"ಮಾಂಸ ತಿಂತೀರಾ ಹಾಗಿದ್ರೆ ಕಾಡಿಗೆ ಹೋಗಿ, ಮನೇಲಿ ಕೂತ್ಕೊಂಡು ತಿನ್ನೋದಲ್ಲ"; ನಟಿ ಆಕ್ರೋಶ

ಮಾಂಸಾಹಾರ ಒಳ್ಳೆಯದಾ? ಸಸ್ಯಹಾರ ಒಳ್ಳೆಯದಾ? ಮಾಂಸಾಹಾರ ತಿನ್ನಬೇಕೋ ಬೇಡ್ವೋ? ಆಹಾರಕ್ಕಾಗಿ ಪ್ರಾಣಿ ಪಕ್ಷಿಗಳನ್ನು ಕೊಲ್ಲುವುದು ಸರೀನಾ? ಎನ್ನುವುದು ಹಲವು ವರ್ಷಗಳಿಂದ ನಡೆಯುತ್ತಿರುವ ಚರ್ಚೆ. ಸಸ್ಯಹಾರಿಗಳು ಮಾಂಸಾಹಾರಿಗಳನ್ನು ದ್ವೇಷಿಸುವುದು. ನಾವು ಮಾಂಸ ತಿನ್ನುವುದರಿಂದ ನಿಮಗೇನು ಕಷ್ಟು? ಎಂದು ಮಾಂಸಾಹಾರಿಗಳು ಕೇಳುತ್ತಲೇ ಇರುತ್ತಾರೆ.

ಸಾಕಷ್ಟು ಜನ ನಟ-ನಟಿಯರು ಸಸ್ಯಹಾರ ಉತ್ತಮ. ನಾವು ಮೊದಲು ಮಾಂಸಾಹಾರಿ ಆಗಿದ್ದೆವು. ಬಳಿಕ ಸಸ್ಯಹಾರ ಮಾತ್ರ ಸೇವಿಸಲು ಪ್ರಾರಂಭಿಸಿದೆವು ಎಂದು ಹೇಳುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ನಟ ಉಪೇಂದ್ರ ಮಾಂಸಾಹಾರ ಸೇವನೆ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದರು. ನಾನು ಮೊದಲಿನಿಂದಲೂ ಸಸ್ಯಹಾರಿ. ಅದೇ ಆರೋಗ್ಯಕ್ಕೆ ಉತ್ತಮ. ಸಸ್ಯಹಾರದಲ್ಲೇ ಪ್ರೋಟಿನ್ ಇದೆ. ಪ್ರೋಟಿನ್‌ಗಾಗಿ ಮಾಂಸ ತಿನ್ನುತ್ತೇವೆ ಎನ್ನುವುದು ತಪ್ಪು ಎಂದಿದ್ದರು.

Actress Adah Sharma fires on Those Who Argued On Behalf Of Non-Vegetarian Food

ಇದೀಗ ಬಹುಭಾಷಾ ನಟಿ ಅದಾ ಶರ್ಮಾ ಕೂಡ ಮಾಂಸಾಹಾರ ಸೇವಿಸುವವರ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ಸಸ್ಯಹಾರವೇ ಶ್ರೇಷ್ಠ. ಶಿಲಾಯುಗದ ಕಾಲದಲ್ಲಿ ಮನುಷ್ಯ ಮಾಂಸ ಸೇವಿಸುತ್ತಿದ್ದ ಎಂದರೆ ನೀವು ಅದೇ ಕಾಲಕ್ಕೆ ಹೋಗಿ ಅವರಂತೆ ಜೀವಿಸಿ ಎಂದು ಟಾಂಗ್ ಕೊಟ್ಟಿದ್ದಾರೆ. 'ದಿ ಕೇರಳ ಸ್ಟೋರಿ' ನಟಿಯ ಹೇಳಿಕೆ ವೈರಲ್ ಆಗುತ್ತಿದೆ.

ನಟಿ ಅದಾ ಶರ್ಮಾ ಇತ್ತೀಚೆಗೆ ಪೇಟಾ ಇಂಡಿಯಾದ ಪ್ರಚಾರಕ್ಕಾಗಿ ಕೈಜೋಡಿಸಿದ್ದಾರೆ. ಪ್ರಾಣಿಗಳ ರಕ್ಷಣೆಗಾಗಿ ಹೋರಾಟ ಮಾಡುತ್ತಿದ್ದಾರೆ. ಟೆಲ್ಲಿ ಚಕ್ಕರ್‌ಗೆ ನೀಡಿದ ಸಂದರ್ಶನದಲ್ಲಿ, ಅದಾ ಅವರು ತಮ್ಮ ಹೋಮೋ ಸೇಪಿಯನ್ ಪೂರ್ವಜರಿಂದ ಪ್ರಾರಂಭಿಸಿದ ಆಹಾರ ಸರಪಳಿಯನ್ನು ಅನುಸರಿಸುತ್ತಿರುವುದಾಗಿ ಹೇಳುವವರ ವಿರುದ್ಧ ಗರಂ ಆಗಿದ್ದಾರೆ.

