twitter
    For Quick Alerts
    ALLOW NOTIFICATIONS  
    For Daily Alerts

    ಡ್ರಗ್ಸ್ ಪ್ರಕರಣ: NCB ವಿಚಾರಣೆಯಲ್ಲಿ ದೀಪಿಕಾ, ಶ್ರದ್ಧಾ, ಸಾರಾ ಹೇಳಿದ್ದೇನು?

    |

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಸ್ಟಾರ್ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಎನ್ ಸಿ ಬಿ ವಿಚಾರಣೆ ಎದುರಿಸಿದ್ದಾರೆ. ವಿಚಾರಣೆ ವೇಳೆ ಈ ನಾಲ್ವರು ನಟಿಯರು ಧೂಮಪಾನ ಮಾಡುವುದಿಲ್ಲ ಎಂದು ಹೇಳಿದ್ದಾರಂತೆ.

    ನಟಿಯರು ವಾಟ್ಸಪ್ ಚಾಟ್ ನಲ್ಲಿ 'ಡೂಬ್' ಎಂಬ ಪದವನ್ನು ಬಳಸಿದ್ದರು. ಡೂಬ್ ಎಂದರೆ ಗಾಂಜಾ ತುಂಬಿರುವ ಸಿಗರೇಟ್. ಈ ನಾಲ್ಕು ಜನ ನಟಿಯರು ಚಾಟ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರಂತೆ. ಆದರೆ ಸಿಗರೇಟ್ ಸೇದುವುದಿಲ್ಲ ಎಂದು ಎನ್ ಸಿ ಬಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

    ನಟಿಯರ ಮೊಬೈಲ್ ಎನ್‌ಸಿಬಿ ಕೈಯಲ್ಲಿ, ಹೆಚ್ಚಾದ ಆತಂಕನಟಿಯರ ಮೊಬೈಲ್ ಎನ್‌ಸಿಬಿ ಕೈಯಲ್ಲಿ, ಹೆಚ್ಚಾದ ಆತಂಕ

    ವಿಚಾರಣೆ ವೇಳೆ ಎನ್ ಸಿ ಬಿ ಅಧಿಕಾರಿಗಳು ಸುಶಾಂತ್ ಸಿಂಗ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅಧಿಕಾರಿಗಳ ಪ್ರಶ್ನೆಗೆ ಈ ನಾಲ್ಕು ನಟಿಯರು ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರಂತೆ. ಸುಶಾಂತ್ ಸಿಂಗ್ ಡ್ರಗ್ಸ್ ಸೇವನೆಯ ಬಗ್ಗೆ ಎನ್ ಸಿ ಬಿ ಕೇಳಿದ ಪ್ರಶ್ನೆಗೆ, ಸುಶಾಂತ್ ಸಿಂಗ್ ಡ್ರಗ್ಸ್ ಸೇವನೆಯ ಬಗ್ಗೆ ಗೊತ್ತಿಲ್ಲ ಎನ್ನುವ ಉತ್ತರ ನೀಡಿದ್ದಾರಂತೆ.

    Actors Deepika, Sara Ali Khan, Rakul Singh and Shraddha Kapoor Says we Dont Even Smoke: NCB

    ಇನ್ನು ಎನ್ ಸಿ ಬಿ ಅಧಿಕಾರಿಗಳು ದೀಪಿಕಾ, ಸಾರಾ, ಶ್ರದ್ಧಾ ಮತ್ತು ರಕುಲ್ ಪ್ರೀತ್ ಸಿಂಗ್ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡಿರುವ ಮೊಬೈಲ್‌ಗಳನ್ನು ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಮೊಬೈಲ್‌ನಲ್ಲಿರುವ ಎಲ್ಲಾ ಡಾಟಾಗಳನ್ನು ಮತ್ತು ಡಿಲೀಟ್ ಆಗಿರುವ ಮಾಹಿತಿಯನ್ನು ಸಹ ಹೊರಗೆ ತೆಗೆಯಲಾಗುತ್ತದೆ.

    Recommended Video

    ಅನುಶ್ರೀ ಹುಡುಕಿಕೊಂಡು ಮಂಗಳೂರಿನಿಂದ ಬೆಂಗಳೂರಿಗೆ ಬಂದ CCB ಪೊಲೀಸ್ | Filmibeat Kannada

    ದೀಪಿಕಾ ಪಡುಕೋಣೆಯನ್ನು ಸುಮಾರು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಎನ್‌ಸಿಬಿ ಅಧಿಕಾರಿಗಳು. ಇನ್ನು ಪ್ರಕರಣದಲ್ಲಿ ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದ ಕ್ಷಿತಿಜ್ ರವಿ ಪ್ರಸಾದ್ ಅವರನ್ನು ಬಂದಿಸಲಾಗಿದ್ದು, ಅಕ್ಟೋಬರ್ 3ರ ವರೆಗೆ ಎನ್ ಸಿ ಬಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈಗಾಗಲೇ ರಿಯಾ ಚಕ್ರವರ್ತಿ ಸೇರಿದಂತೆ 20 ಜನರನ್ನು ಬಂಧಿಸಲಾಗಿದೆ.

    English summary
    Actress Deepika Padukone, Sara Ali Khan, Rakul Singh and Shraddha Kapoor Says we Don't Even Smoke, NCB official reveals.
    Monday, September 28, 2020, 15:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X