twitter
    For Quick Alerts
    ALLOW NOTIFICATIONS  
    For Daily Alerts

    65 ವರ್ಷ ದಾಟಿದ ನಟರು ಸಿನಿಮಾದಲ್ಲಿ ನಟಿಸುವಂತಿಲ್ಲ: ಸರ್ಕಾರದ ನಿಯಮ ಪ್ರಶ್ನಿಸಿದ ಹೈಕೋರ್ಟ್

    |

    ಸಿನಿಮಾಗಳಲ್ಲಿ 65 ವರ್ಷ ವಯಸ್ಸು ದಾಟಿದ ಕಲಾವಿದರು ಮತ್ತು ಸಿಬ್ಬಂದಿಯನ್ನು ಬಳಸಿಕೊಳ್ಳುವಂತಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ನಿರ್ಬಂಧ ವಿಧಿಸಿದೆ. ಇದಕ್ಕೆ ಕಾರಣ ವಿವರಿಸುವಂತೆ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ.

    Recommended Video

    Danish Sait ಬಡಿಸಲಿರುವ French Biryani ಹಿಂದಿನ ಕಥೆ ಕೇಳಿ | Filmibeat Kannada

    ಕೊರೊನಾ ವೈರಸ್ ಸಂಕಷ್ಟದ ನಡುವೆ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲು ವಿವಿಧ ನಿಬಂಧನೆಗಳ ಸಹಿತ ಸರ್ಕಾರ ಅವಕಾಶ ನೀಡಿದೆ. ಆದರೆ ಚಿತ್ರೀಕರಣದಲ್ಲಿ 65 ವರ್ಷದ ಪ್ರಾಯ ದಾಟಿದವರನ್ನು ನಟನೆಯಲ್ಲಾಗಲೀ, ತೆರೆಯ ಹಿಂದಿನ ಚಟುವಟಿಕೆಗಳಿಗಾಗಲೀ ಬಳಸಿಕೊಳ್ಳುವಂತಿಲ್ಲ ಎಂದು ನಿಯಮ ವಿಧಿಸಿದೆ. ಇದನ್ನು ನಟ ಪ್ರಮೋದ್ ಪಾಂಡೆ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿ ಮಂಗಳವಾರ ವಿಚಾರಣೆಗೆ ಬಂದಿತ್ತು. ಮುಂದೆ ಓದಿ...

    ನಟ ಪ್ರಮೋದ್ ಪಾಂಡೆ ಅರ್ಜಿ

    ನಟ ಪ್ರಮೋದ್ ಪಾಂಡೆ ಅರ್ಜಿ

    ಸರ್ಕಾರದ ಆದೇಶದ ಪ್ರಕಾರ 65 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟವರು ಮತ್ತು 10 ವರ್ಷ ಕೆಳಗಿನವರನ್ನು ಬಳಸಿಕೊಳ್ಳುವಂತಿಲ್ಲ. ಕೊರೊನಾ ವೈರಸ್ ಸೋಂಕು ಈ ವಯಸ್ಸಿನವರಿಗೆ ಅಪಾಯಕಾರಿಯಾದ ಕಾರಣ ಈ ನಿರ್ಬಂಧ ವಿಧಿಸಲಾಗಿದೆ. ಆದರೆ ಸಿನಿಮಾ ಚಿತ್ರೀಕರಣವಿಲ್ಲದೆ ಹಿರಿಯ ನಟರು ಹಾಗೂ ಇತರೆ ಸಿಬ್ಬಂದಿ ಕೆಲವು ತಿಂಗಳಿನಿಂದ ಕೆಲಸವಿಲ್ಲದೆ ತೀವ್ರ ಸಂಕಷ್ಟದಲ್ಲಿದ್ದಾರೆ. ಈಗಲೂ ಅವರಿಗೆ ಅವಕಾಶ ನೀಡದೆ ಇರುವುದು ಸರಿಯಲ್ಲ ಎಂದು ಪ್ರಮೋದ್ ಪಾಂಡೆ ಆಕ್ಷೇಪಿಸಿದ್ದಾರೆ.

    ಬಿಡುಗಡೆಗೂ ಮುನ್ನ ಮತ್ತೊಂದು ದಾಖಲೆ ಬರೆದ 'ಕೆಜಿಎಫ್ ಚಾಪ್ಟರ್ 2'ಬಿಡುಗಡೆಗೂ ಮುನ್ನ ಮತ್ತೊಂದು ದಾಖಲೆ ಬರೆದ 'ಕೆಜಿಎಫ್ ಚಾಪ್ಟರ್ 2'

    ನಿಯಮದ ಹಿಂದಿನ ಆಧಾರವೇನು?

    ನಿಯಮದ ಹಿಂದಿನ ಆಧಾರವೇನು?

