'ರಾಮಾಯಣ' ಸೆಟ್‌ನಲ್ಲಿ ಹಾಲಿವುಡ್ ಸ್ಟಂಟ್ ಮಾಸ್ಟರ್; ರಾವಣನಾಗಿ ಯಶ್ ಖದರ್ ಹೇಗಿದೆ ನೋಡಿ

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಸದ್ಯ ಚಿತ್ರದ ಮೇಕಿಂಗ್ ಸ್ಟಿಲ್ ಹೊರ ಬಿದ್ದಿದೆ. ಮ್ಯಾಡ್ ಮ್ಯಾಕ್ಸ್ ಸ್ಟಂಟ್ ನಿರ್ದೇಶಕ ಗೈ ನೋರಿಸ್ (guy Norris) ನಿರ್ದೇಶನದಲ್ಲಿ ಯಶ್ ಆಕ್ಷನ್ ಸನ್ನಿವೇಶಗಳಲ್ಲಿ ನಟಿಸುತ್ತಿದ್ದಾರೆ.

ಮುಂಬೈನಲ್ಲಿ ಬೃಹತ್ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದೆ. ಆರಂಭದಲ್ಲಿ ಆಕ್ಷನ್ ಸನ್ನಿವೇಶಗಳ ಚಿತ್ರೀಕರಣ ನಡೀತಿದೆ. ಹಾಲಿವುಡ್‌ನ‌ 'ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್' ಮತ್ತು 'ದಿ ಸುಸೈಡ್ ಸ್ಕ್ವಾಡ್‌' ಚಿತ್ರಗಳಲ್ಲಿ ಸ್ಟಂಟ್ ಡೈರೆಕ್ಷನ್ ಮಾಡಿರೋ ಗೈ ನೋರಿಸ್ 'ರಾಮಾಯಣ' ಚಿತ್ರಕ್ಕೆ‌ ಯಾವ ರೀತಿ ಸ್ಟಂಟ್ಸ್ ಡೈರೆಕ್ಷನ್ ಮಾಡ್ತಾರೆ ಅನ್ನೋದೇ ಸದ್ಯದ ‌ಕುತೂಹಲ. ಗಡ್ಡ, ಮೀಸೆ ಬಿಟ್ಟು ಖಡಕ್ ಲುಕ್‌ನಲ್ಲೇ ಯಶ್ ನಟಿಸುತ್ತಿದ್ದಾರೆ.

Actor Yash spotted with Hollywood stunt legend Guy Norris on the sets of Ramayana

ನಿಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ಸಹ 'ರಾಮಾಯಣ' ಚಿತ್ರಕ್ಕೆ ಹಣ ಹೂಡಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಇಂದ್ರದೇವ ಹಾಗೂ ವಿದ್ಯುತ್ಜಿಹ್ವ ಜೊತೆಗಿನ ರಾವಣನ ಯುದ್ಧದ ಸನ್ನಿವೇಶಗಳನ್ನು ಸದ್ಯ ಸೆರೆ ಹಿಡಿಯುತ್ತಿದ್ದಾರೆ ಎನ್ನಲಾಗ್ತಿದೆ. ಇಂದ್ರದೇವನಾಗಿ ಕುನಾಲ್ ಕಪೂರ್ ಹಾಗೂ ವಿದ್ಯುತ್ಜಿಹ್ವನಾಗಿ ವಿವೇಕ್ ಒಬೆರಾಯ್ ನಟಿಸುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

ಬಹಳ ದೊಡ್ಡಮಟ್ಟದಲ್ಲೇ ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಕಂಪೋಸ್ ಮಾಡಲಾಗುತ್ತಿದೆ. ಇನ್ನು ಜಗತಿಕ ಮಟ್ಟದಲ್ಲಿ ರಾವಣನ ಪಾತ್ರವನ್ನು ತಲುಪಿಸಲು ಯಶ್ ತಯಾರಿ ನಡೆಸಿದ್ದಾರೆ. 60ರಿಂದ 70 ದಿನಗಳ ಕಾಲ ರಾಮಾಯಣ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಕೆಲಸ ಮಾಡುತ್ತಿದ್ದಾರೆ. ನಟನೆಯ ಜೊತೆ ಜೊತೆಗೆ ಪ್ರತಿ ಹಂತದಲ್ಲಿ ಚಿತ್ರತಂಡದ ಜೊತೆ ನಿಂತಿದ್ದಾರೆ.

ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತಾಮಾತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿರುವುದು ಗೊತ್ತೇಯಿದೆ. ಎರಡು ಭಾಗಗಳಾಗಿ ರಾಮಾಯಣ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಮೊದಲ ಭಾಗದಲ್ಲಿ ಸೀತಾಪರಣದವರೆಗೆ ಕಥೆ ಹೇಳುತ್ತಿದ್ದಾರೆ. ಹಾಗಾಗಿ ರಣ್‌ಬೀರ್ ಕಪೂರ್ ಹಾಗೂ ಯಶ್ ನಡುವಿನ ಸನ್ನಿವೇಶಗಳು ಕಡಿಮೆ ಇರಲಿದೆ.

'ರಾಮಾಯಣ' ಚಿತ್ರದ ಮೊದಲ ಭಾಗ ಮುಂದಿನ ವರ್ಷ ದೀಪಾವಳಿಗೆ ತೆರೆಗೆ ಬಂದರೆ ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ. ನಿತೇಶ್ ತಿವಾರಿ ಹಾಗೂ ಶ್ರೀಧರ್ ರಾಘವನ್ ಚಿತ್ರಕಥೆ ಬರೆದಿದ್ದಾರೆ. ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವ ಸಾಧ್ಯತೆಯಿದೆ.

ಲಕ್ಷ್ಮಣನಾಗಿ ರವಿ ದುಬೆ, ಶೂರ್ಪನಖಿಯಾಗಿ ರಕುಲ್ ಪ್ರೀತ್‌ಸಿಂಗ್, ಮಂಡೋದರಿಯಾಗಿ ಕಾಜಲ್ ಅಗರ್‌ವಾಲ್, ದಶರಥನಾಗಿ ಅರುಣ್ ಗೋವಿಲ್, ಕೈಕೇಯಿ ಆಗಿ ಲಾರಾ ದತ್ತಾ, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ. ಅಂದಾಜು 500 -600 ಕೋಟಿ ಬಜೆಟ್‌ನಲ್ಲಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಹಿಂದಿಯಲ್ಲಿ ಸಿನಿಮಾ ನಿರ್ಮಾಣ ಮಾಡಿ ದೇಶವ ವಿದೇಶದ ಭಾಷೆಗೆ ಡಬ್ ಮಾಡಲಾಗುತ್ತಿದೆ. ಆದರೆ ಡಬ್ಬಿಂಗ್ ಎಂದು ಗೊತ್ತಾಗದಂತೆ ಆಯಾ ಭಾಷೆಗೆ ತಕ್ಕಂತೆ ಕಲಾವಿದರ ಲಿಪ್ ಸಿಂಕ್ ಆಗುವಂತೆ ನೋಡಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದ್ದಾರೆ.

'ಟಾಕ್ಸಿಕ್' ಸಿನಿಮಾ ನಿರ್ಮಿಸಿ ನಟಿಸುವುದರ ಜೊತೆ ಜೊತೆಗೆ ಯಶ್ 'ರಾಮಾಯಣ' ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. 'ಟಾಕ್ಸಿಕ್' ಸಿನಿಮಾ ಮುಂದಿನ ವರ್ಷ ಮಾರ್ಚ್ 19ಕ್ಕೆ ತೆರೆಗೆ ಬರಲಿದೆ. ಅದೇ ವರ್ಷದ ಕೊನೆಗೆ 'ರಾಮಾಯಣ' ಚಿತ್ರದಲ್ಲಿ ರಾವಣನಾಗಿ ಅಬ್ಬರಿಸಲಿದ್ದಾರೆ.

More from Filmibeat

English summary
Yash and MadMax Stunt Director Guy Norris Shooting a Massive Action Sequences for Ramayana
Read more about: yash hollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X