ಈ ರೀತಿ ವಾದಿಸುವವರು ಗುಹೆಗಳಿಗೆ ಹೋಗಬೇಕು. ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ಆದರೆ ನೀವು ಆ ಶಿಲಾಯುಗದ ದಿನಗಳಲ್ಲಿ ಇದ್ದರೆ, ಗುಹೆಗಳಲ್ಲಿ ವಾಸಿಸುತ್ತಿದ್ದರೆ. ಆಗಿನ ಕಾಲದ ಆಯುಧಗಳನ್ನು ಹಿಡಿದು ತಿರುಗಾಡುತ್ತಿದ್ದರೆ ನಿಮಗೆ ಬೇಕಾದ ಪ್ರಾಣಿಯನ್ನು ಬೇಟೆಯಾಡಿ ತಿನ್ನಬಹುದು. ಮಾಂಸವನ್ನು ಹಸಿಯಾಗಿ ಅಥವಾ ಹುರಿದು ತಿನ್ನಬಹುದು. ಆದರೆ ಈಗಲೂ ಮಾಂಸಾಹಾರವನ್ನು ತಿನ್ನಬೇಕಾದರೆ ಆ ಕಾಲದಲ್ಲಿ ಇದ್ದಂತೆ ಗುಹೆಗಳಲ್ಲಿಯೇ ಇದ್ದು ಬೇಟೆಯಾಡಿ ತಿನ್ನಬೇಕು" ಎಂದು ಟೀಕಿಸಿದ್ದಾರೆ.

"ಎಸಿ ಕಾರುಗಳಲ್ಲಿ ಮತ್ತು ಎಸಿ ರೆಸ್ಟೋರೆಂಟ್‌ಗಳಲ್ಲಿ ಕುಳಿತು ಪ್ರಾಣಿಯನ್ನು ಕತ್ತರಿಸಬಾರದು, ಚರ್ಮ ಸುಲಿದು, ಹುರಿದು ತಟ್ಟೆಗಳಲ್ಲಿ ಇಟ್ಟುಕೊಂಡು ತಿನ್ನಬಾರದು" ಎಂದು ಅದಾ ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಅದಾ ಶರ್ಮಾ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಪ್ರಾಣಿಗಳನ್ನು ತಿನ್ನದಿದ್ದರೆ ಹೆಚ್ಚಿನ ಪ್ರೋಟೀನ್ ಸಿಗುವುದಿಲ್ಲ ಎಂದು ಮಾಂಸಾಹಾರಿಗಳಿಂದ ತೂರಿ ಬರುವ ಪ್ರಶ್ನೆಗೂ ಆಕೆ ಉತ್ತರಿಸಿದ್ದಾರೆ.

"ಸುಮ್ಮನೆ ಪ್ರೋಟಿನ್ ಅದು, ಇದು ಎಂದು ಸಬೂಬು ಹೇಳಬೇಡಿ. ಅದಕ್ಕಾಗಿ ಸಾಕಷ್ಟು ಪರ್ಯಾಯ ಆಹಾರಗಳಿವೆ. ಅದನ್ನು ಸೇವಿಸಿದರೂ ಸಾಕು. ಉದಾಹರಣೆಗೆ ನಾನು ಸಸ್ಯಹಾರಿಯಾಗಿ ಎಷ್ಟು ಗಟ್ಟಿಯಾದ ಮಸಲ್ಸ್ ಹೊಂದಿದ್ದೇನೆ ನೋಡಿ ಎಂದಿದ್ದಾರೆ.

ಕಳೆದ ವರ್ಷ ಅದಾ ಶರ್ಮಾ ನಟಿಸಿದ 'ದಿ ಕೇರಳ ಸ್ಟೋರಿ' ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆದರೆ ಅದೇ ಹಾದಿಯಲ್ಲಿ ಈ ವರ್ಷ ಬಂದ 'ಬಸ್ತಾರ್: ನಕ್ಸಲ್ ಸ್ಟೋರಿ' ಸಿನಿಮಾ ಸದ್ದು ಮಾಡಲಿಲ್ಲ. 'ಸಿಡಿ: ಕ್ರಿಮಿನಲ್ or ಡೆವಿಲ್' ಎನ್ನುವ ಮತ್ತೊಂದು ಸಿನಿಮಾ ಕೂಡ ಇತ್ತೀಚೆಗೆ ಬಿಡುಗಡೆಯಾಯಿತು. 'ದಿ ಗೇಮ್ ಆಫ್ ಗಿರ್ಗಿಟ್' ಎನ್ನುವ ಇನ್ನೊಂದು ಚಿತ್ರದಲ್ಲಿ ಆಕೆ ನಟಿಸುತ್ತಿದ್ದಾರೆ.

More from Filmibeat

English summary
Adah Sharma opens up On Argument Over Non-Vegetarian Food
Read more about: bollywood adah sharma
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X