For Quick Alerts
  ALLOW NOTIFICATIONS  
  For Daily Alerts

  ಕೋವಿಡ್: ನಟಿ ಅಭಿಲಾಷಾ ಪಾಟೀಲ್, ಶ್ರೀಪದ ನಿಧನ

  |

  ಕೋವಿಡ್‌ನಿಂದಾಗಿ ಸಾಲು-ಸಾಲು ಸೆಲೆಬ್ರಿಟಿಗಳು ನಿಧನ ಹೊಂದುತ್ತಿದ್ದಾರೆ. ಪ್ರತಿದಿನವೂ ಚಿತ್ರರಂಗಕ್ಕೆ ಸೂತಕದ ದಿನವಾಗಿ ಪರಿಣಮಿಸಿದೆ.

  ನಿನ್ನೆ ಬಾಲಿವುಡ್‌ನ ಯುವ ಸಂಕಲನಕಾರ ನಿಧನ ಹೊಂದಿದ್ದರು, ಅದರ ಬೆನ್ನಲ್ಲೇ ಇಂದು ಬಾಲಿವುಡ್‌ನ ಇಬ್ಬರು ನಟಿಯರು ನಿಧನ ಹೊಂದಿದ್ದಾರೆ.

  ಹಲವು ಮರಾಠಿ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಅಭಿಲಾಷಾ ಪಾಟೀಲ್ ಕೋವಿಡ್‌ನಿಂದಾಗಿ ನಿಧನ ಹೊಂದಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು.

  ಹಿಂದಿ ಹಾಗೂ ಭೋಜಪುರಿ ಸಿನಿಮಾಗಳಲ್ಲಿ ಬಹಳ ವರ್ಷಗಳಿಂದಲೂ ನಟಿಸುತ್ತಿದ್ದ ನಟಿ ಶ್ರೀಪದ ಅವರು ಸಹ ಕೋವಿಡ್‌ನಿಂದಾಗಿ ನಿಧನ ಹೊಂದಿದ್ದಾರೆ. ಧರ್ಮೇಂದ್ರ, ವಿನೋದ್ ಖನ್ನ ಸೇರಿದಂತೆ ಹಲವಾರು ಸ್ಟಾರ್‌ ನಟರೊಂದಿಗೆ ಶ್ರೀಪದ ನಟಿಸಿದ್ದರು. ಹಿಂದಿ ಮಾತ್ರವೇ ಅಲ್ಲದೆ ಭೋಜ್‌ಪುರಿ ಹಾಗೂ ಕೆಲವು ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿದ್ದರು.

  ನಟಿ ಅಭಿಲಾಷಾ ಅವರು ಕೆಲವು ದಿನಗಳ ಹಿಂದಷ್ಟೆ ಸಿನಿಮಾ ಒಂದರ ಚಿತ್ರೀಕರಣಕ್ಕಾಗಿ ಬನಾರಸ್‌ಗೆ ತೆರಳಿದ್ದರು. ಅಲ್ಲಿ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಮುಂಬೈಗೆ ವಾಪಸ್ಸಾದ ಬಳಿಕ ಪರೀಕ್ಷೆಗೊಳಗಾದಾಗ ಕೋವಿಡ್ ಇರುವುದು ಗೊತ್ತಾಗಿದೆ.

  ಕೆಲವು ದಿನಗಳ ಬಳಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಭಿಲಾಷಾ ಅವರಿಗೆ ಕೋವಿಡ್ ನೆಗೆಟಿವ್ ಆಗಿತ್ತಾದರೂ ಆ ವೇಳೆಗಾಗಲೆ ಕೋವಿಡ್‌ನಿಂದ ಅವರಿಗೆ ಅಂಗಾಂಗ ವೈಫಲ್ಯ ಉಂಟಾಗಿತ್ತು ಎಂದು ಅವರ ಸಹ ಸಂಜಯ್ ಕುಲಕರ್ಣಿ ತಿಳಿಸಿದ್ದಾರೆ.

  ಅಭಿಲಾಷಾ ನಿಧನ ಹಿಂದಿ ಹಾಗೂ ಮರಾಠಿ ಸಿನಿಮಾರಂಗಕ್ಕೆ ನಷ್ಟವೆಂದಿದ್ದಾರೆ ಸಂಜಯ್. ಅಭಿಲಾಷಾ ಅವರು ಸುಶಾಂತ್ ಸಿಂಗ್ ರಜಪೂತ್ ನಟಿಸಿದ್ದ 'ಚಿಚೋರೆ', 'ಬದ್ರಿನಾಥ್‌ ಕಿ ದುಲ್ಹನಿಯಾ', ಅಕ್ಷಯ್ ಕುಮಾರ್ ನಟಿಸಿದ್ದ 'ಗುಡ್‌ ನ್ಯೂಜ್‌' ಸೇರಿ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

  ನಟನೆ ಮಾತ್ರವಲ್ಲ ಕೃಷಿ ಮಾಡಿ ಇತರರಿಗೆ ಮಾದರಿಯಾದ ನಟಿ ಜೂಹಿ ಚಾವ್ಲಾ | Filmibeat Kannada

  ಹಿಂದಿ ಮಾತ್ರವಲ್ಲದೆ ಮರಾಠಿ ಹಿಟ್ ಸಿನಿಮಾಗಳಾದ 'ತೇ ಆಥಾ ದಿವಸ್', 'ಬೈಕೋ ದೇತಾ ಕಾ ಬೈಕೋ', 'ಪಿಪ್ಸಿ', 'ಪ್ರವಾಸ್', 'ತುಜಾ ಮಜಾ ಅರೇಂಜ್ ಮ್ಯಾರೇಜ್' ಸೇರಿ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

  English summary
  Actress Abhilasha Patil (47) and senior actress Shripadha died of Coronavirus. Abhilasha acted in Hindi and Marathi movies. Shripadha acted in Hindi, Bhojpuri and some south movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X