    ಇದನ್ನು ಪರಿಗಣಿಸಿರುವ ಹೈಕೋರ್ಟ್, ಶುಕ್ರವಾರದ ವೇಳೆಗೆ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ. ಹಿರಿಯ ನಟರು ಮತ್ತು ತಂತ್ರಜ್ಞರಿಗೆ ಕೆಲಸ ಮಾಡಲು ಅವಕಾಶ ನೀಡದೆ ಇದ್ದರೆ ಅವರು ಹೇಗೆ ತಾನೆ ಸಂಪಾದಿಸಲು ಮತ್ತು ಗೌರವಾನ್ವಿತವಾಗಿ ಬದುಕಲು ಸಾಧ್ಯ ಎಂಬುದನ್ನು ವಿವರಿಸುವಂತೆ ಆದೇಶಿಸಿದೆ. ಹಾಗೆಯೇ, ಈ ಆದೇಶ ನೀಡಲು ಯಾವ ಅಂಕಿಅಂಶಗಳನ್ನು ಪರಿಗಣಿಸಲಾಗಿದೆ ಎಂಬ ಮಾಹಿತಿಯನ್ನೂ ಕೇಳಿದೆ.

    ನಮ್ಮಂಥಹವರು ಸಾಯಬೇಕೇ?

    ನಮ್ಮಂಥಹವರು ಸಾಯಬೇಕೇ?

    ತಮ್ಮಂತಹ ನಟನರಿಗೆ ಪ್ರಸ್ತುತ ಯಾವುದೇ ಕೆಲಸವಿಲ್ಲದಂತಾಗಿದೆ ಎಂದು ಪ್ರಮೋದ್ ಪಾಂಡೆ ಹೇಳಿದ್ದಾರೆ. 'ನನ್ನ ಸಂಪೂರ್ಣ ಜೀವನ ಕಷ್ಟಪಟ್ಟಿದ್ದೇನೆ. ಸಿನಿಮಾಗಳಿದ್ದಾಗ ತಿಂಗಳಿಗೆ ಸುಮಾರು 40 ಸಾವಿರ ಸಂಪಾದಿಸುತ್ತಿದ್ದೆ. ಆದರೆ ಈಗ ಕೆಲಸವಿಲ್ಲ. ಜತೆಗೆ ಈಗ ಆಡಿಷನ್‌ಗೆ ಕರೆಗಳೂ ಕೂಡ ಬರುತ್ತಿಲ್ಲ. ಚಿತ್ರೀಕರಣದಲ್ಲಿ ಚಿಕ್ಕ ಮಕ್ಕಳು ಇರುವಂತಿಲ್ಲ ಎಂಬ ನಿಯಮ ಅರ್ಥವಾಗುತ್ತದೆ. ಅವರನ್ನು ನೋಡಿಕೊಳ್ಳಲು ಅವರ ಪೋಷಕರು ಇರುತ್ತಾರೆ. ಆದರೆ 65 ವರ್ಷ ಮೇಲ್ಪಟ್ಟ ನಟರು ಮತ್ತು ಸಿಬ್ಬಂದಿ ಏನು ಮಾಡುವುದು? ಕೆಲಸವಿಲ್ಲದೆ ಸಾಯುತ್ತಾರೆ' ಎಂದು ಹೇಳಿದ್ದಾರೆ.

    ಬಾಲಿವುಡ್ ಗೆ ಗುಡ್ ಬೈ ಹೇಳಿದ ಮೂವರು ಖ್ಯಾತ ನಿರ್ದೇಶಕರುಬಾಲಿವುಡ್ ಗೆ ಗುಡ್ ಬೈ ಹೇಳಿದ ಮೂವರು ಖ್ಯಾತ ನಿರ್ದೇಶಕರು

    ವಿಡಿಯೋ ಆಯ್ಕೆಗೆ ಆಕ್ಷೇಪ

    ವಿಡಿಯೋ ಆಯ್ಕೆಗೆ ಆಕ್ಷೇಪ

    ವಿಡಿಯೋ ಆಪ್‌ಗಳ ಮೂಲಕವೇ ಸಿನಿಮಾಗಳಿಗೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಮಹಾರಾಷ್ಟ್ರ ಸರ್ಕಾರದ ನಿಯಮವನ್ನು ಕೂಡ ಕೋರ್ಟ್ ಪ್ರಶ್ನಿಸಿದೆ. ಯಾವುದೇ ನಿರ್ದೇಶಕರು ಅಥವಾ ನಿರ್ಮಾಪಕರು ಸಣ್ಣ ಪುಟ್ಟ ಪಾತ್ರಗಳಿಗೆ ಈ ರೀತಿ ಆಯ್ಕೆ ಮಾಡಲು ಒಪ್ಪುವುದಿಲ್ಲ. ಹೀಗಾಗಿ ಅವರು ಸ್ಟುಡಿಯೋಗಳಿಗೆ ಹೋಗದೆ ಬೇರೆ ಆಯ್ಕೆಯಿಲ್ಲ ಎಂದು ಕೋರ್ಟ್ ಹೇಳಿದೆ.

    ನಿರ್ದೇಶಕ ಅನುರಾಗ್ ಕಶ್ಯಪ್ 'ಮಿನಿ ಮಹೇಶ್ ಭಟ್' ಎಂದು ಟೀಕಿಸಿದ ಕಂಗನಾ ರಣಾವತ್ನಿರ್ದೇಶಕ ಅನುರಾಗ್ ಕಶ್ಯಪ್ 'ಮಿನಿ ಮಹೇಶ್ ಭಟ್' ಎಂದು ಟೀಕಿಸಿದ ಕಂಗನಾ ರಣಾವತ್

    English summary
    Bombay High Court has questioned the rules to not allowing actors and crew members above 65 years in films by Maharashtra government.
    Wednesday, July 22, 2020, 18:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X