆ. ನಾನು ಎಂದಿಗೂ ಅಪ್ರಾಮಾಣಿಕನಾಗಿರಲಿಲ್ಲ. ಪ್ರತಿಯೊಂದು ಗಂಭೀರ ಸಂಬಂಧವು ನಿಮಗೆ ಪಾಠ ಕಲಿಸುತ್ತದೆ. ಅದು ನಿಮಗೆ ಏನನ್ನಾದರೂ ಕಲಿಸಿಯೇ ಬಿಡುವುದು. ಕೆಟ್ಟ ಬೇಕ್‌ಅಪ್‌ಗಳು, ನಿಜವಾಗಿಯೂ ವಿಷಕಾರಿ ಸಂಬಂಧಗಳು ಹಲವು ಮಾದರಿಗಳನ್ನು ನಿಮಗೆ ಕಲಿಸುತ್ತವೆ. ನೀವು ಯಾವುದರಿಂದ ದೂರವಿರಬೇಕೆಂದು ಅವು ನಿಮಗೆ ಕಲಿಸುತ್ತವೆ" ಎಂದು ತಮ್ಮ ಮನದ ನೋವು ಹಂಚಿಕೊಂಡಿದ್ದಾರೆ.
ಇನ್ನು, ನಟ ವಿವೇಕ್ ಒಬೆರಾಯ್ ಅವರು ಹಲವು ವರ್ಷಗಳಿಂದ ತೆಲುಗು, ತಮಿಳು, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಪ್ರಮುಖ ಖಳನಾಯಕನಾಗಿ ಮಿಂಚುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆಗೆ ರುಸ್ತುಂ ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಮುಂದೆ ಅಮೆಜಾನ್ ಪ್ರೈಮ್ ವಿಡಿಯೋ ಸರಣಿ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಇಂಡಿಯನ್ ಪೋಲೀಸ್ ಫೋರ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











